Home ದಾವಣಗೆರೆ ಚಿನ್ನದ ಪ್ರಿಯರಿಗೆ ಗುಡ್ ನ್ಯೂಸ್: ಇಳಿಕೆಯತ್ತ ಬಂಗಾರದ ಬೆಲೆ! ಬೆಂಗಳೂರು, ದಾವಣಗೆರೆಯಲ್ಲಿ ಇಂದಿನ ದರ ಎಷ್ಟು?
ದಾವಣಗೆರೆಬೆಂಗಳೂರುವಾಣಿಜ್ಯ

ಚಿನ್ನದ ಪ್ರಿಯರಿಗೆ ಗುಡ್ ನ್ಯೂಸ್: ಇಳಿಕೆಯತ್ತ ಬಂಗಾರದ ಬೆಲೆ! ಬೆಂಗಳೂರು, ದಾವಣಗೆರೆಯಲ್ಲಿ ಇಂದಿನ ದರ ಎಷ್ಟು?

Share
ಚಿನ್ನ
Share

ಬೆಂಗಳೂರು: ದೇಶಾದ್ಯಂತ ಚಿನ್ನದ ಬೆಲೆಯಲ್ಲಿ ಸಲ್ಪ ಇಳಿಕೆ ಕಂಡುಬಂದಿದ್ದು, ಹಳದಿ ಲೋಹ ಖರೀದಿಸುವವರಿಗೆ ಕೊಂಚ ನಿರಾಳ ಸಿಕ್ಕಂತಾಗಿದೆ. ಮಲ್ಟಿ ಕಮೋಡಿಟಿ ಎಕ್ಸ್‌ಚೇಂಜ್ (MCX) ಮಾರುಕಟ್ಟೆಯಲ್ಲಿ ಗುರುವಾರ (ಜುಲೈ 16) ಚಿನ್ನದ ಬೆಲೆ ಶೇ. 0.4 ರಷ್ಟು ಇಳಿಕೆಯಾಗಿದ್ದು, ಪ್ರತಿ 10 ಗ್ರಾಂಗೆ 1.41 ಲಕ್ಷ ರೂಪಾಯಿ ಆಸುಪಾಸಿನಲ್ಲಿ ವಹಿವಾಟು ಆರಂಭಿಸಿದೆ.

ಜಾಗತಿಕ ಮಾರುಕಟ್ಟೆಯಲ್ಲಿನ ಸಾಧಾರಣ ಕುಸಿತ ಮತ್ತು ಸ್ಥಳೀಯವಾಗಿ ಬೇಡಿಕೆ ಸ್ಥಿರವಾಗಿರುವುದು ಈ ಇಳಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ.

ಕರ್ನಾಟಕದ ಪ್ರಮುಖ ನಗರಗಳ ಇಂದಿನ ದರ ವಿವರ:

ರಾಜ್ಯದ ಪ್ರಮುಖ ವಾಣಿಜ್ಯ ನಗರಿಗಳಾದ ಬೆಂಗಳೂರು, ದಾವಣಗೆರೆ, ಮಂಗಳೂರು, ಮೈಸೂರು ಮತ್ತು ಬಳ್ಳಾರಿಯಲ್ಲಿ ಚಿನ್ನದ ದರ ಏಕರೂಪದಲ್ಲಿದೆ. ಇಂದಿನ ಮಾರುಕಟ್ಟೆ ದರದ ಪಟ್ಟಿ ಹೀಗಿದೆ:

24 ಕ್ಯಾರೆಟ್ ಚಿನ್ನ (ಅಪರಂಜಿ ಚಿನ್ನ – 99.9% ಶುದ್ಧತೆ):

1 ಗ್ರಾಂ: ₹14,329

10 ಗ್ರಾಂ: ₹1,43,290

22 ಕ್ಯಾರೆಟ್ ಚಿನ್ನ (ಆಭರಣ ಚಿನ್ನ – 91.6% ಶುದ್ಧತೆ):

1 ಗ್ರಾಂ: ₹13,135

10 ಗ್ರಾಂ: ₹1,31,350

18 ಕ್ಯಾರೆಟ್ ಚಿನ್ನ (ಕಡಿಮೆ ಗುಣಮಟ್ಟದ ಚಿನ್ನ):

1 ಗ್ರಾಂ: ₹10,747

10 ಗ್ರಾಂ: ₹1,07,470

ಗಮನಿಸಿ:

ಇಲ್ಲಿ ನೀಡಲಾಗಿರುವ ದರಗಳು ಮಾರುಕಟ್ಟೆಯ ಮೂಲ ಬೆಲೆಗಳಾಗಿವೆ. ನೀವು ಸ್ಥಳೀಯ ಜ್ಯುವೆಲ್ಲರಿ ಶಾಪ್‌ಗಳಲ್ಲಿ ಆಭರಣ ಖರೀದಿಸುವಾಗ ಈ ಬೆಲೆಯ ಜೊತೆಗೆ ಮೇಕಿಂಗ್ ಚಾರ್ಜಸ್ (ತಯಾರಿಕಾ ವೆಚ್ಚ), ಜಿಎಸ್‌ಟಿ (3% GST) ಮತ್ತು ವೇಸ್ಟೇಜ್ ಶುಲ್ಕಗಳು ಹೆಚ್ಚುವರಿಯಾಗಿ ಅನ್ವಯವಾಗುತ್ತವೆ. ಹೀಗಾಗಿ ಖರೀದಿಸುವ ಮುನ್ನ ಸ್ಥಳೀಯ ವರ್ತಕರಲ್ಲಿ ದರ ಖಚಿತಪಡಿಸಿಕೊಳ್ಳುವುದು ಉತ್ತಮ.

Share

Leave a comment

Leave a Reply

Your email address will not be published. Required fields are marked *