ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Davanagere: ರವೀಂದ್ರನಾಥ್ ರಿಗೆ ಇರೋ ತೂಕ ಸಿದ್ದೇಶ್ವರಗಿಲ್ಲ, ಇಬ್ಬರ ನಡುವೆ ತುಂಬಾ ವ್ಯತ್ಯಾಸ ಇದೆ : ಎಸ್. ಎಸ್. ಮಲ್ಲಿಕಾರ್ಜುನ್

On: August 29, 2023 9:03 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:29-08-2023

ದಾವಣಗೆರೆ (Davanagere): ಮಾಜಿ ಸಚಿವ ಎಸ್. ಎ. ರವೀಂದ್ರನಾಥ್ ಅವರು ಸಂಬಂಧದಲ್ಲಿ ನನಗೆ ಅಣ್ಣ ಆಗಬೇಕು. ಏಕವಚನದಲ್ಲಿಯೇ ಸಿದ್ದೇಶ್ವರ ಅವರನ್ನು ಸಂಭೋದಿಸಿ ಅವನೂ ನನಗೆ ಸಂಬಂಧಿಕನೇ. ಇಬ್ಬರ ನಡವಳಿಕೆಯಲ್ಲಿ ಭಾರೀ ವ್ಯತ್ಯಾಸ ಇದೆ. ರವೀಂದ್ರನಾಥ್ ಅವರಿಗೆ ಇರುವ ತೂಕ ಸಿದ್ದೇಶ್ವರ ಅವರಿಗಿಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ವಿಶ್ಲೇಷಿಸಿದರು.

WARNING SSM IN DAVANAGERE

ಮಾಧ್ಯಮದವರ ಜೊತೆ ಮಾತನಾಡಿದ ಅವರು, ರವೀಂದ್ರನಾಥ್ ಅವರು ನನಗೆ ಸಿದ್ದೇಶ್ವರಗಿಂತ ಮೊದಲೇ ಪರಿಚಯ. ನನಗೆ ಅಣ್ಣ ಆಗಬೇಕು. ಸಿದ್ದೇಶ್ವರ ಹಾಗೂ ರವೀಂದ್ರನಾಥ್ ಇಬ್ಬರೂ ನನಗೆ ಸಂಬಂಧಿಕರೇ. ರವೀಂದ್ರನಾಥ್ ಅವರಿಗೂ ಸಿದ್ದೇಶ್ವರರಿಗೂ ಬಹಳ ವ್ಯತ್ಯಾಸ ಇದೆ. ಪ್ರತಿಯೊಂದು ವಿಚಾರಗಳಲ್ಲಿಯೂ ಅಷ್ಟೇ. ಅವರ ತೂಕ ಸಿದ್ದೇಶ್ವರಗೆ ಬರೋಲ್ಲ.  ಪಾಪ ರವೀಂದ್ರನಾಥ್ ಅವರಿಗೆ ಮೈಯಲ್ಲಿ ಹುಷಾರಿರಲಿಲ್ಲ. ಆದ್ರೂ ಶ್ರಮ ಪಟ್ಟಿದ್ದಾರೆ. ಹೋರಾಟದಿಂದ ಮೇಲೆ ಬಂದವರು. ಹಾಗಾಗಿ, ಅವರಿಗೆ ಬೆಲೆ ಇದೆ. ನಮಗೂ ಅವರ ಬಗ್ಗೆ ಗೌರವ ಇದೆ. ಅದನ್ನು ಬಿಟ್ಟು ರವೀಂದ್ರನಾಥ್ ಹಾಗೂ ನಾವು ಹೊಂದಾಣಿಕೆ ಮಾಡಿಕೊಂಡಿದ್ದೇವೆ ಎಂದರೆ ಅರ್ಥವೇನು..? ಎಂದು ಪ್ರಶ್ನಿಸಿದರು.

ಈ ಸುದ್ದಿಯನ್ನೂ ಓದಿ:

Davanagere: ಸಿದ್ದೇಶ್ವರ ವಿರುದ್ಧ ಸಿಟ್ಟು, ರವೀಂದ್ರನಾಥ್ ರ ಬಗ್ಗೆ ಸಾಫ್ಟ್: ತಪ್ಪು ಮಾಡಿಲ್ಲವೆಂದರೆ ಸಿದ್ದೇಶ್ವರ ಆಣೆ ಮಾಡಲಿ: ಎಸ್ ಎಸ್ ಎಂ ಸಿಡಿಗುಂಡು

ರವೀಂದ್ರನಾಥ್ ಯಾವಾಗ ನನಗೆ ತೊಂದರೆ ಕೊಟ್ಟಿದ್ದಾರೆ. ಚೌಕಿಪೇಟೆಯಲ್ಲಿ ಅಂಗಡಿಯಿತ್ತು. ನಾನು ಕುಳಿತುಕೊಳ್ಳುತ್ತಿದ್ದೆ. ಆವಾಗಿನಿಂದಲೇ ಅವರನ್ನು ಬಲ್ಲೆ. ಒಬ್ಬರೇ ಹೋರಾಟ ಮಾಡಿಕೊಂಡು ರಾಜಕೀಯವಾಗಿ ಮೇಲೆ ಬಂದವರು. ಆ ವೇಳೆಯಲ್ಲಿಯೂ ಬಲ್ಲೆ. ರವೀಂದ್ರನಾಥ್ ಅವರು ನಾನು ಸ್ನೇಹಿತರು. ಯಾಕೆ ಸ್ನೇಹ ಇರಬಾರದಾ ಎಂದು ಹೇಳಿದರು.

ಇದೇ ಮೊದಲು:

ಹೊನ್ನಾಳಿ ಮಾಜಿ ಶಾಸಕ ಎಂ. ಪಿ. ರೇಣುಕಾಚಾರ್ಯ ನನ್ನ ಮನೆಗೆ ಬಂದು ಮಾತನಾಡಿಸಿದ್ದು ಇದೇ ಮೊದಲು. ಮನೆಗೆ ಬಂದು ಮಾತನಾಡಿದರೆ ಬೇಡ ಎನ್ನಲೇ. ಮಾತನಾಡಿಸಲೇಬೇಕಲ್ವಾ. ಹೊನ್ನಾಳಿ – ನ್ಯಾಮತಿ ಅವಳಿ ತಾಲೂಕು
ಬರಪೀಡಿತ ಎಂದು ಘೋಷಿಸಲು ಮನವಿ ಸಲ್ಲಿಸಲು ಬಂದಿದ್ದರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ. ಕೆ. ಶಿವಕುಮಾರ್, ಕಂದಾಯ ಸಚಿವ ಕೃಷ್ಣಭೈರೇಗೌಡ ಹಾಗೂ ನನ್ನನ್ನು ಭೇಟಿ ಮಾಡಿದ್ದರು ಅಷ್ಟೇ. ಅವರ ಪಕ್ಷದಲ್ಲಿ ಏನು ನಡೆಯುತ್ತಿದೆ
ಎಂಬುದು ನನಗೇನೂ ಗೊತ್ತು ಎಂದು ಹೇಳಿದರು.

ನಾನು ಜ್ಯೋತಿಷಿ ಅಲ್ಲ:

ಡಿಸೆಂಬರ್ ಗೆ ಲೋಕಸಭೆ ಚುನಾವಣೆ ನಡೆಯಬಹುದು ಎಂದು ಹೇಳಲು ನಾನು ಜ್ಯೋತಿಷಿ ಅಲ್ಲ, ಜ್ಯೋತಿಷ್ಯವೂ ಗೊತ್ತಿಲ್ಲ. ಪಶ್ಛಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಏನಾದರೂ ಮಾಹಿತಿ ಇರಬಹುದು. ಆಂತರಿಕವಾಗಿ ಗೊತ್ತಾಗಿರಬಹುದು ಎಂದರು.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಏನೇನೋ ಹೇಳುತ್ತಿರುತ್ತಾರೆ. ಇನ್ನೊಬ್ಬರ ಮೇಲೆ ಹೇಳುತ್ತಲೇ ಇರುತ್ತಾರೆ. ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ತಿಳಿಸಿದರು.

 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment