SUDDIKSHANA KANNADA NEWS/ DAVANAGERE/ DATE:31-12-2024
ಮೊರಾದಾಬಾದ್: ಗೋ ಹತ್ಯೆ ಆರೋಪಿ, ಮಾಜಿ ದೇಹದಾರ್ಢ್ಯ ಪಟು ಉತ್ತರ ಪ್ರದೇಶದಲ್ಲಿ ಗುಂಪು ಹಲ್ಲೆಯ ನಂತರ ಸಾವು ಕಂಡಿದ್ದಾನೆ.
ಶಾಹಿದೀನ್ನನ್ನು ಗುಂಪು ದೊಣ್ಣೆಗಳಿಂದ ಥಳಿಸಿದ್ದರಿಂದ ಪ್ರಜ್ಞಾಹೀನನಾಗಿದ್ದ ಎಂದು ಆರೋಪಿಸಲಾಗಿದೆ. ಅಂತಿಮವಾಗಿ ಶಾಹಿದೀನ್ನನ್ನು ಪೊಲೀಸರು ಗುಂಪಿನಿಂದ ರಕ್ಷಿಸಿದರು. ಆದರೆ, ಚಿಕಿತ್ಸೆ ವೇಳೆ ಆತ ಮೃತಪಟ್ಟಿದ್ದಾನೆ.
ಮೊರಾದಾಬಾದ್ನಲ್ಲಿ ಗೋಹತ್ಯೆ ಶಂಕೆಯ ಮೇಲೆ ಗುಂಪೊಂದು ಥಳಿಸಿದ ಬಳಿಕ ಮೃತಪಟ್ಟಿದ್ದಾನೆ. ಅಸಲತ್ಪುರದ ನಿವಾಸಿ ಶಾಹಿದೀನ್ ಎಂಬುವವರ ಸಾವಿನಿಂದ ಸ್ಥಳದಲ್ಲಿ ಉದ್ವಿಗ್ನತೆ ಉಂಟು ಮಾಡಿತ್ತು. ಶಾಹಿದೀನ್ ಸಹೋದರನ ದೂರಿನ ಮೇರೆಗೆ ಪೊಲೀಸರು ದಾಳಿಕೋರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸೋಮವಾರ ಬೆಳಗ್ಗೆ ಕೆಲವು ವ್ಯಕ್ತಿಗಳು ಬಿಡಾಡಿ ಹಸುವನ್ನು ಕಡಿಯಲು ಯತ್ನಿಸುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಸ್ಥಳೀಯರು ಮಧ್ಯಪ್ರವೇಶಿಸುತ್ತಿದ್ದಂತೆ ಇಬ್ಬರು ಪರಾರಿಯಾಗಿದ್ದು, ಶಾಹಿದೀನ್ ಸಿಕ್ಕಿಬಿದ್ದಿದ್ದಾನೆ. ಜನಸಮೂಹವು ಆತನನ್ನು ದೊಣ್ಣೆಗಳಿಂದ ಹೊಡೆದು, ಒದೆಗಳ ಸುರಿಮಳೆಗೈದು, ಆತನನ್ನು ಪ್ರಜ್ಞಾಹೀನಗೊಳಿಸಿತು.
ಮಾಜಿ ದೇಹದಾರ್ಢ್ಯ ಪಟು ಶಾಹಿದೀನ್ ಅವರನ್ನು ಅಂತಿಮವಾಗಿ ಜನಸಮೂಹದಿಂದ ರಕ್ಷಿಸಿದ ಪೊಲೀಸರು ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ. ಬಳಿಕ ಅವರ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ಸ್ಥಳದಲ್ಲಿದ್ದ ರಾಷ್ಟ್ರೀಯ ಬಜರಂಗದಳ (ಮೀರತ್ ಪ್ರದೇಶ) ಅಧ್ಯಕ್ಷ ರೋಹನ್ ಸಕ್ಸೇನಾ, ವ್ಯಕ್ತಿ ಮಂಡಿ ಸಮಿತಿ ಪ್ರದೇಶದ ಬಳಿ ಹಸುವನ್ನು ಕಡಿಯುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ ಎಂದು ಹೇಳಿದ್ದಾರೆ. ಘಟನೆಯನ್ನು ಖಚಿತಪಡಿಸಿರುವ ಹಿರಿಯ ಪೊಲೀಸ್ ಅಧಿಕಾರಿ ರಣವಿಜಯ್ ಸಿಂಗ್, ಮೃತರ ಕುಟುಂಬದವರು ದೂರು ದಾಖಲಿಸಿದ್ದಾರೆ ಮತ್ತು
ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ.
“ಸೋಮವಾರ ಮುಂಜಾನೆ, ಹಸುವನ್ನು ಹತ್ಯೆ ಮಾಡಲಾಯಿತು. ಹಲವಾರು ವ್ಯಕ್ತಿಗಳು ಓಡಿಹೋದರು, ಆದರೆ ಒಬ್ಬ ಶಂಕಿತ ಸಿಕ್ಕಿಬಿದ್ದಿದ್ದಾನೆ. ಪೊಲೀಸರು ಮಧ್ಯಪ್ರವೇಶಿಸಿ ಆಸ್ಪತ್ರೆಗೆ ಕರೆದೊಯ್ಯುವ ಮೊದಲು ಕೋಪಗೊಂಡ ಜನಸಮೂಹವು ಅವನ ಮೇಲೆ ಹಲ್ಲೆ ನಡೆಸಿತು. ದುರದೃಷ್ಟವಶಾತ್, ಅವರು ಚಿಕಿತ್ಸೆಯ ಸಮಯದಲ್ಲಿ ನಿಧನರಾದರು ಎಂದು ಸಿಂಗ್ ಹೇಳಿದರು. ಶಾಹಿದೀನ್ನ ಸಹೋದರ ತನ್ನ ದೂರಿನಲ್ಲಿ, ಹಲ್ಲೆಯ ಸಂದರ್ಭದಲ್ಲಿ ತನ್ನ ಸಹೋದರನಿಗೆ ಗಂಭೀರ ಗಾಯಗಳಾಗಿವೆ. ಒಮ್ಮೆ ದೇಹದಾರ್ಢ್ಯ ಪಟುವಾಗಿದ್ದ ಶಾಹಿದೀನ್ ಫಿಟ್ನೆಸ್ಗಾಗಿ ಉತ್ಸಾಹದಿಂದ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಆದಾಗ್ಯೂ, ಪೂರಕ ಆಹಾರಗಳ ವ್ಯಸನದಿಂದಾಗಿ ಅವರು ಹಲವಾರು ಆರೋಗ್ಯ-ಸಂಬಂಧಿತ ತೊಡಕುಗಳನ್ನು ಅನುಭವಿಸಿದರು. ಇದರಿಂದ ಎರಡು ವರ್ಷಗಳ ಹಿಂದೆ ಕಾರ್ಖಾನೆಯೊಂದರಲ್ಲಿ ಕೆಲಸವೂ ನಷ್ಟವಾಗಿತ್ತು.ಇತ್ತೀಚಿನ ವರ್ಷಗಳಲ್ಲಿ, ಶಾಹಿದೀನ್ ಕೆಲಸ ಪಡೆಯಲು ಹೆಣಗಾಡುತ್ತಿದ್ದನು ಮತ್ತು ಹಸು ಕಳ್ಳಸಾಗಣೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದನು.