SUDDIKSHANA KANNADA NEWS/ DAVANAGERE/ DATE:29-08-2023
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ರಾಶಿಗಳಿಗೆ ಒಳಿತು, ಯಾವ ರಾಶಿ(Rashi)ಗೆ ಕೆಡುಕು ಎಂಬುದನ್ನು ನೋಡಲಾಗುತ್ತದೆ. ಪ್ರತಿಯೊಂದು ರಾಶಿಯದ್ದು ದಿನಭವಿಷ್ಯವೂ ದಿನ ಕಳೆದಂತೆ ಬೇರೆ ಬೇರೆಯದ್ದೇ ಆಗಿರುತ್ತದೆ. ಮೇಷ, ವೃಷಭ, ಮಿಥುನ, ಸಿಂಹ, ಕರ್ಕ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ. ಹಾಗೆಯೇ 27 ರಾಶಿಗಳಿಗೆ ಭವಿಷ್ಯ ಹೇಳಬಹುದು. ಪ್ರತಿಯೊಂದು ಮೊತ್ತವು ತನ್ನದೇ ಆದ ಸ್ವಭಾವ ಮತ್ತು ಗುಣಲಕ್ಷಣಗಳನ್ನು ಹೊಂದಿದೆ, ಆದ್ದರಿಂದ ಗ್ರಹಗಳ ಜೀವನದಲ್ಲಿ ಸಂಭವಿಸುವ ಸಂದರ್ಭಗಳು ಪ್ರತಿ ದಿನದ ಗ್ರಹಗಳಿಗೆ ಅನುಗುಣವಾಗಿ ಬದಲಾಗುತ್ತವೆ.
ಈ ಸುದ್ದಿಯನ್ನೂ ಓದಿ:
Siddaramaiah: ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕಿ, ಸುಳ್ಳು ಸುದ್ದಿ ಹರಡಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಕೇಸ್ ದಾಖಲಿಸಿ ಜೈಲಿಗಟ್ಟಿ: ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ
ಈ ದೈನಂದಿನ ಜಾತಕ ಫಲಿತಾಂಶಗಳಲ್ಲಿ ನಿಖರವಾದ ಖಗೋಳ ಲೆಕ್ಕಾಚಾರಗಳ ಆಧಾರದ ಮೇಲೆ ತತ್ವಶಾಸ್ತ್ರವನ್ನು ಬರೆದಿದೆ. ಅಲ್ಲದೆ, ನಾವು ವಾರದ ಜಾತಕಗಳಲ್ಲಿ ಚಿಕ್ಕ ಜ್ಯೋತಿಷ್ಯ ಲೆಕ್ಕಾಚಾರಗಳನ್ನು ನೋಡಿದ್ದೇವೆ. ಅದೇ ಮಾನದಂಡವು ಮಾಸಿಕ ರಾಶಿ ಫಲಗಳಿಗೆ ಅನ್ವಯಿಸುತ್ತದೆ. ವರ್ಷದ ಜಾತಕ ಫಲಿತಾಂಶಗಳಲ್ಲಿ, ನಮ್ಮ ಅನುಭವಿ ಜ್ಯೋತಿಷಿಗಳು ಎಲ್ಲಾ ವಿಷಯಗಳನ್ನು ಅಂದರೆ ಆರೋಗ್ಯ, ವೈವಾಹಿಕ ಜೀವನ, ಪ್ರೀತಿ, ಸಂಪತ್ತು, ಸಮೃದ್ಧಿ, ಕುಟುಂಬ ಮತ್ತು ವ್ಯಾಪಾರ, ವೃತ್ತಿ ಇತ್ಯಾದಿಗಳನ್ನು ಎಲ್ಲಾ ಗ್ರಹಗಳ ಬದಲಾವಣೆಗಳ ಮೂಲಕ ಕೂಲಂಕಷವಾಗಿ ಮಾಹಿತಿ ಇರಲಿದೆ.
ಮೇಷ ರಾಶಿ (Rashi):
ಈ ದಿನ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಹಣದ ಹರಿವು ನಿಮಗೆ ಬರಲಿದೆ. ಆದರೆ, ಹುಷಾರಾಗಿ ವರ್ತನೆ ಮಾಡಬೇಕು. ಕೋಪ ಮಾಡಿಕೊಳ್ಳಬೇಡಿ.
ವೃಷಭ ರಾಶಿ (Rashi):
ವೃಷಭ ರಾಶಿಯವರು ಪ್ರಯಾಣದಲ್ಲಿ ಎಚ್ಚರ ವಹಿಸುವುದು ಒಳಿತು. ಅಪಘಾತವಾಗುವ ಸಾಧ್ಯತೆ ಹೆಚ್ಚಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲ ಮುನ್ಸೂಚನೆ ಮಾತ್ರ ನೀಡಲಾಗುತ್ತದೆ. ಸ್ವಲ್ಪ ಹುಷಾರಾಗಿರಿ. ಆದಷ್ಟು ದೂರದ ಪ್ರಯಾಣ ನಿಲ್ಲಿಸಿ.
ಮಿಥುನ ರಾಶಿ (Rashi):
ಉದ್ಯೋಗದಲ್ಲಿ ಇಂದು ಉತ್ತಮ ಅವಕಾಶ ಸಿಗುವ ಸಾಧ್ಯತೆ ಇದೆ. ನೀವು ಬಹಳ ದಿನಗಳಿಂದ ಕಾದಿದ್ದರೆ ಕೆಲಸ ಸಿಗುವ ಸಾಧ್ಯತೆ ಹೆಚ್ಚಿದೆ. ಮೈಮರೆಯದೇ ದುರ್ಗಾ ದೇವಿ ಆರಾಧಿಸಿ, ಪ್ರಾರ್ಥಿಸಿ.
ಕಟಕ ರಾಶಿ (Rashi):
ಕಟಕ ರಾಶಿಯವರು ಸಂಬಂಧಿಕರ ಜೊತೆ ಉತ್ತಮ ಸಂಹವನ ಇಟ್ಟುಕೊಳ್ಳಿ. ಆಸ್ತಿ ವಿಚಾರ ಬಂದರೆ ಹೆಚ್ಚು ಮಾತನಾಡಲು ಹೋಗಬೇಡಿ. ಜಗಳ ಮಾಡಬೇಡಿ. ಸ್ವಲ್ಪ ಎಚ್ಚರ ವಹಿಸಿ, ಜೊತೆಗೆ ತಾಳ್ಮೆಯಿಂದಿರಿ.
ಸಿಂಹ ರಾಶಿ (Rashi):
ಸಿಂಹ ರಾಶಿಯವರು ಕೋಪ ಮಾಡಿಕೊಳ್ಳಬಾರದು. ಮಹಿಳೆಯರಿಗೆ ಒಳ್ಳೆಯ ದಿನ. ಮಂಗಳ ಗೌರಿ ವ್ರತ ಇರುವ ಕಾರಣ ಗೌರಿಯನ್ನು ಆರಾಧಿಸಿ ಪೂಜಿಸಿ. ಮನೆಯಲ್ಲಿ ಲಕ್ಷ್ಮೀ ನೆಲೆಸುವ ಸಾಧ್ಯತೆ ಇದೆ.
ಕನ್ಯಾ ರಾಶಿ (Rashi):
ಕನ್ಯಾ ರಾಶಿಯವರ ಕೋರ್ಟ್ ನಲ್ಲಿ ಆಸ್ತಿ ವಿಚಾರದ ವ್ಯಾಜ್ಯಗಳಿದ್ದರೆ, ಅದು ತೀರ್ಪು ನೀಡುವ ಹಂತಕ್ಕೆ ಬಂದಿದ್ದರೆ ನಿಮಗೆ ಒಳಿತಾಗಲಿದೆ. ನೀವಂದು ಕೊಂಡದ್ದು ಆದರೂ ಆಗುತ್ತದೆ. ದೇವಿಯರನ್ನು ಪ್ರಾರ್ಥಿಸಿ ಕೋರ್ಟ್ ಗೆ ಹೋಗಿ.
ತುಲಾ ರಾಶಿ (Rashi):
ತುಲಾ ರಾಶಿಯವರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಬಿಸಿಲಿಗೆ ಹೊರಹೋಗದಿದ್ದರೆ ಒಳಿತು. ಅನಿವಾರ್ಯವಾದರೆ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಛತ್ರಿ ತೆಗೆದುಕೊಂಡು ಹೋಗಿ. ಆರೋಗ್ಯದ ಬಗ್ಗೆಕಾಳಜಿ ವಹಿಸಲೇಬೇಕು.
ವೃಶ್ಚಿಕ ರಾಶಿ (Rashi):
ವೃಶ್ಚಿಕ ರಾಶಿಯವರಿಗೆ ಶತ್ರು ಕಾಟ ಜಾಸ್ತಿ. ಯಾಕೆಂದರೆ ನೇರ ನಡೆ, ನುಡಿ, ಪ್ರಾಮಾಣಿಕರಾಗಿರುವ ಇವರಿಗೆ ಯಾರಾದರೂ ಸುಖಾಸುಮ್ಮನೆ ತಂಟೆಗೆ ಬಂದರೆ ಸುಮ್ಮನಿರಲ್ಲ. ಆದ್ರೂ ವೃಶ್ಚಿಕ ರಾಶಿಯವರು ಇಂದು ತಾಳ್ಮೆಯಿಂದ ಇರಿ. ನಿಮಗೆ ದೇವಿ ಒಳಿತು ಮಾಡುತ್ತಾಳೆ.
ಧನುಸ್ಸು ರಾಶಿ (Rashi):
ಧನಸ್ಸು ರಾಶಿಯವರಿಗೆ ಐಶ್ವರ್ಯ ಸಿಗುವ ಸಾಧ್ಯತೆ ಇದೆ. ಬೇರೆ ಮೂಲಗಳಿಂದ ಹಣ ಹರಿದು ಬರುವ ಸಾಧ್ಯತೆ ಇದೆ. ಆದ್ರೂ ಹುಷಾರಾಗಿದ್ದರೆ ಒಳಿತು.
ಮಕರ ರಾಶಿ (Rashi):
ನಿಮ್ಮ ವೈಯಕ್ತಿಕ ವಿಚಾರಗಳನ್ನು ಯಾರ ಬಳಿ ಹೇಳಿಕೊಳ್ಳಬೇಡಿ. ಯಾಕೆಂದರೆ ಈ ಕಾಲದಲ್ಲಿ ಯಾರನ್ನೂ ನಂಬುವಂತಿಲ್ಲ. ನಿಮಗೆ ಮೋಸ ಮಾಡುವವರೇ ಹೆಚ್ಚು.
ಕುಂಭ ರಾಶಿ (Rashi):
ಕುಂಭ ರಾಶಿಯ ವಿದ್ಯಾರ್ಥಿಗಳು ಓದಿನತ್ತ ಗಮನ ಕೊಡಿ. ತರಗತಿ ತಪ್ಪಿಸಿಕೊಳ್ಳಬೇಡಿ. ವಿದ್ಯಾರ್ಥಿಗಳಿಗೆ ಶುಭ ಸಮಾಚಾರ ಇದೆ. ಈ ದಿನ ಓದಿನ ಕಡೆಗೆ ಹೆಚ್ಚು ಗಮನ ನೀಡಿ.
ಮೀನ ರಾಶಿ (Rashi):
ಮೀನಾ ರಾಶಿಯವರು ಈ ದಿನದಂದು ಪೂಜೆ ಸಲ್ಲಿಸಿ. ಮಂಗಳವಾರ ಒಳ್ಳೆಯ ದಿನವಾಗಿದ್ದು, ಶ್ರಾವಣವೂ ಇದೆ. ಹಾಗಾಗಿ, ದುರ್ಗೆಯರ ಆರಾಧನೆ ಮಾಡಿ. ನಿಮಗೆ ದೇವಿಯರ ಆಶೀರ್ವಾದ ಸಿಗುತ್ತದೆ.