ಗಾಂಧೀಜಿ ಭಾರತವನ್ನು ಬ್ರಿಟಿಷರ ದಬ್ಬಾಳಿಕೆಯಿಂದ ಮುಕ್ತಗೊಳಿಸಿದರೆ, ಅಂಬೇಡ್ಕರ್ ರವರು ಹಳೆಕಾಲದ ಸಾಮಾಜಿಕ ಅನ್ಯಾಯಗಳಿಂದ ಮುಕ್ತಗೊಳಿಸಿದರು ಎಂದು ನಟ, ರಾಜಕಾರಣಿ ಕಮಲ್ ಹಸನ್ ಹೇಳಿದರು.
ಅಮಿತ್ ಶಾ ಹೇಳಿಕೆಯ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ಪೋಸ್ಟ್ ಮಾಡಿರುವ ಕಮಲ್ ಹಸನ್ ರವರು ಪ್ರತಿಯೊಬ್ಬ ಭಾರತೀಯನು ಆ ಮಹಾನ್ ವ್ಯಕ್ತಿಯ ಹೆಸರಿಗೆ ಕಳಂಕ ತರುವುದನ್ನು ಸಹಿಸುವುದಿಲ್ಲ ಎಂದಿದ್ದಾರೆ.
ಅಂಬೇಡ್ಕರ್ ವಿಚಾರಗಳು ಅಧುನಿಕ ನವಭಾರತಕ್ಕೆ ಮೈಲಿಗಲ್ಲುಗಳಾಗಿವೆ, ಆ ವ್ಯಕ್ತಿಯ ವಿಚಾರಗಳನ್ನು ಜನರ ಭಾವನೆಗಳಲ್ಲಿ ಕೆರಳಿಸಲು ಉಪಯೋಗಿಸುವ ಬದಲು ಪ್ರಗತಿಗೆ ದಾರಿ ಮಾಡಿಕೊಡಲಿ ಎಂದು ಹೇಳಿದ್ದಾರೆ.
ಸಂಸತ್ತಿನಲ್ಲಿ ಅಂಬೇಡ್ಕರ್ ರವರ ವಿಚಾರಧಾರೆಗಳನ್ನು ಅರ್ಥಪೂರ್ಣವಾಗಿ ಚರ್ಚಿಸುವ ಮೂಲಕ ಸಂವಿಧಾನ ಅಂಗೀಕರಿಸಿದ 75 ವರ್ಷಗಳನ್ನು ಸ್ಮರಿಸೋಣ ಎಂದು ಮನವಿ ಮಾಡಿದರು.