ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Davanagere: ಸೌಮ್ಯಳಿಗೆ ಸೆಲ್ಯೂಟ್: ಎಸ್ಪಿ ಉಮಾ ಪ್ರಶಾಂತ್ ಸೇರಿ ಹಲವರಿಂದ ಗೌರವಪೂರ್ವಕ ನಮನ, ಶ್ವಾನದ ಸಾಧನೆ ಗುಣಗಾನ

On: September 2, 2023 9:57 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:02-09-2023

ದಾವಣಗೆರೆ (Davanagere): ದಾವಣಗೆರೆ (Davanagere) ಜಿಲ್ಲಾ ಪೊಲೀಸ್ ಇಲಾಖೆಯ ಶ್ವಾನ ದಳದಲ್ಲಿದ್ದ ಸ್ಫೋಟಕ ಪತ್ತೆ ವಿಭಾಗದ ಶ್ವಾನ ಸೌಮ್ಯ ಅನಾರೋಗ್ಯದ ಹಿನ್ನೆಲೆಯಲ್ಲಿ ಮೃತಪಟ್ಟಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಗೌರವ ವಂದನೆ ಸಲ್ಲಿಸಿದರು.

ಈ ಸುದ್ದಿಯನ್ನೂ ಓದಿ: 

Explosive Detection Expertise: ಬೆರಗಾಗುವಂಥ ಟ್ರ್ಯಾಕ್ ರೆಕಾರ್ಡ್: ಸ್ಫೋಟಕ ಪತ್ತೆ, ವಿಧ್ವಂಸಕ ಕೃತ್ಯ ತಡೆ, ಪ್ರಧಾನಿ ಭೇಟಿ ಸ್ಥಳ ತಪಾಸಣೆ ನಿಪುಣೆ ಸೌಮ್ಯ ಈಗ ನೆನಪಷ್ಟೇ……!

ಶ್ವಾನದ ಪಾರ್ಥೀವ ಶರೀರಕ್ಕೆ ಹೂವಿನ ಹಾರವಿಟ್ಟು, ಸೆಲ್ಯೂಟ್ ಹೊಡೆಯುವ ಮೂಲಕ ನಮನ ಸಲ್ಲಿಸಿದರು.

ಎಸ್ಪಿ ಉಮಾ ಪ್ರಶಾಂತ್ ಗೌರವ ವಂದನೆ ಸಲ್ಲಿಕೆ
ಎಸ್ಪಿ ಉಮಾ ಪ್ರಶಾಂತ್ ಗೌರವ ವಂದನೆ ಸಲ್ಲಿಕೆ

ದಾವಣಗೆರೆ (Davanagere) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಆವರಣದಲ್ಲಿ ಶ್ವಾನದ ಮೃತದೇಹ ಇಟ್ಟು ಗಾಳಿಯಲ್ಲಿ ಗುಂಡು ಹೊಡೆದು ಸಕಲ ಸರ್ಕಾರಿ ಗೌರವಗಳೊಂದಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಸೌಮ್ಯಳಿಗೆ ಭಾವಪೂರ್ಣ ವಿದಾಯ
ಸೌಮ್ಯಳಿಗೆ ಭಾವಪೂರ್ಣ ವಿದಾಯ

ಉಮಾ ಪ್ರಶಾಂತ್ ಅವರು, ಶ್ವಾನದ ಸಾಧನೆ ಬಗ್ಗೆ ಮಾಹಿತಿ ಪಡೆದುಕೊಂಡರು. ಪೊಲೀಸ್ ಇಲಾಖೆಗೆ ಅನನ್ಯ ಸೇವೆ ಸಲ್ಲಿಸಿದ ಸೌಮ್ಯ ಕಳೆದುಕೊಂಡಿದ್ದು, ಇಲಾಖೆಗೆ ತುಂಬಲಾರದ ನಷ್ಟ ಎಂದು ಹೇಳಿದರು. ಈ ವೇಳೆ ಡಿವೈಎಸ್ಪಿ, ಎಸ್ಐ, ಪೊಲೀಸ್ ಸಿಬ್ಬಂದಿ ಹಾಜರಿದ್ದರು. ಅವರೂ ಸಹ ಶ್ವಾನಕ್ಕೆ ಗೌರವ ಸಲ್ಲಿಸಿದರು.

ತುಂಗಾ ಸಾವಿನ ನಂತರ ಮತ್ತೊಂದು ಶ್ವಾನ ಸಾವು ಕಂಡಿದೆ. ಪೊಲೀಸ್ ಇಲಾಖೆಯಲ್ಲಿ ದರೋಡೆ, ಕೊಲೆ ಸೇರಿದಂತೆ ಹಲವು ಪ್ರಕರಣಗಳ ಬೇಧಿಸಿದ್ದ ತುಂಗಾ ಅಕಾಲಿಕ ಸಾವಿಗೀಡಾಗಿತ್ತು. ಈಗ ಸೌಮ್ಯ ಕೂಡ ಸಾವನ್ನಪ್ಪಿದ್ದು, ಪೊಲೀಸ್ ಶ್ವಾನ ದಳದ ಎರಡನೇ ಅತ್ಯುತ್ತಮ ಕಾರ್ಯವೈಖರಿಯ ಶ್ವಾನ ಇಲ್ಲವಂತಾಗಿದೆ.

ಇನ್ನು ಈ ಶ್ವಾನ ನೋಡಿಕೊಳ್ಳುತ್ತಿದ್ದ ಪ್ರಕಾಶ್ ಅವರೂ ಸಹ ಈ ಶ್ವಾನದ ಉಳಿವಿಗೆ ಸಾಕಷ್ಟು ಶ್ರಮ ವಹಿಸಿದ್ದರು. ಇದಕ್ಕಾಗಿ ಬೆಂಗಳೂರಿಗೂ ಸಹ ಶ್ವಾನ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದರು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment