Home ದಾವಣಗೆರೆ ದಾವಣಗೆರೆ ಪೊಲೀಸರ ಕಾರ್ಯವೈಖರಿಗೆ ಬಹುಪರಾಕ್: ಹ್ಯಾಟ್ಸ್ ಆಫ್ ಅಂತ ಹೇಳಿದ್ಯಾಕೆ ರಾಜ್ಯ ಡಿಜಿ-ಐಜಿಪಿ ಎಂ. ಎ. ಸಲೀಂ?
ದಾವಣಗೆರೆಕ್ರೈಂ ನ್ಯೂಸ್ಬೆಂಗಳೂರು

ದಾವಣಗೆರೆ ಪೊಲೀಸರ ಕಾರ್ಯವೈಖರಿಗೆ ಬಹುಪರಾಕ್: ಹ್ಯಾಟ್ಸ್ ಆಫ್ ಅಂತ ಹೇಳಿದ್ಯಾಕೆ ರಾಜ್ಯ ಡಿಜಿ-ಐಜಿಪಿ ಎಂ. ಎ. ಸಲೀಂ?

Share
ದಾವಣಗೆರೆ
Share

ದಾವಣಗೆರೆ: ದಾವಣಗೆರೆ ಜಿಲ್ಲಾ ಪೊಲೀಸ್ ಇಲಾಖೆಯ ಕಾರ್ಯವೈಖರಿ ಮತ್ತು ಕಾನೂನು ಸುವ್ಯವಸ್ಥೆ ಪಾಲನೆ ಅತ್ಯುತ್ತಮವಾಗಿದೆ ಎಂದು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಡಿಜಿ ಹಾಗೂ ಐಜಿಪಿ ಎಂ. ಎ. ಸಲೀಂ ಅವರು ಶ್ಲಾಘಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಜಿಲ್ಲೆಯಲ್ಲಿ ಐಜಿಪಿ ಹಾಗೂ ಎಸ್ಪಿ ಸೇರಿದಂತೆ ಪ್ರತಿಯೊಬ್ಬ ಅಧಿಕಾರಿಗಳು ಅತ್ಯಂತ ದಕ್ಷತೆಯಿಂದ ಕಾರ್ಯನಿರ್ವಹಿಸಿದ್ದಾರೆ. ಹಲವು ಪ್ರಮುಖ ಹಾಗೂ ಸವಾಲಿನ ಪ್ರಕರಣಗಳನ್ನು ಯಶಸ್ವಿಯಾಗಿ ಪತ್ತೆಹಚ್ಚುವ ಮೂಲಕ ಕಾನೂನು ಮತ್ತು ಸುವ್ಯವಸ್ಥೆಯನ್ನು ಗಟ್ಟಿಯಾಗಿ ಕಾಪಾಡಿದ್ದಾರೆ” ಎಂದು ಅಧಿಕಾರಿಗಳ ಕಾರ್ಯವೈಖರಿಯನ್ನು ಮೆಚ್ಚಿದರು.

ಬಾಡಿಗೆ ಮನೆಯ ನೆನಪು – ವಸತಿ ಗೃಹ ನಿರ್ಮಾಣದ ಭರವಸೆ:

“ದಾವಣಗೆರೆ ಜಿಲ್ಲೆಯಲ್ಲಿ ಐಜಿಪಿ ಮತ್ತು ಎಸ್ಪಿ ಅವರಿಗೆ ಅಧಿಕೃತ ವಸತಿ ಗೃಹಗಳು (ಕ್ವಾರ್ಟರ್ಸ್) ಇರಲಿಲ್ಲ. ಈ ಹಿಂದೆ ನಾನು ಇಲ್ಲೇ ಕಾರ್ಯನಿರ್ವಹಿಸುತ್ತಿದ್ದಾಗ ಬಾಡಿಗೆ ಮನೆಯಲ್ಲೇ ವಾಸವಿದ್ದೆ. ಈ ಸಮಸ್ಯೆಗೆ ಶೀಘ್ರದಲ್ಲೇ ಪರಿಹಾರ ಕಂಡುಕೊಳ್ಳಲಾಗುವುದು ಹಾಗೂ ತ್ವರಿತವಾಗಿ ವಸತಿ ಗೃಹ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗುವುದು” ಎಂದು ತಿಳಿಸಿದರು.

ಸೈಬರ್ ಹಾಗೂ ಸಂಘಟಿತ ಅಪರಾಧ ತಡೆಗೆ ಸೂಚನೆ:

ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಆಧುನಿಕ ಸವಾಲುಗಳನ್ನು ಎದುರಿಸಲು ಪೊಲೀಸ್ ಇಲಾಖೆ ಸಂಪೂರ್ಣ ಸಜ್ಜಾಗುತ್ತಿದೆ. ವಿಶೇಷವಾಗಿ ಸಂಘಟಿತ ಅಪರಾಧಗಳು (Organized Crime), ಸೈಬರ್ ಕ್ರೈಂ (Cyber Crime) ಹಾಗೂ ಆರ್ಥಿಕ ಅಪರಾಧಗಳನ್ನು (Economic Offences) ಶೂನ್ಯಕ್ಕೆ ತರಲು ಮತ್ತು ಅವುಗಳ ನಿಯಂತ್ರಣಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

Share

Leave a comment

Leave a Reply

Your email address will not be published. Required fields are marked *

Related Articles