Home ದಾವಣಗೆರೆ ಭದ್ರಾ ಡ್ಯಾಂ ಇಂದಿನ ನೀರಿನ ಮಟ್ಟ 156 ಅಡಿಗೆ ಏರಿಕೆ: ಜಲಾಶಯದ ಒಳಹರಿವಿನಲ್ಲಿ ಹೆಚ್ಚಳ, ಎಷ್ಟಿದೆ ಗೊತ್ತಾ?
ದಾವಣಗೆರೆಬೆಂಗಳೂರು

ಭದ್ರಾ ಡ್ಯಾಂ ಇಂದಿನ ನೀರಿನ ಮಟ್ಟ 156 ಅಡಿಗೆ ಏರಿಕೆ: ಜಲಾಶಯದ ಒಳಹರಿವಿನಲ್ಲಿ ಹೆಚ್ಚಳ, ಎಷ್ಟಿದೆ ಗೊತ್ತಾ?

Share
ಭದ್ರಾ ಡ್ಯಾಂ
Share

ಶಿವಮೊಗ್ಗ/ದಾವಣಗೆರೆ: ಮಲೆನಾಡು ಹಾಗೂ ಜಲಾನಯನ ಪ್ರದೇಶಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಲಕ್ಕವಳ್ಳಿಯ ಭದ್ರಾ ಡ್ಯಾಂಗೆ ಬರುತ್ತಿರುವ ಒಳಹರಿವಿನಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಇಂದು (ಜುಲೈ 31, 2026) ಬೆಳಿಗ್ಗೆ 6 ಗಂಟೆಯ ಅಧಿಕೃತ ವರದಿಯಂತೆ ಜಲಾಶಯದ ನೀರಿನ ಮಟ್ಟ 156.00 ಅಡಿ ತಲುಪಿದೆ.

ಇಂದಿನ ಜಲಾಶಯದ ನೀರಿನ ಮಟ್ಟ: 

  • ಗರಿಷ್ಠ ನೀರಿನ ಮಟ್ಟ (FRL): 186.00 ಅಡಿ (2158.0 MSL)

  • ಒಟ್ಟು ಗರಿಷ್ಠ ಸಂಗ್ರಹ ಸಾಮರ್ಥ್ಯ: 71.535 TMC

  • ಇಂದಿನ ನೀರಿನ ಮಟ್ಟ: 156.00 ಅಡಿ (2128.00 MSL)

  • ಇಂದಿನ ನೀರು ಶೇಖರಣೆ: 39.303 TMC

  • ಒಳಹರಿವು (Inflow): 9,394 ಕ್ಯೂಸೆಕ್

  • ಹೊರಹರಿವು (Outflow): 181 ಕ್ಯೂಸೆಕ್ (ರಿವರ್ ಸ್ಲೂಯಿಸ್ ಮೂಲಕ 100 ಕ್ಯೂಸೆಕ್ ಹಾಗೂ ಬಾಷ್ಪೀಕರಣ/ಆವಿ 81 ಕ್ಯೂಸೆಕ್)

  • ನಾಲೆಗಳ ಹರಿವು: ಬಲದಂಡೆ ನಾಲೆ (RBC) ಮತ್ತು ಎಡದಂಡೆ ನಾಲೆ (LBC) ಯಲ್ಲಿ ಹರಿವು ಸ್ಥಗಿತಗೊಳಿಸಲಾಗಿದೆ (0 ಕ್ಯೂಸೆಕ್).

ಕಳೆದ ವರ್ಷಕ್ಕೆ ಹೋಲಿಸಿದರೆ:

ಕಳೆದ ವರ್ಷ ಇದೇ ದಿನಾಂಕದಂದು (31 ಜುಲೈ) ಭದ್ರಾ ಜಲಾಶಯದ ನೀರಿನ ಮಟ್ಟ 180.03 ಅಡಿ ಇತ್ತು ಹಾಗೂ 64.478 TMC ನೀರು ಶೇಖರಣೆಯಾಗಿತ್ತು. ಅಲ್ಲದೆ ಜಲಾಶಯಕ್ಕೆ 16,694 ಕ್ಯೂಸೆಕ್ ಒಳಹರಿವು ಹಾಗೂ ಅಷ್ಟೇ ಪ್ರಮಾಣದ ಹೊರಹರಿವು ದಾಖಲಾಗಿತ್ತು.

Share

Leave a comment

Leave a Reply

Your email address will not be published. Required fields are marked *