Home ದಾವಣಗೆರೆ ನಾನು ಸಿಎಂ ಆಗಬೇಕೆಂಬುದು ಶ್ರೀಗಳ ಆಸೆಯಾಗಿತ್ತು, ವೀರಶೈವ-ಲಿಂಗಾಯತ ಗೊಂದಲಕ್ಕೆ ರಂಭಾಪುರಿ ಶ್ರೀಗಳಲ್ಲಿ ಕ್ಷಮೆ ಕೇಳಿದ್ದೆ: ಡಿ. ಕೆ. ಶಿವಕುಮಾರ್!
ದಾವಣಗೆರೆನವದೆಹಲಿಬೆಂಗಳೂರು

ನಾನು ಸಿಎಂ ಆಗಬೇಕೆಂಬುದು ಶ್ರೀಗಳ ಆಸೆಯಾಗಿತ್ತು, ವೀರಶೈವ-ಲಿಂಗಾಯತ ಗೊಂದಲಕ್ಕೆ ರಂಭಾಪುರಿ ಶ್ರೀಗಳಲ್ಲಿ ಕ್ಷಮೆ ಕೇಳಿದ್ದೆ: ಡಿ. ಕೆ. ಶಿವಕುಮಾರ್!

Share
ಡಿ. ಕೆ. ಶಿವಕುಮಾರ್
Share

ಬೆಂಗಳೂರು: “ಧರ್ಮ ಎಂದರೆ ಪೂಜೆ-ಪುನಸ್ಕಾರವಲ್ಲ. ಸತ್ಯ, ಶಿಸ್ತು, ನೀತಿ, ಪ್ರಾಮಾಣಿಕತೆ. ಜೊತೆಗೆ ಎಲ್ಲರನ್ನು ಸಮನಾಗಿ ಕಾಣುವ ಮಾನವೀಯತೆಯೇ ನಿಜವಾದ ಧರ್ಮ” ಎಂದು ಸಿಎಂ ಡಿ. ಕೆ. ಶಿವಕುಮಾರ್ ಅವರು ಹೇಳಿದರು.

ಬೆಂಗಳೂರಿನ ಭಾರತ್ ನಗರದಲ್ಲಿ ಭಾನುವಾರ ನಡೆದ ಧರ್ಮಜಾಗೃತಿ ಸಮಾರಂಭವನ್ನು ಸಿಎಂ ಡಿ ಕೆ ಶಿವಕುಮಾರ್ ಅವರು ಉದ್ಘಾಟಿಸಿ ಮಾತನಾಡಿದರು.

“ಮಾನವ ಧರ್ಮಕ್ಕೆ ಜಯವಾಗಲಿ, ಮಾನವ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ. ಜೊತೆಗೆ ಸಾಹಿತ್ಯ, ಸಂಸ್ಕೃತಿ ವೃದ್ಧಿಯಾಗಬೇಕು. ಇದನ್ನು ಪಾಲನೆ ಮಾಡಬೇಕು ಎಂದು ವೀರ ಗಂಗಾಧರ ಅಜ್ಜಯ್ಯ ಅವರು ನಮಗೆ ಅತ್ಯುತ್ತಮ ಮಾರ್ಗ ಹಾಕಿಕೊಟ್ಟಿದ್ದಾರೆ.‌ ನಾವೆಲ್ಲರೂ ಈ ಮಾರ್ಗದಲ್ಲಿ ನಡೆಯಬೇಕು” ಎಂದರು.

“ವೀರಶೈವ ಧರ್ಮದ ವಿಚಾರದಲ್ಲಿ ಹಿಂದೆ ನಮ್ಮ ಸರ್ಕಾರದ ಅವಧಿಯಲ್ಲಿ ಒಂದಷ್ಟು ಗೊಂದಲ ಉಂಟಾಗಿತ್ತು. ಆ ಸಂದರ್ಭದಲ್ಲಿ ನಾನು ಲಕ್ಷ್ಮೇಶ್ವರದಲ್ಲಿದ್ದ ರಂಭಾಪುರಿ ಶ್ರೀಗಳ ಬಳಿಗೆ ತೆರಳಿ, ನಮ್ಮ ಪಕ್ಷದಿಂದ ತಪ್ಪಾಗಿದೆ ಎಂದು ಕ್ಷಮೆಯಾಚಿಸಿದ್ದೆ. ಆಗ ಹಲವರು ನನ್ನನ್ನು ಟೀಕಿಸಿದರು. ಆದರೆ ಅಂದು ನಾವು ಮಾಡಿದ ಕೆಲಸ ಉಳಿದುಕೊಂಡಿದೆ. ನಾನು ಕ್ಷಮೆ ಕೇಳಿದ್ದನ್ನು ಇಂದು ವಿರೋಧಿಗಳು ಸಹ ಒಪ್ಪಿಕೊಂಡಿದ್ದಾರೆ” ಎಂದು ಸ್ಪಷ್ಟಪಡಿಸಿದರು.

“ಕೆಲವರು ಧರ್ಮ‌ ಬೇಡ ಎಂದು ತಮ್ಮದೇ ನಂಬಿಕೆಯ ಮಾರ್ಗದಲ್ಲಿ ನಡೆಯುತ್ತಾರೆ. ಅವರು ಹುಟ್ಟಿದಾಗ ಉಪನಯನ, ನಾಮಕರಣ ಸೇರಿದಂತೆ ಹಲವಾರು ಧಾರ್ಮಿಕ ಕಾರ್ಯಗಳು ನಡೆದಿರುತ್ತವೆ. ಅದೇ ರೀತಿ ಭಿನ್ನ ಹಾದಿಯಲ್ಲಿ ನಡೆಯುವವರು ಸತ್ತಾಗ ಅವರನ್ನು ಹೂಳಬೇಕೋ, ಸುಡಬೇಕೋ ಎಂದು ತೀರ್ಮಾನ ಮಾಡುವುದು ಧರ್ಮ. ಯಾವುದೇ ಧರ್ಮವಾದರೂ ಅದನ್ನು ಬಿಡಲು ಸಾಧ್ಯವಿಲ್ಲ.‌ ದೇವನೊಬ್ಬ ನಾಮ ಹಲವು” ಎಂದು ಹೇಳಿದರು.

ನನಗೆ ಮುಖ್ಯಮಂತ್ರಿ ಸ್ಥಾನ; ರಂಭಾಪುರಿ ಶ್ರೀಗಳ ಆಸೆಯಾಗಿತ್ತು

“ರಂಭಾಪುರಿ ಶ್ರೀಗಳು ಗಂಗಾಧರ ಅಜ್ಜಯ್ಯ ಅವರಂತೆ ನನ್ನ ಮೇಲೆ ಅಭಯವನ್ನಿಟ್ಟಿದ್ದರು. ನನ್ನನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ನೋಡಬೇಕು ಎಂದು ಆಸೆಯನ್ನಿಟ್ಟುಕೊಂಡಿದ್ದ ಪ್ರಮುಖರು.‌ ಮಠದಲ್ಲಿಯೇ ಅವರ ದರ್ಶನ ಮಾಡಬೇಕು ಎಂದುಕೊಂಡಿದ್ದೆ. ಬೆಂಗಳೂರಿನಲ್ಲೇ ಅವರ ಆಶೀರ್ವಾದ ದೊರಕಿದೆ” ಎಂದು ಹೇಳಿದರು.

ವೀರಶೈವ- ಲಿಂಗಾಯತ ಧರ್ಮ ಗೊಂದಲ; ಶ್ರೀಗಳ ಕ್ಷಮೆ ಕೇಳಿದ್ದೆ

“ವೀರಶೈವ ಧರ್ಮ ವಿಚಾರದಲ್ಲಿ ಈ ಹಿಂದೆ ನಮ್ಮ‌ ಸರ್ಕಾರ ಇದ್ದಾಗ ಒಂದಷ್ಟು ಗೊಂದಲ ಉಂಟಾಗಿತ್ತು. ಆಗ ನಾನು ಲಕ್ಷ್ಮೇಶ್ವದಲ್ಲಿದ್ದ ರಂಭಾಪುರಿ ಶ್ರೀಗಳ ಬಳಿಗೆ ಹೋಗಿ ನಮ್ಮ ಪಕ್ಷದಿಂದ ತಪ್ಪಾಗಿದೆ ಎಂದು ಕ್ಷಮೆ ಕೇಳಿದ್ದೆ. ಆಗ ಬೇಕಾದಷ್ಟು ಜನ ಟೀಕೆ ಮಾಡಿದರು. ‌ಆದರೆ ಅಂದು ನಾವು ಮಾಡಿದ ಕೆಲಸ ಉಳಿದುಕೊಂಡಿದೆ.‌ ನಾನು ಕ್ಷಮಾಪಣೆ ಕೇಳಿದ್ದನ್ನ ವಿರೋಧಿಗಳೂ ಒಪ್ಪಿಕೊಂಡಿದ್ದಾರೆ” ಎಂದರು.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles