Home ಕ್ರೈಂ ನ್ಯೂಸ್ ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಜೀವಂತವಾಗಿ ಕಾಲುವೆಗೆ ತಳ್ಳಿದ ಪಾಪಿ ಹೆಂಡತಿ: ಡಿಲೀಟ್ ಆದ ವಾಟ್ಸಾಪ್ ಚಾಟ್ಸ್‌ನಿಂದ ಸಿಕ್ಕಿಬಿದ್ದ ಕಿರಾತಕಿ ಪತ್ನಿ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಜೀವಂತವಾಗಿ ಕಾಲುವೆಗೆ ತಳ್ಳಿದ ಪಾಪಿ ಹೆಂಡತಿ: ಡಿಲೀಟ್ ಆದ ವಾಟ್ಸಾಪ್ ಚಾಟ್ಸ್‌ನಿಂದ ಸಿಕ್ಕಿಬಿದ್ದ ಕಿರಾತಕಿ ಪತ್ನಿ!

Share
ಪ್ರಿಯಕರ
Share

ಹರಿಯಾಣ: ಅಕ್ರಮ ಸಂಬಂಧದ ವ್ಯಾಮೋಹಕ್ಕೆ ಬಿದ್ದ ಮಹಿಳೆಯೊಬ್ಬಳು ಪ್ರಿಯಕರನೊಂದಿಗೆ ಸೇರಿ ಮದುವೆಯಾದ ಗಂಡನನ್ನೇ ಅತ್ಯಂತ ಕ್ರೂರವಾಗಿ ಕೊಲೆ ಮಾಡಿರುವ ಭೀಕರ ಘಟನೆ ಹರಿಯಾಣದ ರೇವಾರಿ ಜಿಲ್ಲೆಯ ಜದ್ಥಾಲ್ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಘಟನೆಯ ವಿವರ: ಕೊಲೆಯಾದ ದುರ್ದೈವಿ 21 ವರ್ಷದ ಯುವಕ ಮೋನು ಎಂದು ಗುರುತಿಸಲಾಗಿದೆ. ಮೋನು ಪತ್ನಿ ತನ್ನು ತನ್ನ ಸೀಕ್ರೆಟ್ ಲವರ್ ಸೋನು ಹಾಗೂ ಆತನ ಸಹಚರರಾದ ಹರಿಓಂ ಮತ್ತು ಅಮನ್ ಜೊತೆ ಸೇರಿ ಈ ಪ್ಲಾನ್ ಮಾಡಿದ್ದಳು. ಜೂನ್ 8 ರಂದು ಮೋನು ತನ್ನ ಸಂಬಳದ ಹಣವನ್ನು ಪಡೆದುಕೊಂಡು ಕಾಲುವೆಯ ಬಳಿ ತೆರಳಿದ್ದಾಗ, ಪತ್ನಿ ತನ್ನು ಫೋನ್ ಮಾಡಿ ಆತನನ್ನು ನಿರ್ದಿಷ್ಟ ಜಾಗಕ್ಕೆ ಕರೆಸಿಕೊಂಡಿದ್ದಾಳೆ.

ಜೀವಂತವಾಗಿಯೇ ನೀರಿಗೆ ತಳ್ಳಿದ್ರು:

ಅಲ್ಲಿ ಮೊದಲೇ ಹೊಂಚು ಹಾಕಿ ಕುಳಿತಿದ್ದ ಪ್ರಿಯಕರ ಸೋನು ಮತ್ತು ಆತನ ಗ್ಯಾಂಗ್, ಮೋನು ಮುಖ ಮುಚ್ಚಿ ಪ್ರಜ್ಞೆ ತಪ್ಪಿಸಿದ್ದಾರೆ. ಆ ಬಳಿಕ ಆತ ಬದುಕಿರುವಾಗಲೇ ಕಾಲುವೆಯ ನೀರಿಗೆ ತಳ್ಳಿ ವಿಕೃತಿ ಮೆರೆದಿದ್ದಾರೆ. ಯಾರಿಗೂ ಅನುಮಾನ ಬಾರದಿರಲಿ ಎಂದು ಮೋನು ಸ್ಕೂಟರ್ ಅನ್ನು ಕಾಲುವೆಯ ದಂಡೆಯ ಮೇಲೆಯೇ ಬಿಟ್ಟು ಪರಾರಿಯಾಗಿದ್ದರು.

ಆತ್ಮಹತ್ಯೆ ಡ್ರಾಮಾ ಬಯಲಾಗಿದ್ದು ಹೇಗೆ?

ಜೂನ್ 10 ರಂದು ಕಾಲುವೆಯಲ್ಲಿ ಮೋನು ಶವ ಪತ್ತೆಯಾಗಿತ್ತು. ದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಇಲ್ಲದ ಕಾರಣ ಪೊಲೀಸರು ಇದೊಂದು ಆಕಸ್ಮಿಕ ಸಾವು ಎಂದುಕೊಂಡು ಶವವನ್ನು ಕುಟುಂಬಸ್ಥರಿಗೆ ಒಪ್ಪಿಸಿದ್ದರು. ಆದರೆ ಜೂನ್ 11 ರಂದು ಮೋನು ಫೋನ್ ಕುಟುಂಬಸ್ಥರ ಕೈ ಸೇರಿದಾಗ ಇಡೀ ಕೇಸ್ ಉಲ್ಟಾ ಆಗಿದೆ. ಫೋನ್‌ನಲ್ಲಿದ್ದ ಎಲ್ಲಾ ಡೇಟಾ ಡಿಲೀಟ್ ಆಗಿದ್ದರಿಂದ ಅನುಮಾನಗೊಂಡು ಸೈಬರ್ ಕ್ರೈಂ ತಜ್ಞರ ಸಹಾಯದಿಂದ ಚಾಟ್ಸ್ ರಿಕವರಿ ಮಾಡಿದಾಗ ಅಸಲಿ ಸತ್ಯ ಹೊರಬಂದಿದೆ. ಕೊಲೆಯಾದ ದಿನ ಮೋನು ತನ್ನ ಹೆಂಡತಿಗೆ 49 ಬಾರಿ ಕಾಲ್ ಮಾಡಿದ್ದ! ಆದರೆ ಆಕೆ ಕೇವಲ ಒಂದು ಬಾರಿ ಮಾತ್ರ ಮಾತನಾಡಿದ್ದಾಳೆ. ಚಾಟ್ಸ್ ಪರಿಶೀಲಿಸಿದಾಗ ತನ್ನುನೇ ಮೋನುಗೆ ಕಾಲುವೆಯ ಬಳಿ ಬರುವಂತೆ ಮೆಸೇಜ್ ಮಾಡಿ ಕರೆಸಿಕೊಂಡಿದ್ದು ಮತ್ತು ಅಕ್ರಮ ಸಂಬಂಧದ ವಾಟ್ಸಾಪ್ ಮೆಸೇಜ್‌ಗಳು ಪತ್ತೆಯಾಗಿವೆ.

ಪೊಲೀಸ್ ಕಸ್ಟಡಿಯಲ್ಲಿ ಕಿರಾತಕರು:

ಫೋನ್ ಡೇಟಾ ಆಧಾರದ ಮೇಲೆ ಪೊಲೀಸರು ಕೊಲೆ ಕೇಸ್ ದಾಖಲಿಸಿಕೊಂಡು, ಪಾಪಿ ಹೆಂಡತಿ ತನ್ನು ಮತ್ತು ಆಕೆಯ ಸಹಚರ ಹರಿಓಂನನ್ನು ಬಂಧಿಸಿದ್ದಾರೆ. ಪ್ರಸ್ತುತ ಪ್ರೇಯಸ ಸೋನು ಮತ್ತು ಮತ್ತೊಬ್ಬ ಆರೋಪಿ ಅಮನ್ ತಲೆಮರೆಸಿಕೊಂಡಿದ್ದು, ಅವರಿಗಾಗಿ ತೀವ್ರ ಜಾಲ ಬೀಸಲಾಗಿದೆ ಎಂದು ಡಿಎಸ್ಪಿ ಸುರೇಂದರ್ ಶೆವ್ರಾನ್ ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *