Home ಕ್ರೈಂ ನ್ಯೂಸ್ ಜಂತರ್ ಮಂತರ್ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳಿಗಿಂತ ‘ಪಂಕ್ಚರ್ ಹಾಕುವವರೇ’ ಹೆಚ್ಚಿದ್ದರು: ಬಿಜೆಪಿ ಮುಖಂಡ ರಮೇಶ್ ಬಿಧೂರಿ ವಿವಾದಾತ್ಮಕ ಹೇಳಿಕೆ
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಜಂತರ್ ಮಂತರ್ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳಿಗಿಂತ ‘ಪಂಕ್ಚರ್ ಹಾಕುವವರೇ’ ಹೆಚ್ಚಿದ್ದರು: ಬಿಜೆಪಿ ಮುಖಂಡ ರಮೇಶ್ ಬಿಧೂರಿ ವಿವಾದಾತ್ಮಕ ಹೇಳಿಕೆ

Share
ವಿದ್ಯಾರ್ಥಿ
Share

ನವದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಕುರಿತು ಬಿಜೆಪಿ ಮಾಜಿ ಸಂಸದ ರಮೇಶ್ ಬಿಧೂರಿ ನೀಡಿರುವ ಹೇಳಿಕೆ ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ. ಪ್ರತಿಭಟನಾ ಸ್ಥಳದಲ್ಲಿ ನೈಜ ವಿದ್ಯಾರ್ಥಿಗಳಿಗಿಂತ “ಪಂಕ್ಚರ್ ಹಾಕುವವರು” ಮತ್ತು “ಕೀಲಿ ಕೈ ಮಾಡುವವರೇ” ಹೆಚ್ಚಾಗಿದ್ದರು ಎಂದು ಅವರು ಲೇವಡಿ ಮಾಡಿದ್ದಾರೆ.

ಜೆನ್ ಜಿ (Gen Z) ಯುವಕರನ್ನು ನೀಟ್ (NEET) ಪರೀಕ್ಷೆಯ ನೆಪದಲ್ಲಿ ಕೆಲವು ಸಮಾಜಘಾತುಕ ಶಕ್ತಿಗಳು ದಾರಿ ತಪ್ಪಿಸಿ ದೇಶದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿವೆ ಎಂದು ಬಿಧೂರಿ ಆರೋಪಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ನಿಂದನೀಯ ಭಾಷೆ ಬಳಸಿದವರು ವಿದ್ಯಾರ್ಥಿಗಳಾಗಿರಲು ಸಾಧ್ಯವಿಲ್ಲ, ಅವರು ಪಂಕ್ಚರ್ ಹಾಕುವವರ ಕುಟುಂಬದವರಾಗಿರಬಹುದು ಎಂದು ಕಿಡಿಕಾರಿದ್ದಾರೆ.

ಅಲ್ಲದೆ, ದಾರಿ ತಪ್ಪಿರುವ ಯುವಜನತೆಗೆ ಕಳೆದ 12 ವರ್ಷಗಳ ಆಡಳಿತ ಮತ್ತು ಅದಕ್ಕೂ ಮೊದಲಿಗಿದ್ದ ವ್ಯತ್ಯಾಸವನ್ನು ತಿಳಿಸಿಕೊಡುವ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles