Home ಉದ್ಯೋಗ ವಾರ್ತೆ ದಾವಣಗೆರೆ ಜಿಲ್ಲೆಯ ಮಹಿಳೆಯರಿಗೆ ಉಚಿತ ಉದ್ಯಮಶೀಲತಾ ತರಬೇತಿ: ಆಗಸ್ಟ್ 4 ರಿಂದ ಶಿಬಿರ ಆರಂಭ
ಉದ್ಯೋಗ ವಾರ್ತೆದಾವಣಗೆರೆಬೆಂಗಳೂರು

ದಾವಣಗೆರೆ ಜಿಲ್ಲೆಯ ಮಹಿಳೆಯರಿಗೆ ಉಚಿತ ಉದ್ಯಮಶೀಲತಾ ತರಬೇತಿ: ಆಗಸ್ಟ್ 4 ರಿಂದ ಶಿಬಿರ ಆರಂಭ

Share
ದಾವಣಗೆರೆ
Share

ದಾವಣಗೆರೆ: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಬೆಂಗಳೂರು, ಇವರ  ಪ್ರಾಯೋಜಕತ್ವದಲ್ಲಿ  ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ, ಧಾರವಾಡ (ಸಿಡಾಕ್),  ಸಿಡಾಕ್, ದಾವಣಗೆರೆ ಹಾಗೂ ಜನ ಶಿಕ್ಷಣ ಸಂಸ್ಥಾನ ದಾವಣಗೆರೆ  ಇವರುಗಳ ಸಂಯುಕ್ತ ಆಶ್ರಯದಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ಇಚ್ಛಿಸುವ ದಾವಣಗೆರೆ ಜಿಲ್ಲೆಯ ಉದ್ಯವi ಆಕಾಂಕ್ಷಿಗಳಿಗೆ 10  ದಿನಗಳ ಉದ್ಯಮ ಶೀಲತಾಭಿವೃದ್ಧಿ ಕಾರ್ಯಕ್ರಮವನ್ನು    ಆಗಸ್ಟ್ 4 ರಿಂದ 14 ರವರೆಗೆ ಜನ ಶಿಕ್ಷಣ ಸಂಸ್ಥಾನ ಗುತ್ತೂರು ಹರಿಹರ ಇಲ್ಲಿ ಆಯೋಜಿಸಲಾಗಿದೆ.

ಅಭ್ಯರ್ಥಿಗಳು ಅರ್ಜಿಯ ಜೊತೆಗೆ 2 ಪಾಸ್‍ಪೋರ್ಟ್ ಅಳತೆಯ ಫೋಟೋ ಹಾಗೂ ಆಧಾರ್‍ಕಾರ್ಡ್‍ನ  ಪ್ರತಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಬಯಸುವ ಮಹಿಳೆಯರು ಉಪ ನಿರ್ದೇಶಕರ ಕಚೇರಿ, ಸಿಡಾಕ್, ಪ್ಲಾಟ್ ನಂ: 76ಎ-(ಪಿ1), ಕರೂರು ಕೈಗಾರಿಕಾ ಪ್ರದೇಶ, ಪಿ.ಬಿ. ರಸ್ತೆ, ದಾವಣಗೆರೆ-577006 ದೂರವಾಣಿ ಸಂಖ್ಯೆ: 9448812974,  ಶಿವಾನಂದ ಎಲಿಗಾರ್, ಉಪ ನಿರ್ದೇಶಕರು, ಸಿಡಾಕ್ ದಾವಣಗೆರೆ. 9164742033, ಬಸವರಾಜ ಜಿ. ಬಿ. ತರಬೇತಿದಾರರು, ಹಾಗೂ  9886115200 ವಿನಯ ಜಿ. ಕೆ.  ತರಬೇತಿದಾರರು, ಸಿಡಾಕ್ ದಾವಣಗೆರೆ. ಇವರನ್ನು ಸಂಪರ್ಕಿಸಬಹುದೆಂದು ಸಿಡಾಕ್ ಅಧಿಕಾರಿ ತಿಳಿಸಿದ್ದಾರೆ.

ಆಗಸ್ಟ್ 4 ರಿಂದ ತರಬೇತಿ ಆರಂಭ: ಸ್ವಯಂ ಉದ್ಯೋಗ ಆರಂಭಿಸಲು ಆಸಕ್ತಿ ಹೊಂದಿರುವ ದಾವಣಗೆರೆ ಜಿಲ್ಲೆಯ ಉದ್ಯಮ ಆಕಾಂಕ್ಷಿಗಳಿಗೆ ಆಗಸ್ಟ್ 4 ರಿಂದ 14 ರವರೆಗೆ ಹರಿಹರದ ಗುತ್ತೂರಿನಲ್ಲಿರುವ ಜನ ಶಿಕ್ಷಣ ಸಂಸ್ಥಾನದಲ್ಲಿ 10 ದಿನಗಳ ಉದ್ಯಮಶೀಲತಾಭಿವೃದ್ಧಿ ಕಾರ್ಯಕ್ರಮ ನಡೆಯಲಿದೆ.

ಬೇಕಾಗುವ ದಾಖಲೆಗಳು: ತರಬೇತಿಗೆ ಸೇರಬಯಸುವ ಅಭ್ಯರ್ಥಿಗಳು ತಮ್ಮ ಅರ್ಜಿಯ ಜೊತೆಗೆ ಈ ಕೆಳಗಿನ ದಾಖಲೆಗಳನ್ನು ಸಲ್ಲಿಸಬೇಕಿರುತ್ತದೆ:

  • 2 ಪಾಸ್‍ಪೋರ್ಟ್ ಅಳತೆಯ ಇತ್ತೀಚಿನ ಫೋಟೋಗಳು.

  • ಆಧಾರ್‍ಕಾರ್ಡ್‍ನ ಜೆರಾಕ್ಸ್ ಪ್ರತಿ.

ಸಂಪರ್ಕ ಮಾಹಿತಿ: ಅರ್ಜಿ ಸಲ್ಲಿಸಲು ಬಯಸುವ ಮಹಿಳೆಯರು ಮತ್ತು ಆಸಕ್ತರು ಹೆಚ್ಚಿನ ವಿವರಗಳಿಗಾಗಿ ಉಪ ನಿರ್ದೇಶಕರ ಕಚೇರಿ, ಸಿಡಾಕ್, ಪ್ಲಾಟ್ ನಂ: 76ಎ-(ಪಿ1), ಕರೂರು ಕೈಗಾರಿಕಾ ಪ್ರದೇಶ, ಪಿ.ಬಿ. ರಸ್ತೆ, ದಾವಣಗೆರೆ-577006 ಇಲ್ಲಿಗೆ ಭೇಟಿ ನೀಡಬಹುದು.

ಅಥವಾ ಈ ಕೆಳಗಿನ ಅಧಿಕಾರಿಗಳು ಮತ್ತು ತರಬೇತಿದಾರರನ್ನು ಸಂಪರ್ಕಿಸಬಹುದೆಂದು ಸಿಡಾಕ್ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ:

  • ಶಿವಾನಂದ ಎಲಿಗಾರ್ (ಉಪ ನಿರ್ದೇಶಕರು, ಸಿಡಾಕ್): 9448812974

  • ಬಸವರಾಜ ಜಿ. ಬಿ. (ತರಬೇತಿದಾರರು): 9164742033

  • ವಿನಯ ಜಿ. ಕೆ. (ತರಬೇತಿದಾರರು): 9886115200

Share

Leave a comment

Leave a Reply

Your email address will not be published. Required fields are marked *