Home ಕ್ರೈಂ ನ್ಯೂಸ್ ದಾವಣಗೆರೆಯಲ್ಲಿ ‘ಜಿಮ್ ಜಿಹಾದ್’ ಆರೋಪ: ಮಹಿಳೆಯರ ವಿಡಿಯೋ ಚಿತ್ರೀಕರಣ, ಬ್ಲ್ಯಾಕ್‌ಮೇಲ್ ವಿರುದ್ಧ ಮಣಿ ಸರ್ಕಾರ್ ಆಕ್ರೋಶ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿ

ದಾವಣಗೆರೆಯಲ್ಲಿ ‘ಜಿಮ್ ಜಿಹಾದ್’ ಆರೋಪ: ಮಹಿಳೆಯರ ವಿಡಿಯೋ ಚಿತ್ರೀಕರಣ, ಬ್ಲ್ಯಾಕ್‌ಮೇಲ್ ವಿರುದ್ಧ ಮಣಿ ಸರ್ಕಾರ್ ಆಕ್ರೋಶ!

Share
ದಾವಣಗೆರೆ
Share

ದಾವಣಗೆರೆ: ನಗರದ ನಿಟುವಳ್ಳಿಯ ದುರ್ಗಾಂಬಿಕ ಹೈಸ್ಕೂಲ್ ರಸ್ತೆ ಸಮೀಪವಿರುವ ‘ಪವರ್ ಫಿಟ್‌ನೆಸ್’ ಜಿಮ್‌ನ ಮಾಲೀಕ ಇಸ್ಮಾಯಿಲ್ ಎಂಬಾತ ಮಹಿಳೆಯರ ಮುಗ್ಧತೆಯನ್ನು ದುರುಪಯೋಗಪಡಿಸಿಕೊಂಡು ಘೋರ ಅಪರಾಧ ಎಸಗಿದ್ದಾನೆ ಎಂದು ಶ್ರೀರಾಮ ಸೇನೆ ರಾಜ್ಯ ಮುಖಂಡ ಮಣಿ ಸರ್ಕಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಾವಣಗೆರೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಜಿಮ್ ವಿರುದ್ಧ ವ್ಯಾಪಕ ಜನಜಾಗೃತಿ ಮೂಡಿಸಲಾಗುವುದು ಎಂದು ಎಚ್ಚರಿಸಿದರು. ಹುಬ್ಬಳ್ಳಿ, ಧಾರವಾಡ, ಬೆಂಗಳೂರು ಹಾಗೂ ಗದಗ್‌ನಂತಹ ನಗರಗಳಲ್ಲಿ ಕೇಳಿಬರುತ್ತಿದ್ದ ‘ಜಿಮ್ ಜಿಹಾದ್’ ಕೃತ್ಯಗಳು ಈಗ ನಮ್ಮ ಶಾಂತಿಯುತ ದಾವಣಗೆರೆಗೂ ಕಾಲಿಟ್ಟಿರುವುದು ಆಘಾತಕಾರಿ ಮತ್ತು ವಿಕೃತ ಮಾನಸಿಕತೆಯ ಸಂಕೇತವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ವಿಡಿಯೋ ಚಿತ್ರೀಕರಣ, ಬ್ಲ್ಯಾಕ್‌ಮೇಲ್ ಆರೋಪ:

ಜಿಮ್ಮಿಗೆ ತರಬೇತಿಗಾಗಿ ಬರುತ್ತಿದ್ದ ಹೆಣ್ಣುಮಕ್ಕಳ ಮುಗ್ಧತೆಯನ್ನು ದುರುಪಯೋಗಪಡಿಸಿಕೊಂಡು, ಅವರ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ರಹಸ್ಯವಾಗಿ ಚಿತ್ರೀಕರಿಸಿಕೊಳ್ಳಲಾಗುತ್ತಿತ್ತು. ಬಳಿಕ ಇವುಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುವ ಮೂಲಕ ಹಣಕ್ಕೆ ಬೇಡಿಕೆ ಇಡಲಾಗುತ್ತಿದೆ. ಅಷ್ಟೇ ಅಲ್ಲದೆ, ಸಂತ್ರಸ್ತ ಮಹಿಳೆಯರ ಪೋಷಕರು ಮತ್ತು ಸ್ನೇಹಿತರನ್ನು ತನಗೆ ಪರಿಚಯಿಸುವಂತೆ ಒತ್ತಾಯಿಸಿ, ಒಂದು ನಿರ್ದಿಷ್ಟ ಸಮುದಾಯದ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸಂಚು ರೂಪಿಸಲಾಗಿದೆ ಎಂದು ಮಣಿ ಸರ್ಕಾರ್ ಗಂಭೀರವಾಗಿ ಆರೋಪಿಸಿದರು.

ಇದೇ ವೇಳೆ ಹಳೆಯ ಘಟನೆಯನ್ನು ನೆನಪಿಸಿದ ಅವರು, ಎರಡು ವರ್ಷಗಳ ಹಿಂದೆ ನಗರದ ಶಿವಪ್ಪಯ್ಯ ವೃತ್ತದಲ್ಲಿರುವ ‘ಫೈರ್ ಫಿಟ್‌ನೆಸ್’ ಜಿಮ್‌ನ ಮಾಲೀಕ ಮೋಹಿನ್ ಎಂಬಾತನ ವಿರುದ್ಧವೂ ಇಂತಹುದೇ ಕೃತ್ಯ ಎಸಗಿದ ಆರೋಪದ ಮೇಲೆ ದೂರು ದಾಖಲಾಗಿತ್ತು ಎಂದರು.

ಗೋಷ್ಠಿಯಲ್ಲಿ ಹಿಂದೂ ಪರ ಸಂಘಟನೆ ಹೋರಾಟಗಾರ ಸತೀಶ್ ಪೂಜಾರಿ, ಶ್ರೀರಾಮಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ. ಸಾಗರ್, ಜಿಲ್ಲಾ ವಕ್ತಾರ ಆಲೂರು ರಾಜಶೇಖರ್, ಜಿಲ್ಲಾ ಉಸ್ತುವಾರಿ ಶ್ರೀಧರ್ ಕಮ್ಮಾಳು, ಮಾಧ್ಯಮ ಪ್ರಮುಖ್ ವಿನೋದ್ ರಾಜ್, ಶ್ರೀಧರ್ ಕಮ್ಮಾಸ್, ಶಿವಕುಮಾರ್ ಪೂಜಾರ್, ರಾಜು ದೊಡ್ಡಮನಿ, ವಿನೋದ್ ರಾಜ್, ಮಧು, ಮಂಜುನಾಥ್, ರಾಘು ಪಳನಿ, ಅವಿನಾಶ್, ಶ್ರೀಕಾಂತ್, ಶಶಿ, ಸುನೀಲ್, ರುದ್ರೇಶ್, ಚಂದ್ರು, ಅರುಣ್ ಮತ್ತಿತರರು ಹಾಜರಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles