Home ಕ್ರೈಂ ನ್ಯೂಸ್ ದಾವಣಗೆರೆ ದುರ್ಗಾಂಬಿಕಾ ದೇವಿ ಆಭರಣಕ್ಕೆ ಕನ್ನ: ಪೂಜಾರಿ ಸಂಬಂಧಿ ಕದ್ದದ್ದೆಷ್ಟು? ಬಿಜೆಪಿ ನಾಯಕರು ಕೊಟ್ಟ ಗಡುವೇನು?
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ದಾವಣಗೆರೆ ದುರ್ಗಾಂಬಿಕಾ ದೇವಿ ಆಭರಣಕ್ಕೆ ಕನ್ನ: ಪೂಜಾರಿ ಸಂಬಂಧಿ ಕದ್ದದ್ದೆಷ್ಟು? ಬಿಜೆಪಿ ನಾಯಕರು ಕೊಟ್ಟ ಗಡುವೇನು?

Share
ದಾವಣಗೆರೆ
Share

ದಾವಣಗೆರೆ: ಮಧ್ಯ ಕರ್ನಾಟಕದ ಶಕ್ತಿ ದೇವತೆ ದಾವಣಗೆರೆಯ ದುರ್ಗಾಂಬಿಕಾ ದೇವಸ್ಥಾನದಲ್ಲಿ ಸುಮಾರು ಎಂಟರಿಂದ 10 ಲಕ್ಷ ರೂಪಾಯಿ ಮೌಲ್ಯದ ದೇವಿಯ ಮೈಮೇಲಿದ್ದ ಒಡವೆಗಳನ್ನು ಕದ್ದ ಆರೋಪ ಕೇಳಿ ಬಂದಿದೆ.

ಆಕಾಶ್ ಎಂಬಾತನೇ ಈ ಕೃತ್ಯ ಎಸಗಿದ್ದು, ಯಾವುದೇ ದೂರು ದಾಖಲಾಗಿಲ್ಲ. ಬಂಗಾರ ಕದ್ದ ಮತ್ತು ತೆಗೆದುಕೊಂಡವನಿಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ಆದರೆ ಬಂಧನವಾಗಿಲ್ಲ. ಈ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ದೂಡಾ ಮಾಜಿ ಅಧ್ಯಕ್ಷರಾದ ಯಶವಂತರಾವ್ ಜಾಧವ್ ಮತ್ತು ರಾಜನಹಳ್ಳಿ ಶಿವಕುಮಾರ್ ಅವರು ಗಂಭೀರ ಆರೋಪ ಮಾಡಿದ್ದಾರೆ.

ಯಶವಂತರಾವ್ ಜಾಧವ್ ಮಾತನಾಡಿ ದೇವಾಲಯದಲ್ಲಾದ ಆಭರಣಗಳ ಕಳ್ಳತನ ಪ್ರಕರಣದ ಬಗ್ಗೆ ಯಾವುದೇ ಶಿಸ್ತುಕ್ರಮ ಅಥವಾ ತನಿಖೆ ಏಕೆ ನಡೆಸಿಲ್ಲ. ಅಯೋಧ್ಯೆಯ ರಾಮಮಂದಿರದಲ್ಲಿ ಹುಂಡಿ ಕಳ್ಳತನದ ಬಗ್ಗೆ ಮಾತನಾಡುವ ದಾವಣಗೆರೆಯ ಕಾಂಗ್ರೆಸ್ ಮುಖಂಡರು ಈ ಪ್ರಕರಣದ ಬಗ್ಗೆ ಯಾಕೆ ತುಟಿ ಬಿಚ್ಚುತ್ತಿಲ್ಲ. ಕದ್ದ ಬಂಗಾರದಲ್ಲಿ ಯಾರ ಪಾಲಿದೆ ಎಂಬುದನ್ನು ದಾವಣಗೆರೆ ಜನತೆಗೆ ಸ್ಪಷ್ಟಪಡಿಸಬೇಕು. ನಾಲ್ಕು ದಿನಗಳ ಗಡುವು ನೀಡಲಾಗಿದ್ದು, ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದುನೋಡುತ್ತೇವೆ. ಆನಂತರ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ತಿಳಿಸಿದರು.

ತಮ್ಮ ಮೇಲಿನ ಆರೋಪಗಳು ಸುಳ್ಳಾಗಿದ್ದರೆ ದುರ್ಗಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ದುರ್ಗಾಂಬಿಕಾ ದೇವಿಯ ಪಾದ ಮುಟ್ಟಿ ತಾವೇನೂ ತಪ್ಪು ಮಾಡಿಲ್ಲ, ಸತ್ಯವಂತರು ಎಂದು ಪ್ರಮಾಣ ಮಾಡಬೇಕು. ಈ ಭ್ರಷ್ಟಾಚಾರದ ವಿರುದ್ಧ ಮಾತನಾಡದ ಟ್ರಸ್ಟ್‌ನ ಎಲ್ಲಾ ಸದಸ್ಯರು ಸಾಮೂಹಿಕವಾಗಿ ರಾಜೀನಾಮೆ ನೀಡಬೇಕು. ಜನರಿಂದಲೇ ಆಯ್ಕೆಯಾಗಲಿ. ದೇವಸ್ಥಾನದ ಆಡಳಿತ ಮಂಡಳಿಗೆ ಕಾರ್ಯದರ್ಶಿಯನ್ನೇ ನೇಮಕ ಮಾಡಿಲ್ಲ. ಹತ್ತು ವರ್ಷದಿಂದ ಹಿಂದೆಯೇ ಕಾರ್ಯದರ್ಶಿಗಳು ಮೃತಪಟ್ಟಿದ್ದರು. ಹಂಗಾಮಿ ಕಾರ್ಯದರ್ಶಿಗಳೂ ಸಹ ಸಾವನ್ನಪ್ಪಿ ಎರಡು ವರ್ಷಗಳಾಗಿದ್ದರೂ ನೇಮಕ ಮಾಡದಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ ಎಂದು ಹೇಳಿದರು.

ನಾವು ಎಲ್ಲಾ ಟ್ರಸ್ಟಿಗಳ ವಿರುದ್ಧ ಮಾತನಾಡುತ್ತಿಲ್ಲ. ಒಳ್ಳೆಯವರೂ ಇದ್ದಾರೆ. ಹಾಗಾಗಿ. ತಪ್ಪು ಆಗಿರುವುದರ ವಿರುದ್ಧ ಟ್ರಸ್ಟಿಗಳು ಧ್ವನಿ ಎತ್ತಬೇಕು. ಎಸ್. ಎಸ್. ಮಲ್ಲಿಕಾರ್ಜುನ್ ಅವರೇ ಅಧ್ಯಕ್ಷರಾಗಿದ್ದಾರೆ. ಆರೋಪಿಯನ್ನು ಕರೆಸಿ ಎಷ್ಟು ಕಳ್ಳತನ ಮಾಡಿದ್ದಿಯೋ ಇದೆಯೇ ನಿಮ್ಮ ಕೆಲಸ ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ. ಹಾಗೆಂದ ಮೇಲೆ ಕಳ್ಳತನ ಆಗಿದೆ ಎಂದೇ ಅರ್ಥವಲ್ವಾ ಎಂದು ಪ್ರಶ್ನಿಸಿದರು.

ದೇವಸ್ಥಾನದ ಆಡಳಿತ ಮಂಡಳಿಯ ಸಭೆಯಲ್ಲಿ ಇನ್ನೂ ಹಲವು ದಾಖಲಾತಿ ಸಂಗ್ರಹಿಸಿ ಪ್ರಶ್ನೆ ಮಾಡುತ್ತೇವೆ. ಉತ್ತರ ನೀಡಲಿ. ಸಮರ್ಪಕ ಉತ್ತರ ನೀಡದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು. ಈ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಹಿರಿಯ ಮುಖಂಡ ಹಾಗೂ ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಅವರು ಮಾತನಾಡಿ, ದುರ್ಗಾಂಬಿಕಾ ದೇವಿ ಶಕ್ತಿ ದೇವತೆ. ಈ ದೇವಸ್ಥಾನದಲ್ಲಿ ಕಳ್ಳತನ ಮಾಡಿದವರಿಗೆ ತಕ್ಕ ಶಿಕ್ಷೆಯಾಗಲೇಬೇಕು. ತಾರ್ಕಿಕ ಅಂತ್ಯ ಕಾಣುವವರೆಗೂ ಹೋರಾಟ ನಿಲ್ಲದು ಎಂದು ತಿಳಿಸಿದರು.

ಅಯೋಧ್ಯೆಯ ರಾಮಮಂದಿರದಲ್ಲಿನ ಹುಂಡಿ ಕಳ್ಳತನದ ಬಗ್ಗೆ ಪಂಜಿನ ಮೆರವಣಿಗೆ ಮಾಡಿರುವ ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಈಗ ಯಾವ ಹೋರಾಟ ಮಾಡುತ್ತಾರೆ? ಎಂಬುದನ್ನು ದಾವಣಗೆರೆ ಜನತೆಗೆ ಮೊದಲು ಸ್ಪಷ್ಟಪಡಿಸಲಿ. ಶ್ರೀರಾಮ ಮಂದಿರದಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸಿದೆ. ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ನೀಡಲಿ ಎಂದು ಒತ್ತಾಯಿಸುವ ಕಾಂಗ್ರೆಸ್ಸಿಗರು ದಾವಣಗೆರೆಯ ದುರ್ಗಾಂಬಿಕಾ ದೇವಸ್ಥಾನದ ಒಡವೆ ಕಳ್ಳತನದ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಗೋಷ್ಠಿಯಲ್ಲಿ ಕೊಂಡಜ್ಜಿ ಜಯಪ್ರಕಾಶ್., ಪಿ. ರಮೇಶ್ ನಾಯ್ಕ್, ಗುರು ಸೋಗಿ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಟಿ. ಪಾಟೀಲ್, ಟಿಂಕರ್ ಮಂಜಣ್ಣ ಮತ್ತಿತರರು ಹಾಜರಿದ್ದರು.

Share

Leave a comment

Leave a Reply

Your email address will not be published. Required fields are marked *