ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಶ್ವಾಸನಾಳದಲ್ಲಿ ಸಿಲುಕಿದ್ದ ಅಡಿಕೆ ತುಂಡುಗಳು: ಜಸ್ಟ್ 7 ನಿಮಿಷದಲ್ಲಿ ಮುಗಿದ ಶಸ್ತ್ರಚಿಕಿತ್ಸೆ!

On: January 2, 2025 11:30 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:02-01-2025

ಬೆಂಗಳೂರು, ವೈಟ್ ಫೀಲ್ದ್ : ಶ್ವಾಸನಾಳದಲ್ಲಿ ಸಿಲುಕಿಕೊಂಡಿದ್ದ ಅಡಿಕೆ ತುಂಡುಗಳನ್ನು ಕ್ರಯೋ ಪ್ರೋಬ್ ಎಂಬ ಅತ್ಯಾಧುನಿಕ ಉಪಕರಣ ಬಳಸಿ ಕೇವಲ 7 ನಿಮಿಷದಲ್ಲಿ ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆಯಲಾಗಿದೆ. ಕ್ರಯೋ ಪ್ರೋಬ್ ಬಳಕೆ ಮಾಡದೇ ಇದ್ದಿದ್ದರೆ ಈ ಚಿಕಿತ್ಸೆಗೆ ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ತಗಲುತ್ತಿತ್ತು.

81 ವರ್ಷದ ವೃದ್ದನಿಗೆ ಕಳೆದ ಮೂರು ದಿನಗಳಿಂದ ನಿರಂತರ ಕೆಮ್ಮು ಹಾಗೂ ಎದೆ ಭಾಗದಲ್ಲಿ ನೋವು ಕಾಣಿಸಿಕೊಂಡಿದ್ದ ಕಾರಣ ಮಧ್ಯ ರಾತ್ರಿ ಬೇರೆ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಲಾಗಿತ್ತು. ಆದ್ರೆ ಅಲ್ಲಿ ಹೃದಯಕ್ಕೆ ಸಂಭಂಧಿಸಿದ ಪರೀಕ್ಷೆಗಳನ್ನು ನಡೆಸಿ ಯಾವುದೇ ಸಮಸ್ಯೆ ಇಲ್ಲ ಎಂದು ವರದಿ ನೀಡಿ ವಾಪಸ್‌ ಮನೆಗೆ ಕಳುಹಿಸಿಕೊಡಲಾಗಿತ್ತು. ಆದ್ರೆ ವೃದ್ದನಿಗೆ ನೋವು ಮಾತ್ರ ಕಮ್ಮಿಯಾಗಿರಲಿಲ್ಲ.

ಬಳಿಕ ವೈಟ್‌ ಫೀಲ್ಡ್‌ ನಲ್ಲಿರುವ ಮೆಡಿಕವರ್‌ ಆಸ್ಪತ್ರೆಯ ಇಂಟರ್ವೆನ್ಷನಲ್‌ ಶ್ವಾಸಕೋಶಶಾಸ್ತ್ರಜ್ಞ ಡಾ . ಮಂಜುನಾಥ್‌ ಬಿ ಜಿ ರವರನ್ನು ಭೇಟಿ ಮಾಡಿ, ವೃದ್ದ ತನ್ನ ನೋವಿಗೆ ನಿಜವಾದ ಕಾರಣವೇನೆಂದು ತಿಳಿದುಕೊಂಡಿದ್ದಾರೆ.

ವೃದ್ದನಿಗೆ ಪ್ರತಿ ದಿನ ಮಲಗುವಾಗ ಬಾಯಿಯಲ್ಲಿ ಅಡಿಕೆಯನ್ನು ಇಟ್ಟುಕೊಂಡು ಮಲಗುವ ಅಭ್ಯಾಸವಿತ್ತು. ನಿದ್ದೆ ವೇಳೆ ಅಡಿಕೆಯ ತುಂಡುಗಳು ಶ್ವಾಸಕೋಶದೊಳಗಡೆ ಹೋಗಿತ್ತು. ಇದರಿಂದ ಅವರಿಗೆ ಉಸಿರಾಟಕ್ಕೆ ತೊಂದರೆ ಶುರುವಾಗಿತ್ತು.
ತಕ್ಷಣ ಅವರಿಗೆ ಆಕ್ಸಿಜನ್ ನೀಡಿ ಎಕ್ಸ್ ರೇ ತೆಗೆದಾಗ ಶ್ವಾಸಕೋಶದ ಕೆಳಗಿಳ ಪದರ ಸಂಪೂರ್ಣವಾಗಿ ಹದಗೆಟ್ಟಿರೋದು ತಿಳಿದು ಬಂದಿತ್ತು.ಕೂಡಲೇ ಅವರನ್ನು ಅಪರೇಷನ್ ಥಿಯೇಟರ್ ಕರೆದೊಯ್ದು, ಲಾರಿಂಜಿಯಲ್ ಮಾಸ್ಕ್ ಏರ್ವೇ ಬಳಸಿ
ಶಸ್ತ್ರ ಚಿಕಿತ್ಸೆ ಶುರು ಮಾಡಲಾಯಿತು.

ಶಸ್ತ್ರಚಿಕಿತ್ಸೆ ವೇಳೆ ಎಡ ಮುಖ್ಯ ಶ್ವಾಸನಾಳ ಸಂಪೂರ್ಣವಾಗಿ ಬ್ಲಾಕ್ ಆಗಿರೋದು ಗೊತ್ತಾಗಿದೆ. 1.7 mm ಸೈಜ್ ನ ಕ್ರಯೋ ಪ್ರೋಬ್ ಉಪಕರಣದ ಸಹಾಯದಿಂದ ಅಡಿಕೆ ತುಂಡುಗಳನ್ನು ಕೇವಲ 7 ನಿಮಿಷದಲ್ಲಿ ಸಂಪೂರ್ಣವಾಗಿ ಹೊರತೆಗೆಯವಲ್ಲಿ ಶ್ವಾಸಕೋಶಶಾಸ್ತ್ರಜ್ಞ ಡಾ . ಮಂಜುನಾಥ್‌ ಬಿ ಜಿ ಯಶಸ್ವಿಯಾಗಿದ್ದಾರೆ .

ಅತ್ಯಾಧುನಿಕ ಉಪಕರಣ ಬಳಕೆಯಿಂದ ರೋಗಿಗೆ ಅನಗತ್ಯವಾಗಿ ಸಿಟಿ ಸ್ಕ್ಯಾನ್ ಮಾಡುವ ಅವಶ್ಯಕತೆ ಇರೋದಿಲ್ಲ. ಗಂಟೆಗಟ್ಟಲೆ ರೋಗಿಗೆ ಅಪರೇಷನ್‌ ಮಾಡುವ ಅಗತ್ಯನೇ ಇರೋದಿಲ್ಲ ಎಂದು ಡಾ. ಮಂಜುನಾಥ್‌ ಅಭಿಪ್ರಾಯಪಟ್ಟಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment