ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಆಸೀಸ್ ಗೆ ತಿರುಗೇಟು ಕೊಟ್ಟ ಟೀಂ ಇಂಡಿಯಾ: ನಿತೀಶ್ ಕುಮಾರ್ ರೆಡ್ಡಿ ಭರ್ಜರಿ ಶತಕ, ಸುಂದರ ಆಟವಾಡಿದ ಸುಂದರ್

On: December 28, 2024 12:20 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:28-12-2024

ಮೇಲ್ಬರ್ನ್: ಆತಿಥೇಯ ಆಸ್ಟ್ರೇಲಿಯಾ ತಂಡದ ವಿರುದ್ಧ ಆಂಧ್ರಪ್ರದೇಶದ ನಿತೀಶ್ ಕುಮಾರ್ ರೆಡ್ಡಿ ಭರ್ಜರಿ ಶತಕ ಬಾರಿಸಿದ್ದಾರೆ. ಈ ಮೂಲಕ ಆಸೀಸ್ ನೆಲದಲ್ಲಿ ಮೊದಲ ಸರಣಿಯಲ್ಲಿ ಶತಕ ಬಾರಿಸಿ ತನ್ನ ಆಯ್ಕೆ ಸಮರ್ಥಿಸಿಕೊಂಡರು.

164 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾ ರವೀಂದ್ರ ಜಡೇಜಾ ವಿಕೆಟ್ ಅನ್ನು ಬೇಗನೇ ಕಳೆದುಕೊಂಡಿತು. ರಿಷಬ್ ಪಂತ್ ಹಾಗೂ ರವೀಂದ್ರ ಜಡೇಜಾ ಆರಂಭದಲ್ಲಿ ಸ್ವಲ್ಪ ರನ್ ಕಲೆ ಹಾಕಿದರು. ಆದ್ರೆ, ಜಡೇಜಾ 17 ರನ್ ಗಳಿಸಿ ಔಟಾದರೆ, ರಿಷಬ್ ಪಂತ್ ಮತ್ತೆ ವೈಫಲ್ಯ ಅನುಭವಿಸಿದರು. ಕೇವಲ 28 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು.

ಈ ವೇಳೆ ಜೋಡೆಯಾದ ನಿತೀಶ್ ರೆಡ್ಡಿ ಮತ್ತು ವಾಷಿಂಗ್ಟನ್ ಸುಂದರ್ ಸುಂದರ ಜೊತೆಯಾಟ ನೀಡಿದರು. ಈ ಜೋಡಿ ನೂರಕ್ಕೂ ಹೆಚ್ಚು ರನ್ ಪೇರಿಸುವ ಮೂಲಕ ಟೀಂ ಇಂಡಿಯಾವನ್ನು ಫಾಲೋ ಆನ್ ನಿಂದ ಪಾರು ಮಾಡಿದರು. ಫಾಲೋ ಆನ್ ನಿಂದ ಪಾರಾಗುತ್ತಿದ್ದಂತೆ ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್ ಸ್ಟೈಲ್ ನಂತೆ ನಿತೀಶ್ ರೆಡ್ಡಿ ಸಂಭ್ರಮ ಆಚರಿಸಿದರು.

21 ವರ್ಷದ ಕಿರಿಯ ಆಟಗಾರನಾದ ನಿತೀಶ್ ರೆಡ್ಡಿ ಆಸೀಸ್ ಬೌಲರ್ ಗಳನ್ನು ಚೆಂಡಾಡಿದರು. ಮೂಲೆ ಮೂಲೆಗೆ ಬೌಂಡರಿ ಬಾರಿಸುವ ಮೂಲಕ ಗಮನ ಸೆಳೆದರು. ಅದೇ ರೀತಿಯಲ್ಲಿ ಸಿಕ್ಸರ್ ಸಹ ಬಾರಿಸಿದರು. ನಿತೀಶ್ ರೆಡ್ಡಿ ಆಟಕ್ಕೆ ಆಸೀಸ್ ಆಟಗಾರರು ಸುಸ್ತಾದರು. 171 ಎಸೆತಗಳನ್ನು ಎದುರಿಸಿದ ನಿತೀಶ್ ಕುಮಾರ್ ರೆಡ್ಡಿ ಶತಕ ಬಾರಿಸಿ ಸಂಭ್ರಮಿಸಿದರು.

ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ ನಲ್ಲಿ 474 ರನ್ ಪೇರಿಸಿತ್ತು. ಭಾರತವು ಫಾಲೋ ಆನ್ ನಿಂದ ತಪ್ಪಿಸಿಕೊಳ್ಳಲು 274 ರನ್ ಪೇರಿಸಬೇಕಿತ್ತು. ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳು ವೈಫಲ್ಯ ಅನುಭವಿಸಿದರು. ನಿತೀಶ್ ರೆಡ್ಡಿ ಮತ್ತು ವಾಷಿಂಗ್ಟನ್ ಸುಂದರ್ ಸಮಯೋಚಿತ ಆಟದಿಂದಾಗಿ 350ರ ಗಡಿ ದಾಟಿತು. ದಿನದಂತ್ಯಕ್ಕೆ ಟೀಂ ಇಂಡಿಯಾ 9 ವಿಕೆಟ್ ಕಳೆದುಕೊಂಡು 358 ರನ್ ಪೇರಿಸಿದೆ.

ಓನಿತೀಶ್ ಕುಮಾರ್ ರೆಡ್ಡಿ ಆರಂಭದಲ್ಲಿ ಆರ್ಭಟಿಸಿದರೆ ಆನಂತರ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದರು. ಅರ್ಧ ಶತಕ ಸಿಡಿಸಿ ವಾಷಿಂಗ್ಟನ್ ಸುಂದರ್ ನಿರ್ಗಮಿಸಿದರು. ಟೀಂ ಇಂಡಿಯಾ ಇನ್ನೂ 116 ರನ್ ಗಳಿಂದ ಹಿಂದಿದೆ. ಮೂರನೇ ದಿನದಾಟ ಅಂತ್ಯವಾಗಿದ್ದು, ಟೆಸ್ಟ್ ರೋಚಕ ಘಟ್ಟ ತಲುಪಲಿದೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment