Home ಕ್ರೈಂ ನ್ಯೂಸ್ ಆಸ್ತಿ, ಸರ್ಕಾರಿ ಕೆಲಸಕ್ಕಾಗಿ ಹೆತ್ತ ತಾಯಿಯನ್ನೇ 7 ಲಕ್ಷ ರೂಗೆ ಸುಪಾರಿ ಕೊಟ್ಟು ಕೊಂದ ಮಗಳು: ಸ್ಕಾರ್ಪಿಯೋ ಕಾರು ಹರಿಸಿ ಹತ್ಯೆ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಆಸ್ತಿ, ಸರ್ಕಾರಿ ಕೆಲಸಕ್ಕಾಗಿ ಹೆತ್ತ ತಾಯಿಯನ್ನೇ 7 ಲಕ್ಷ ರೂಗೆ ಸುಪಾರಿ ಕೊಟ್ಟು ಕೊಂದ ಮಗಳು: ಸ್ಕಾರ್ಪಿಯೋ ಕಾರು ಹರಿಸಿ ಹತ್ಯೆ!

Share
ತಾಯಿ
Share

ಜೈಪುರ: ಆಸ್ತಿ ಹಪಾಹಪಿ ಮತ್ತು ಅನುಕಂಪದ ಆಧಾರದ ಮೇಲೆ ಸಿಗುವ ಸರ್ಕಾರಿ ಕೆಲಸದ ಆಸೆಗಾಗಿ ಸ್ವಂತ ಮಗಳೇ ಸುಪಾರಿ ಕೊಲೆಗಾರರ ನೆರವಿನಿಂದ ಹೆತ್ತ ತಾಯಿಯನ್ನು ಭೀಕರವಾಗಿ ಹತ್ಯೆ ಮಾಡಿಸಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ಬೆಳಕಿಗೆ ಬಂದಿದೆ.

ಅಪಘಾತ ಎಂದು ಬಿಂಬಿಸಲು ಯತ್ನ:

ಜುಲೈ 3 ರಂದು ಜೈಪುರದ ಪ್ರತಾಪ್ ನಗರದಲ್ಲಿ 45 ವರ್ಷದ ನೀರಜ್ ಶರ್ಮಾ ಎಂಬ ಮಹಿಳೆಗೆ 130 ಕಿ.ಮೀ ವೇಗದಲ್ಲಿ ಬಂದ ಸ್ಕಾರ್ಪಿಯೋ ಕಾರೊಂದು ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ರಭಸಕ್ಕೆ ನೀರಜ್ ಅವರು ಬರೋಬ್ಬರಿ 100 ಅಡಿ ದೂರಕ್ಕೆ ಬಿದ್ದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದರು. ಇದನ್ನು ಕೇವಲ ರಸ್ತೆ ಅಪಘಾತ ಎಂದು ಬಿಂಬಿಸಲು ಆರೋಪಿಗಳು ಯತ್ನಿಸಿದ್ದರು. ಆದರೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರಿಗೆ ಇದು ಉದ್ದೇಶಪೂರ್ವಕವಾಗಿ ಮಾಡಿದ ಕೊಲೆ ಎಂಬುದು ತಿಳಿದುಬಂದಿದೆ.

ಕೊಲೆಗೆ ಕಾರಣವೇನು?:

ಮೃತ ನೀರಜ್ ಶರ್ಮಾ ಅವರ ಪತಿ ಒಂದು ವರ್ಷದ ಹಿಂದೆ ನಿಧನರಾಗಿದ್ದರು. ಪತಿಯ ನಿಧನದ ನಂತರ ನೀರಜ್ ಅವರಿಗೆ ನ್ಯಾಯಾಲಯದಲ್ಲಿ ಲೋವರ್ ಡಿವಿಷನ್ ಕ್ಲರ್ಕ್ (LDC) ಆಗಿ ಅನುಕಂಪದ ಆಧಾರದ ಮೇಲೆ ಸರ್ಕಾರಿ ಕೆಲಸ ಸಿಕ್ಕಿತ್ತು. ಆದರೆ ಈ ಕೆಲಸ ತನಗೆ ಸಿಗಬೇಕಿತ್ತೆಂದು 23 ವರ್ಷದ ಮಗಳು ಆಯುಷಿ ಶರ್ಮಾ ಹಠ ಹಿಡಿದಿದ್ದಳು. ಇದಲ್ಲದೆ ಕಳೆದ 2-3 ವರ್ಷಗಳಿಂದ ತಾಯಿ-ಮಗಳ ನಡುವೆ ಆಸ್ತಿ ವಿವಾದವೂ ನಡೆದಿತ್ತು. ಇದೇ ಕಾರಣಕ್ಕೆ ತಾಯಿಯನ್ನು ಮುಗಿಸಲು ಮಗಳು ಸ್ಕೆಚ್ ಹಾಕಿದ್ದಾಳೆ.

7 ಲಕ್ಷ ರೂ. ಸುಪಾರಿ:

ತಾಯಿಯನ್ನು ಕೊಲ್ಲಲು ಮಗಳು ಆಯುಷಿ, ತನ್ನ ತಂದೆಯ ಸಹೋದರ (ಚಿಕ್ಕಪ್ಪ) ಮೋಹನ್ ಸ್ವರೂಪ್ ಮತ್ತು ಸೋದರಸಂಬಂಧಿ ಬಲರಾಮ್ ಎಂಬುವವರ ಜೊತೆ ಕೈಜೋಡಿಸಿದ್ದಾಳೆ. ತಾಯಿಯನ್ನು ಕೊಲ್ಲಲು ಭರತ್‌ಪುರ ಮೂಲದ ಹೇಮಂತ್ ಶರ್ಮಾ ಎಂಬಾತನಿಗೆ 7 ಲಕ್ಷ ರೂಪಾಯಿ ಸುಪಾರಿ ನೀಡಲಾಗಿತ್ತು. ಸುಮಾರು ಒಂದು ತಿಂಗಳಿನಿಂದ ನೀರಜ್ ಅವರ ಚಲನವಲನಗಳನ್ನು ಗಮನಿಸಿ, ಅವರು ಮಗನನ್ನು ಕೋಚಿಂಗ್ ಸೆಂಟರ್‌ಗೆ ಬಿಟ್ಟು ಬರುತ್ತಿದ್ದಾಗ ಸ್ಕಾರ್ಪಿಯೋ ಕಾರನ್ನು ಹರಿಸಿ ಕೊಲೆ ಮಾಡಲಾಗಿದೆ.

ಸದ್ಯ ಪೊಲೀಸರು ಮಗಳು ಆಯುಷಿ ಶರ್ಮಾ ಸೇರಿದಂತೆ 7 ಜನ ಆರೋಪಿಗಳನ್ನು ಬಂಧಿಸಿದ್ದು, ಪ್ರಮುಖ ಸಂಚುಗಾರನಾದ ಬಲರಾಮ್ ಪತ್ತೆಗಾಗಿ ಬಲೆ ಬೀಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles