SUDDIKSHANA KANNADA NEWS/ DAVANAGERE/ DATE:29-08-2023
ಬೆಂಗಳೂರು: ಚುನಾವಣೆಗೆ ಮುನ್ನ ಭರವಸೆ ನೀಡಿದ್ದ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ಮೇಲೆ ಕರ್ನಾಟಕ ಗೃಹಲಕ್ಷ್ಮೀ ಯೋಜನೆ (Karnataka Gruha Lakshmi Scheme) ಜಾರಿಗೆ ಹರಸಾಹಸಪಟ್ಟಿತ್ತು. ದಿನಾಂಕಗಳನ್ನು ಮುಂದೂಡಲಾಗಿತ್ತು. ಆದ್ರೆ, ಇದೀಗ ಮುಹೂರ್ತ ಫಿಕ್ಸ್ ಆಗಿದ್ದು, ಆಗಸ್ಟ್ 30ರಂದು ಅಕೌಂಟ್ ಗೆ ಹಣ ಬೀಳಲಿದೆ.
ಈ ಸುದ್ದಿಯನ್ನೂ ಓದಿ:
Davanagere: ಸಿದ್ದೇಶ್ವರ ವಿರುದ್ಧ ಸಿಟ್ಟು, ರವೀಂದ್ರನಾಥ್ ರ ಬಗ್ಗೆ ಸಾಫ್ಟ್: ತಪ್ಪು ಮಾಡಿಲ್ಲವೆಂದರೆ ಸಿದ್ದೇಶ್ವರ ಆಣೆ ಮಾಡಲಿ: ಎಸ್ ಎಸ್ ಎಂ ಸಿಡಿಗುಂಡು
ಗೃಹಲಕ್ಷ್ಮಿ ಯೋಜನೆಯಡಿ 2000 ರೂಪಾಯಿ ಗೃಹಿಣಿಗೆ ನೀಡುವ ಯೋಜನೆ ಇದಾಗಿದೆ. ಕಳೆದ ಮೂರು ತಿಂಗಳಿನಿಂದ ಕಾಯುತ್ತಿದ್ದ ಮಹಿಳೆಯರ ಅಕೌಂಟ್ ಹಣ ಬೀಳುವ ದಿನ ಬಂದೇಬಿಟ್ಟಿದೆ.
2000 ರೂಪಾಯಿ ಯಾಕೆ ಬರಲ್ಲ ಗೊತ್ತಾ…?
- ಬ್ಯಾಂಕ್ ಅಕೌಂಟ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡದಿರುವುದು.
- ಆಧಾರ್ ಕಾರ್ಡ್ ಅಪ್ಡೇಟ್ ಆಗದಿರುವುದು.
- ಕೆ ವೈ ಸಿ ಅಪ್ಡೇಟ್ ಮಾಡಿಸದಿರುವುದು.
- ಪಡಿತರ ಚೀಟಿ ಅಪ್ಡೇಡ್ ಮಾಡದಿರುವುದು.
- ಪಡಿತರ ಚೀಟಿಯಲ್ಲಿ ಮೃತಪಟ್ಟವರ ಹೆಸರು ಡಿಲೀಟ್ ಮಾಡಿಸದೇ, ಅಪ್ಡೇಡ್ ಮಾಡದಿರುವುದು.
ಹಾಗಾದ್ರೆ ಮತ್ತೇನು ಮಾಡಬೇಕು…?
- – ಈ ತಿಂಗಳು ನೋಂದಣಿ ಕ್ಯಾನ್ಸಲ್ ಆದವರಿಗೆ ಇದೆ ಅವಕಾಶ.
- – ಆಧಾರ್ ಕಾರ್ಡ್, ರೇಷನ್ ಕಾರ್ಡ್ ಅಪ್ಡೇಟ್ ಮಾಡಿಸಿ.
- – ಬ್ಯಾಂಕ್ ಅಕೌಂಟ್ ಗೆ ಬೇಗನೇ ಆಧಾರ್ ಲಿಂಕ್ ಮಾಡಿಸಿ.
- – ಮುಂದಿನ ತಿಂಗಳು 2000 ರೂಪಾಯಿ ಪಡೆಯಲು ಕೂಡಲೇ ಅಗತ್ಯ ತಿದ್ದುಪಡಿ ಮಾಡಿಸಿ.
ರಾಜ್ಯದಲ್ಲಿ ಒಟ್ಟು 15 ರಿಂದ 17 ಲಕ್ಷ ಮಹಿಳೆಯರು 2,000 ರೂಪಾಯಿ ಪಡೆಯಲು ವಂಚಿತರಾಗಲು ಕಾರಣ ಕೆವೈಸಿ ಸಮಸ್ಯೆ. ಗೃಹಲಕ್ಷ್ಮಿಗೆ ಅರ್ಜಿ ಹಾಕಿದ 1.11 ಕೋಟಿ ಫಲಾನುಭವಿ ಮಹಿಳೆಯರಲ್ಲಿ 15 ಲಕ್ಷ ಮಹಿಳೆಯರು ಅರ್ಹರಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು ಮಾಹಿತಿ ನೀಡಿದೆ.
ಕಾಂಗ್ರೆಸ್ ಸರಕಾರದ ನಾಲ್ಕನೇ ಗ್ಯಾರಂಟಿ ಯೋಜನೆ ಗೃಹಲಕ್ಷ್ಮಿ ನಾಳೆ ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಉದ್ಘಾಟನೆಗೊಳ್ಳಲಿದ್ದು ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲಾಗುತ್ತದೆ.
ಗೃಹಲಕ್ಷ್ಮಿ ಯೋಜನೆಗೆ ಈಗಾಗಲೇ 1.11 ಕೋಟಿ ಫಲಾನುಭವಿ ಮಹಿಳೆಯರು ಅರ್ಜಿ ಸಲ್ಲಿಕೆ ಮಾಡಿದ್ದು ಈ ಪೈಕಿ 15 ಲಕ್ಷದಿಂದ 17 ಲಕ್ಷ ಮಹಿಳೆಯರು ಈ ಯೋಜನೆಯಿಂದ ವಂಚಿತರಾಗಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.