Home ಉದ್ಯೋಗ ವಾರ್ತೆ Army Canteen Bangalore: ಅಸಿಸ್ಟೆಂಟ್ ಮ್ಯಾನೇಜರ್, ಸ್ಟೋರ್‌ಕೀಪರ್ ಸೇರಿ ಹಲವು ಹುದ್ದೆಗಳ ನೇಮಕಾತಿ, ಜುಲೈ 31 ಕೊನೆ ದಿನ
ಉದ್ಯೋಗ ವಾರ್ತೆದಾವಣಗೆರೆಬೆಂಗಳೂರು

Army Canteen Bangalore: ಅಸಿಸ್ಟೆಂಟ್ ಮ್ಯಾನೇಜರ್, ಸ್ಟೋರ್‌ಕೀಪರ್ ಸೇರಿ ಹಲವು ಹುದ್ದೆಗಳ ನೇಮಕಾತಿ, ಜುಲೈ 31 ಕೊನೆ ದಿನ

Share
ನೇಮಕಾತಿ
Share

ಬೆಂಗಳೂರು: ಕರ್ನಾಟಕದ ನಿರುದ್ಯೋಗಿ ಮಾಜಿ ಸೈನಿಕರು ಹಾಗೂ ಅವರ ಕುಟುಂಬದ ಅವಲಂಬಿತರಿಗೆ ಭಾರತೀಯ ಸೇನೆಯು ಭರ್ಜರಿ ಉದ್ಯೋಗಾವಕಾಶವೊಂದನ್ನು ತಂದಿದೆ. ಬೆಂಗಳೂರಿನ ಕಬ್ಬನ್ ರಸ್ತೆಯಲ್ಲಿರುವ ಪ್ರಧಾನ ಕಛೇರಿ ಕೆ ಆಂಡ್ ಕೆ ಸಬ್ ಏರಿಯಾ ವ್ಯಾಪ್ತಿಯ ಒಳಪಡುವ ‘ಗೋಲ್ಡನ್ ಪಾಮ್ ಸ್ಟೇಷನ್ ಕ್ಯಾಂಟೀನ್’ (GPSC) ಮತ್ತು ಅದರ ವಿಸ್ತರಣಾ ಕೇಂದ್ರಗಳಲ್ಲಿ ಖಾಲಿ ಇರುವ ಒಟ್ಟು 52 ವಿವಿಧ ಹುದ್ದೆಗಳ ಭರ್ಜಿಗೆ ಅಧಿಕೃತ ನೇಮಕಾತಿ ಪ್ರಕಟಣೆ ಹೊರಡಿಸಲಾಗಿದೆ.

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಜುಲೈ 31, 2026 ರೊಳಗಾಗಿ ಆನ್‌ಲೈನ್ (ಇಮೇಲ್) ಅಥವಾ ನೋಂದಾಯಿತ ಅಂಚೆ (Registered Post) ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರ ಮತ್ತು ಮಾಸಿಕ ಗೌರವ ಧನ (Honorarium):

ಈ ನೇಮಕಾತಿಯು ಸಂಪೂರ್ಣವಾಗಿ 11 ತಿಂಗಳ ಒಪ್ಪಂದದ (Contract Basis) ಆಧಾರದ ಮೇಲೆ ನಡೆಯಲಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಗುಣವಾಗಿ 20,000 ರೂ. ನಿಂದ 32,000 ರೂ. ವರೆಗೆ ಮಾಸಿಕ ಗೌರವ ಧನ ನೀಡಲಾಗುತ್ತದೆ.

ಜಾಯಿಂಟ್ ಮ್ಯಾನೇಜರ್ (ಅಕೌಂಟ್ಸ್): 01 ಹುದ್ದೆ (ಗೌರವ ಧನ: ₹32,000/-)

ಅಸಿಸ್ಟೆಂಟ್ ಮ್ಯಾನೇಜರ್: 02 ಹುದ್ದೆಗಳು (ಗೌರವ ಧನ: ₹27,000/-)

ಸ್ಟೋರ್‌ಕೀಪರ್: 05 ಹುದ್ದೆಗಳು (ಬೆಂಗಳೂರು ಹಾಗೂ ಆರ್‌ಎಸ್‌ಎಒಐ ಸೇರಿ)

ಬಿಲ್ಲಿಂಗ್ ಕ್ಲರ್ಕ್ ಮತ್ತು ಸೇಲ್ಸ್‌ಪರ್ಸನ್: ಅತಿ ಹೆಚ್ಚು ಹುದ್ದೆಗಳು ಲಭ್ಯವಿದ್ದು, ಬೆಂಗಳೂರು, ಮೈಸೂರು, ಹಾಸನ, ಕೆ.ಜಿ.ಎಫ್ ಕೇಂದ್ರಗಳಲ್ಲಿ ನೇಮಕಾತಿ ನಡೆಯಲಿದೆ.

ಇತರ ಹುದ್ದೆಗಳು: ಕಂಪ್ಯೂಟರ್ ತಂತ್ರಜ್ಞರು, ಸೆಕ್ಯೂರಿಟಿ ಸೂಪರ್‌ವೈಸರ್, ವಾಚ್‌ಮನ್ ಮತ್ತು ಎಂಟಿಎಸ್ (MTS).

ಅರ್ಹತೆಗಳು ಯಾರಿಗಿದೆ?

ನಿವೃತ್ತ ಗೌರವಾನ್ವಿತ ಕ್ಯಾಪ್ಟನ್/ಲೆಫ್ಟಿನೆಂಟ್, ಜೆಸಿಒ (JCO), ಎನ್‌ಸಿಒ (NCO) ಅಧಿಕಾರಿಗಳು ಹಾಗೂ ಮಾಜಿ ಸೈನಿಕರ (ESM) ಅಥವಾ ಪ್ರಸ್ತುತ ಸೇವೆಯಲ್ಲಿರುವ ಸಿಬ್ಬಂದಿಗಳ ಅವಲಂಬಿತರು (ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು) ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಗಮನಿಸಿ:

ವಯೋಮಿತಿ ಮತ್ತು ನಿರ್ದಿಷ್ಟ ಶೈಕ್ಷಣಿಕ ಅರ್ಹತೆಗಳ ಸಂಪೂರ್ಣ ವಿವರಗಳಿಗಾಗಿ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್ gpcscblr.co.in ಗೆ ಭೇಟಿ ನೀಡಲು ಕೋರಲಾಗಿದೆ.

ಅರ್ಜಿ ಸಲ್ಲಿಕೆ ಹೇಗೆ?

ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ನಿಂದ ಅಪ್ಲಿಕೇಶನ್ ಫಾರ್ಮ್ ಡೌನ್‌ಲೋಡ್ ಮಾಡಿಕೊಂಡು, ಅದನ್ನು ಭರ್ತಿ ಮಾಡಿ, ಗರಿಷ್ಠ 2 ಪುಟಗಳ ರೆಸ್ಯೂಮ್ (CV) ಮತ್ತು ಅಗತ್ಯ ದಾಖಲೆಗಳೊಂದಿಗೆ (PPO ನಕಲು, ವೈದ್ಯಕೀಯ ಪ್ರಮಾಣಪತ್ರ ಇತ್ಯಾದಿ) ಕೆಳಗಿನ ವಿಳಾಸಕ್ಕೆ ತಲುಪಿಸಬೇಕು.

ಅಂಚೆ ವಿಳಾಸ: Canteen Officer, Golden Palm Canteen Cell, C/o HQ K & K Sub Area, Cubbon Road, Bangalore – 560001.

ಇಮೇಲ್ ವಿಳಾಸ: ನಿಮ್ಮ ಅರ್ಜಿಗಳನ್ನು ಸ್ಕ್ಯಾನ್ ಮಾಡಿ gpccellkksa@gmail.com ಗೆ ಸಹ ಕಳುಹಿಸಬಹುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31 ಜುಲೈ 2026

Share

Leave a comment

Leave a Reply

Your email address will not be published. Required fields are marked *