Home ಉದ್ಯೋಗ ವಾರ್ತೆ IREL ನೇಮಕಾತಿ 2026: ಕೇಂದ್ರ ಸರ್ಕಾರಿ ಸಂಸ್ಥೆಯಲ್ಲಿ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ₹2.40 ಲಕ್ಷದವರೆಗೆ ಸಂಬಳ!
ಉದ್ಯೋಗ ವಾರ್ತೆದಾವಣಗೆರೆನವದೆಹಲಿಬೆಂಗಳೂರು

IREL ನೇಮಕಾತಿ 2026: ಕೇಂದ್ರ ಸರ್ಕಾರಿ ಸಂಸ್ಥೆಯಲ್ಲಿ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ₹2.40 ಲಕ್ಷದವರೆಗೆ ಸಂಬಳ!

Share
IREL
Share

ನವದೆಹಲಿ: ಕೇಂದ್ರ ಪರಮಾಣು ಶಕ್ತಿ ಇಲಾಖೆಯ (DAE) ಪ್ರಮುಖ ಸಾರ್ವಜನಿಕ ವಲಯದ ಸಂಸ್ಥೆಯಾದ ‘ಇಂಡಿಯನ್ ರೇರ್ ಅರ್ಥ್ಸ್ ಲಿಮಿಟೆಡ್’ (IREL India Limited) 2026ನೇ ಸಾಲಿನ ವಿವಿಧ ಎಕ್ಸಿಕ್ಯೂಟಿವ್ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಒಟ್ಟು 73 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ ಹಾಗೂ ವಯೋಮಿತಿ:

  • ಜನರಲ್ ಮ್ಯಾನೇಜರ್ (General Manager): 5 ಹುದ್ದೆಗಳು (ಗರಿಷ್ಠ ವಯಸ್ಸು: 50 ವರ್ಷ)

  • ಡೆಪ್ಯೂಟಿ ಜನರಲ್ ಮ್ಯಾನೇಜರ್ (DGM): 3 ಹುದ್ದೆಗಳು (ಗರಿಷ್ಠ ವಯಸ್ಸು: 46 ವರ್ಷ)

  • ಚೀಫ್ ಮ್ಯಾನೇಜರ್ (Chief Manager): 5 ಹುದ್ದೆಗಳು (ಗರಿಷ್ಠ ವಯಸ್ಸು: 42 ವರ್ಷ)

  • ಸೀನಿಯರ್ ಮ್ಯಾನೇಜರ್ (Senior Manager): 8 ಹುದ್ದೆಗಳು (ಗರಿಷ್ಠ ವಯಸ್ಸು: 38 ವರ್ಷ)

  • ಮ್ಯಾನೇಜರ್ (Manager): 3 ಹುದ್ದೆಗಳು (ಗರಿಷ್ಠ ವಯಸ್ಸು: 35 ವರ್ಷ)

  • ಡೆಪ್ಯೂಟಿ ಮ್ಯಾನೇಜರ್ (Deputy Manager): 19 ಹುದ್ದೆಗಳು (ಗರಿಷ್ಠ ವಯಸ್ಸು: 32 ವರ್ಷ)

  • ಅಸಿಸ್ಟೆಂಟ್ ಮ್ಯಾನೇಜರ್ (Assistant Manager): 30 ಹುದ್ದೆಗಳು (ಗರಿಷ್ಠ ವಯಸ್ಸು: 28 ವರ್ಷ)

(ಸೂಚನೆ: ನಿಯಮಾನುಸಾರ SC/ST, OBC, PwBD ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ).

ಶೈಕ್ಷಣಿಕ ಅರ್ಹತೆ:

ವಿವಿಧ ಹುದ್ದೆಗಳಿಗೆ ಅನುಗುಣವಾಗಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ BE / B.Tech, M.Sc, CA / CMA, MBA, LLB, MBBS, CS, MA, MSW ಅಥವಾ ಪದವಿ ಪೂರ್ಣಗೊಳಿಸಿದ ಹಾಗೂ ಸಂಬಂಧಿತ ಅನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ವೇತನ ಶ್ರೇಣಿ:

ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಯ ಶ್ರೇಣಿಗೆ ಅನುಗುಣವಾಗಿ ತಿಂಗಳಿಗೆ ₹40,000 ದಿಂದ ₹2,40,000 ವರೆಗೆ ಮಾಸಿಕ ವೇತನ ದೊರೆಯಲಿದೆ.

ಅರ್ಜಿ ಶುಲ್ಕ:

  • ಸಾಮಾನ್ಯ / OBC / EWS ಅಭ್ಯರ್ಥಿಗಳಿಗೆ: ₹944/-

  • SC / ST / PwBD / ಮಾಜಿ ಸೈನಿಕ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ: ₹354/-

  • ಪಾವತಿ ವಿಧಾನ: ಆನ್‌ಲೈನ್.

ಪ್ರಮುಖ ದಿನಾಂಕಗಳು:

  • ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 20 ಜುಲೈ 2026

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10 ಆಗಸ್ಟ್ 2026 (ಸಂಜೆ 6:00 ಗಂಟೆಯವರೆಗೆ)

  • ಅಧಿಕೃತ ವೆಬ್‌ಸೈಟ್: irel.co.in

Share

Leave a comment

Leave a Reply

Your email address will not be published. Required fields are marked *