SUDDIKSHANA KANNADA NEWS
DATE:25-03-2025
DAVANAGERE
ದಾವಣಗೆರೆ: ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ (BJP)ಗೆ ಸ್ಪಷ್ಟ ಬಹುಮತ ನೀಡಿ. ಯಾವುದೇ ಕಾರಣಕ್ಕೂ ಅತಂತ್ರ ಪರಿಸ್ಥಿತಿ ನಿರ್ಮಾಣ ಆಗುವುದು ಬೇಡ. ಅಭಿವೃದ್ಧಿ ಪಥದಲ್ಲಿ ಮುಂದೆ ಹೋಗಬೇಕಾದರೆ ಬಿಜೆಪಿ (BJP) ಸಂಪೂರ್ಣ ಬಹುಮತ ಪಡೆದು ಮತ್ತೆ ಅಧಿಕಾರಕ್ಕೆ ಬರಬೇಕಿದೆ. ಯಾರಿಗೂ ಬಹುಮತ ನೀಡದಿದ್ದರೆ ರಾಜ್ಯದ ಭವಿಷ್ಯ ಉಜ್ವಲವಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (NARENDRA MODI) ಹೇಳುವ ಮೂಲಕ ಮತ ಕಬ್ಜದ ಮೋಡಿ ಮಾಡುವ ಪ್ರಯತ್ನ ಮಾಡಿದರು.
ನಗರದ ಜಿಎಂಐಟಿ (GMIT)ಯಲ್ಲಿ ಕಾಲೇಜು (COLLEGE) ಸಮೀಪದಲ್ಲಿ ಏರ್ಪಡಿಸಿದ್ದ ಬಿಜೆಪಿ (BJP) ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಮಹಾಸಂಗಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿಗೆ ಬಹುಮತ ನೀಡಲು ಆಗುತ್ತದೆಯೋ, ಇಲ್ಲವೋ. ಬಹುಮತ ಸರ್ಕಾರ (GOVERNAMENT) ಬೇಕೋ ಬೇಡವೋ. ಸುಳ್ಳು, ಮೋಸ, ವಂಚನೆ ರಾಜಕೀಯ ಬೇಡ. ಕರ್ನಾಟಕ ಮುಂದೆ ತೆಗೆದುಕೊಂಡು ಹೋಗುವವರು ಬರಬೇಕು. ನಾನು ನಿಮ್ಮ ಸೇವೆ ಮಾಡಬೇಕಾ. ಇದು ಜಾಸ್ತಿಯಾಗಬೇಕಾದರೆ ನೀವು ನನಗೆ ಏನನ್ನಾದರೂ ನೀಡಬೇಕು. ಹಾಗಾಗಿ, ಮನೆ ಮನೆಗೆ ಹೋಗಿ. ಪಕ್ಷದ ಗೆಲುವಿಗೆ ಶ್ರಮಿಸಿ. ಮೋದಿ ಕಮಲ ಅರಳಿಸಲು ಕರ್ನಾಟಕದ ಜನತೆ ನಿರ್ಧರಿಸಿದ್ದಾರೆ. ಕಾಂಗ್ರೆಸ್ ನನಗೆ ಗುಂಡಿ ತೋಡುವ ಕನಸು ನನಸಾಗದು ಎಂದು ಗುಡುಗಿದರು.
ಖರ್ಗೆ ವಿರುದ್ಧ ವಾಗ್ದಾಳಿ:
ಎಐಸಿಸಿ (AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ (NARENDRA MODI) ವಾಗ್ದಾಳಿ ನಡೆಸಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹೆಸರು ಹೇಳದೇ ;ವಾಗ್ದಾಳಿ ನಡೆಸಿದ ಮೋದಿ ಅವರು, ಕರ್ಮಭೂಮಿಯಲ್ಲಿ ಕಳೆದ ಕೆಲ ದಿನಗಳ ಹಿಂದೆಯಷ್ಟೇ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಚುನಾವಣೆ (ELECTION) ನಡೆಯಿತು. ಅಲ್ಲಿ ಅಧಿಕಾರಕ್ಕೆ ಬಂದದ್ದು ಬಿಜೆಪಿ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಸ್ಥಳದಲ್ಲಿ ಬಿಜೆಪಿ ವಿಜಯ ಸಂಕಲ್ಪ ನಡೆದಿದೆ. ಇಲ್ಲಿಂದ ವಿಜಯ ಯಾತ್ರೆ ಆರಂಭವಾಗಿರುವುದು ಶುಭ ಸಂಕೇತ. ಇದು ವಿಧಾನಸಭೆ ಚುನಾವಣೆಯಲ್ಲಿಯೂ ಪುನರಾವರ್ತನೆ ಆಗಬೇಕು ಎಂದು ಹೇಳಿದರು.
ಸಿದ್ದುಗೆ ಟಾಂಗ್ ಕೊಟ್ಟ ಮೋದಿ:
ನಾನು ಕರ್ನಾಟಕ (KARNATAKA) ದ ಮಾಜಿ ಮುಖ್ಯಮಂತ್ರಿಯೊಬ್ಬರು ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ್ದನ್ನು ಮೊಬೈಲ್ ಹಾಗೂ ಮಾಧ್ಯಮವೊಂದರಲ್ಲಿ ನೋಡಿದೆ. ಮನಸ್ಸು ಭಾವುಕವಾಗುತ್ತಿದೆ. ಸೋಷಿಯಲ್ ಮೀಡಿಯಾ (SOCIAL MEDIA), ಮಾಧ್ಯಮದಲ್ಲಿ ನೋಡಿದ ಈ ವಿಡಿಯೋದಲ್ಲಿ ಮುಖ್ಯಮಂತ್ರಿ ಆಗಿ ಅಧಿಕಾರ ಅನುಭವಿಸಿ ಕೆಳಗಿಳಿದವರು ನಡೆದುಕೊಂಡ ರೀತಿ. ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ್ದನ್ನು ನಾನು ನೋಡಿದೆ. ಕಾರ್ಯಕರ್ತನ ಜೊತೆ ಈ ರೀತಿ ನಡೆದುಕೊಂಡರೆ ಸಾಮಾನ್ಯ ಜನರ ಜೊತೆ ಯಾವ ರೀತಿ ನಡೆದುಕೊಳ್ಳಬಹುದು? ಆದ್ರೆ, ಬಿಜೆಪಿ(BJP) ಯಲ್ಲಿ ಆ ರೀತಿ ಇಲ್ಲ. ಎಲ್ಲಾ ಕಾರ್ಯಕರ್ತರಿಗೂ ಸಮಾನ ಗೌರವ ನೀಡಲಾಗುತ್ತದೆ. ಅದು ನಮ್ಮ ಬದ್ಧತೆ, ಕಾರ್ಯಕರ್ತರೊಟ್ಟಿಗೆ ಇರುವ ಪ್ರೀತಿ, ವಿಶ್ವಾಸ. ಬಿಜೆಪಿಯಲ್ಲಿ ಯಾರು ದೊಡ್ಡವರು, ಸಣ್ಣವರು ಎಂಬುದಿಲ್ಲ, ಎಲ್ಲರೂ ಸಮಾನರು ಎಂದು ಹೇಳುವ ಮೂಲಕ ಸಿದ್ದರಾಮಯ್ಯರಿಗೆ ಟಾಂಗ್ ನೀಡಿದರು.
ಅವಕಾಶವಾದಿ, ಸ್ವಾರ್ಥಪರದ ಸರ್ಕಾರವು ತುಂಬಾ ಸಮಯ ಕರ್ನಾಟಕದಲ್ಲಿ ಅಧಿಕಾರ ನಡೆಸಿದ್ದನ್ನು ನೋಡಿದ್ದೀರಾ. ಇದರಿಂದ ಕರ್ನಾಟಕಕ್ಕೆ ನಷ್ಟ ಆಗಿದೆ. ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಸರ್ಕಾರ ಇದ್ದಾಗ ರಾಜ್ಯದ ಖಜಾನೆ ಖಾಲಿಯಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮತ್ತು ಈಗಲೂ ಈ ರಾಜ್ಯವನ್ನು ಎಟಿಎಂ ರೂಪದಲ್ಲಿ ನೋಡುತ್ತಿದೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬೆಂಬಲಿಸಬೇಡಿ. ಸುಳ್ಳಿಗೆ ಮಾರುಹೋಗಬೇಡಿ ಎಂದು ಹೇಳಿದರು.
ಕಾಂಗ್ರೆಸ್ (CONGRESS) ನವರು ಚುನಾವಣೆಗೆ ಮುನ್ನ ಗ್ಯಾರಂಟಿ ಕಾರ್ಡ್ (CARD) ಕೊಡುತ್ತಿದ್ದಾರೆ. ಸುಳ್ಳು ಮತ್ತು ಮೋಸ ಮಾಡುತ್ತಾರೆ ಎಂಬುದಕ್ಕೆ ಹಿಮಾಚಲ ಪ್ರದೇಶ ಉತ್ತಮ ನಿದರ್ಶನ. ಚುನಾವಣೆಗೆ ಮುನ್ನ ದೊಡ್ಡ ದೊಡ್ಡ ಘೋಷಣೆ ಮಾಡಿ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೂರು ತಿಂಗಳಾದರೂ ಭರವಸೆ ಈಡೇರಿಸಿಲ್ಲ. ಜನರು ಚುನಾವಣೆಗೆ ಮುನ್ನ ನೀಡಿದ್ದ ಭರವಸೆ ಏನಾಯ್ತು ಎಂಬುದನ್ನು ಜನರು ಕೇಳತೊಡಗಿದ್ದಾರೆ. ಇಂಥ ಕಾಂಗ್ರೆಸ್ ಮೇಲೆ ಭರವಸೆ ಇಡಲಾಗುತ್ತಾ ಎಂದು ಪ್ರಶ್ನಿಸಿದರು.
ಚುನಾವಣೆ ಸಮಯದಲ್ಲಿ ಹೇಳಿದ್ದೀರಾ. ಗ್ಯಾರಂಟಿ ಅಂದ್ರಿ. ಮೂರು ತಿಂಗಳಾಯ್ತು. ಗ್ಯಾರಂಟಿ ಕಾರ್ಡ್ ಏನಾಯ್ತು. ಇಂಥ ಸುಳ್ಳು ಹೇಳುವವರಿಗೆ ಅವಕಾಶ ಕೊಡಬೇಡಿ. ಜನರಿಗೆ ಮೋಸ ಮಾಡಿದ್ದಾರೆ. ಕರ್ನಾಟಕದಲ್ಲಿಯೂ ಕಾಂಗ್ರೆಸ್ ಇದೇ ರೀತಿ
ಮಾಡುತ್ತದೆ. ಯಾವುದೇ ಗುಣಾತ್ಮಕ ಅಜೆಂಡಾ ಇಲ್ಲ. ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದೆ. ಕರ್ನಾಟಕದ ಜನರು ಸಂಕಲ್ಪ ಮಾಡಿದ್ದಾರೆ. ಈ ಬಾರಿ ಬಿಜೆಪಿಗೆ ಬಹುಮತ ಕೊಡಬೇಕು ಎಂಬುದು. ಹಾಗಾಗಿ, ಬಿಜೆಪಿ ಕಾರ್ಯಕರ್ತರು ಶಕ್ತಿಮೀರಿ
ಪ್ರಯತ್ನಸಬೇಕು ಎಂದು ಮನವಿ ಮಾಡಿದರು.
ಡಬಲ್ ಇಂಜಿನ್ ಸರ್ಕಾರ ಇಲ್ಲದಿದ್ದರೆ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಹಣ ರೈತರಿಗೆ ಸರಿಯಾಗಿ ಸಿಗುತ್ತಿರಲಿಲ್ಲ. ಕಾಂಗ್ರೆಸ್ – ಜೆಡಿಎಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಕಳುಹಿಸಿದ್ದ ಪಟ್ಟಿಯಲ್ಲಿ ರೈತರ ಸಂಖ್ಯೆ ಕಡಿಮೆ ಇತ್ತು. ಕೇಂದ್ರ ಹಾಗೂ
ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರ ಬಂದ ಬಳಿಕ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರ ಮಾಡಿದ್ದ ತಪ್ಪು ಸರಿಪಡಿಸಿದ್ದೇವೆ. 40 ಲಕ್ಷ ರೈತರಿಗೆ ಪ್ರಧಾನ ಮಂತ್ರಿ ಸಮ್ಮಾನ್ ಕಿಸಾನ್ ಲಾಭ ಆಗುತ್ತಿದೆ. ದಾವಣಗೆರೆ ರೈತರಿಗೂ ಇದರ ಲಾಭ ಸಿಕ್ಕಿದೆ. ಇದು ಸಾಧ್ಯವಾಗಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಎಂದು ಹೇಳಿದರು.
ನಿಮ್ಮ ಮತದಿಂದ ನಗಾರಿ:
ನೀವು ಹಾಕಿರುವ ಪ್ರತಿಯೊಂದು ಮತದಿಂದಲೇ ದೇಶ ದೇಶಗಳಲ್ಲಿಯೂ ಮೋದಿ ನಗಾರಿ ಬಾರಿಸುತ್ತಿದೆ. ಕರ್ನಾಟಕದಲ್ಲಿಯೂ ಇದಾಗಬೇಕಾದರೆ ನೀವೆಲ್ಲರೂ ಆಶೀರ್ವದಿಸಬೇಕು. ವಿಶ್ವಮಟ್ಟದಲ್ಲಿ ಭಾರತ ಖ್ಯಾತಿಯಾಗಲು ಕಾರಣ ನಾನಲ್ಲ, ನೀವು ಎಂದು ಮತದಾರರ ಮನ ಗೆಲ್ಲುವ ಪ್ರಯತ್ನ ಮಾಡಿದರು.
ಆಶೀರ್ವಾದ ಹೆಚ್ಚುತ್ತಲೇ ಇದೆ:
ಹಲವು ಬಾರಿ ನಾನು ದಾವಣಗೆರೆಗೆ ಬರುವ ಅವಕಾಶ ಸಿಕ್ಕಿದೆ. ಇಲ್ಲಿಗೆ ಬಂದಾಗಲೆಲ್ಲಾ ನಿಮ್ಮ ಅಶೀರ್ವಾದ ಹೆಚ್ಚಾಗುತ್ತಲೇ ಇದೆ. ಕರ್ನಾಟಕ ಬಿಜೆಪಿಗೆ ಧನ್ಯವಾದ ಹೇಳುತ್ತೇನೆ. ಕಾರ್ಯಕ್ರಮದಲ್ಲಿ ನಿಮ್ಮ ದರ್ಶನ ಮಾಡಿದ್ದು ನನ್ನ ಪುಣ್ಯ ಮತ್ತು ಸೌಭಾಗ್ಯ. ಡಬಲ್ ಎಂಜಿನ್ ಸರ್ಕಾರದ ಮೇಲೆ ನಿಮ್ಮೆಲ್ಲರ ಆಶೀರ್ವಾದ ಇದೆ. ಹರಿಹರೇಶ್ವರ, ತಾಯಿ ಭುವನೇಶ್ವರಿ, ಪವಿತ್ರಾ ಮಠಗಳಿಗೆ ನಮಿಸುತ್ತೇನೆ. ತುಂಗಾಭದ್ರೆಯ ಪವಿತ್ರಾ ತಾಣದಲ್ಲಿ ಹರಿ-ಹರ ಸಮನ್ವಯವಾಗಿದೆ. ಬಿಜೆಪಿ ನಾಲ್ಕು ವಿಜಯ ಸಂಕಲ್ಪ ಯಾತ್ರೆಯ ಮಹಾಸಂಗಮ ಇಲ್ಲಿ ಆಗಿದೆ. ನೀವೆಲ್ಲಾ ದೇವರ ದರ್ಶನ ಮಾಡಿ ನೀವು ಪುಣ್ಯ ಸಂಪಾದಿಸಿದ್ದೀರಾ. ನಿಮ್ಮ ದರ್ಶನ ಮಾಡಿದ್ದರಿಂದ ನನಗೂ ಪುಣ್ಯ ಸಿಕ್ಕಿದೆ ಎಂದು ತಿಳಿಸಿದರು.
ಕನ್ನಡದಲ್ಲಿ ನಮಸ್ಕಾರ:
ದಾವಣಗೆರೆಯ ನನ್ನ ಸಹೋದರ, ಸಹೋದರಿಯರಿಗೆ ನಮಸ್ಕಾರಗಳು. ಕರ್ನಾಟಕದ ನನ್ನ ಭಾಜಪ ಕಾರ್ಯಕರ್ತ ಬಾಂಧವರಿಗೆ ನಮಸ್ಕಾರಗಳು ಎಂದು ಹೇಳುತ್ತಿದ್ದಂತೆ ಕಾರ್ಯಕರ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಇದೇ ವೇಳೆ ಪಕ್ಷದ ಕಾರ್ಯಕರ್ತರಿಗೆ ಪ್ರತಿ ಬೂತ್ ಗೆ ಹೋಗಿ. ಬೂತ್ ನಲ್ಲಿಉತ್ಸಾಹ, ಹೊಸ ಶಕ್ತಿ ಹುಟ್ಟು ಹಾಕಿ. ಬೂತ್ ಮಟ್ಟದಿಂದಲೇ ವಿಜಯ ಸಂಕಲ್ಪ ಆಗಬೇಕು. ಕರ್ನಾಟಕದ ಕಾರ್ಯಕರ್ತ ನನ್ನ ಸಹೋದರರು, ಮಿತ್ರರು. ಕಾಂಗ್ರೆಸ್ ನವರು ಮೋದಿಯನ್ನು ಮುಗಿಸುವ ಮಾತನಾಡುತ್ತಾರೆ. ದೇಶದ ಹಾಗೂ ನಿಮ್ಮೆಲ್ಲರ ಆಶೀರ್ವಾದ ಇರುವವರೆಗೆ ಅದು ಸಾಧ್ಯವಾಗದು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಪೊಲಿಟಿಕಲ್ ಪರ್ಫಾಮೆನ್ಸ್ ಬದಲಿಸಿದೆ. ದೇಶದ ಜನರ ಹಿತ ಕಾಪಾಡುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಗುಂಡಿ ತೋಡಲು ಆಗದು:
ನನ್ನ ಗುಂಡಿ ತೋಡಲು ಕಾಂಗ್ರೆಸ್ ಗೆ ಆಗಲ್ಲ. ಆ ಗುಂಡಿಯಿಂದಲೇ ಕಮಲ ಅರಳುತ್ತದೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ನಂಬಬೇಡಿ, ಬೆಂಬಲಿಸಬೇಡಿ ಎಂದು ಮನವಿ ಮಾಡಿದರು.
ಹುಲಿ ನೋಡಲು ಬರುತ್ತೇನೆ:
ಏಪ್ರಿಲ್ ಮೊದಲ ವಾರದಲ್ಲಿ ಮತ್ತೆ ಕರ್ನಾಟಕಕ್ಕೆ ಆಗಮಿಸುತ್ತೇನೆ. ಹುಲಿ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮಕ್ಕಾಗಿ ಬರುತ್ತೇನೆ. ಕರ್ನಾಟಕದಲ್ಲಿನ ಹುಲಿ ನೋಡಲು.ಕರ್ನಾಟಕದ ಜನರ ಸೇವೆಗೆ ಸದಾ ಸಿದ್ಧನಿದ್ದೇನೆ ಎಂದು ಹೇಳಿದರು.