Home ಕ್ರೈಂ ನ್ಯೂಸ್ 15ಕ್ಕೆ ಮದುವೆ, 22ಕ್ಕೆ 6ನೇ ಹೆರಿಗೆ: ಕರಾಳ ಮುಖ ಬಿಚ್ಚಿಟ್ಟ ಯುಪಿ ವೈದ್ಯೆ, ದೇಶಾದ್ಯಂತ ಆಕ್ರೋಶ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

15ಕ್ಕೆ ಮದುವೆ, 22ಕ್ಕೆ 6ನೇ ಹೆರಿಗೆ: ಕರಾಳ ಮುಖ ಬಿಚ್ಚಿಟ್ಟ ಯುಪಿ ವೈದ್ಯೆ, ದೇಶಾದ್ಯಂತ ಆಕ್ರೋಶ!

Share
ಮದುವೆ
Share

ಲಖನೌ: ಉತ್ತರ ಪ್ರದೇಶದ ಸ್ತ್ರೀರೋಗ ತಜ್ಞರೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವಿಡಿಯೋವೊಂದು ಇಡೀ ದೇಶದಾದ್ಯಂತ ತೀವ್ರ ಆಕ್ರೋಶ ಮತ್ತು ಕಳವಳಕ್ಕೆ ಕಾರಣವಾಗಿದೆ. ಕೇವಲ 22 ವರ್ಷದ ಯುವತಿಯೊಬ್ಬಳು ಗಂಡು ಮಗುವಿನ ಆಸೆಗೆ ಬಿದ್ದು ಈಗಾಗಲೇ 6ನೇ ಬಾರಿಗೆ ಗರ್ಭಿಣಿಯಾಗಿರುವ ಆಘಾತಕಾರಿ ಸತ್ಯ ಈ ವಿಡಿಯೋದಿಂದ ಬೆಳಕಿಗೆ ಬಂದಿದೆ.

15ನೇ ವಯಸ್ಸಿಗೆ ಬಾಲ್ಯವಿವಾಹ, 22ಕ್ಕೆ 5 ಮಕ್ಕಳ ತಾಯಿ!

ಮೂಲತಃ ರಾಜಸ್ಥಾನದವರಾದ ಈ ದಂಪತಿಗೆ ಕೇವಲ 15ನೇ ವಯಸ್ಸಿನಲ್ಲಿಯೇ ಮದುವೆಯಾಗಿತ್ತು. ಸದ್ಯ 22 ವರ್ಷದ ಈ ಯುವತಿಗೆ ಈಗಾಗಲೇ ನಾಲ್ಕು ಹೆಣ್ಣು ಹಾಗೂ ಒಬ್ಬ ಗಂಡು ಸೇರಿ ಒಟ್ಟು ಐದು ಮಕ್ಕಳಿದ್ದಾರೆ. ಆದರೂ, ಕುಟುಂಬವನ್ನು ಮುನ್ನಡೆಸಲು ಮತ್ತು ವಂಶ ಬೆಳೆಸಲು ಇನ್ನೊಬ್ಬ ಗಂಡು ಮಗ ಬೇಕೇ ಬೇಕು ಎಂಬ ಪತಿಯ ಹಠಕ್ಕೆ ಬಿದ್ದು, ಈಕೆ ಮತ್ತೆ ಗರ್ಭಧರಿಸಿದ್ದಾಳೆ. ಉತ್ತರ ಪ್ರದೇಶದ ಸ್ಪಂದನ್ ಆಸ್ಪತ್ರೆಯ ಡಾ. ಪ್ರಜ್ಞಾ ತೋಮರ್ ಅವರು ರೋಗಿಯ ಅನುಮತಿಯೊಂದಿಗೆ ಈ ವಿಡಿಯೋವನ್ನು ಹಂಚಿಕೊಂಡು ಸಮಾಜದ ಲಿಂಗ ತಾರತಮ್ಯವನ್ನು ಖಂಡಿಸಿದ್ದಾರೆ.

ವೈದ್ಯರ ಎಚ್ಚರಿಕೆಗೂ ಕ್ಯಾರೆ ಎನ್ನದ ದಂಪತಿ

ಸತತ ಗರ್ಭಧಾರಣೆಯಿಂದಾಗಿ ಮಹಿಳೆಯು ಈಗಾಗಲೇ ತೀವ್ರ ರಕ್ತಹೀನತೆ, ಉಸಿರಾಟದ ತೊಂದರೆ ಮತ್ತು ಮೈಕೈ ನೋವಿನಿಂದ ಬಳಲುತ್ತಿದ್ದಾಳೆ. “ಇಷ್ಟು ಕಿರಿಯ ವಯಸ್ಸಿನಲ್ಲಿ ಪದೇ ಪದೇ ಗರ್ಭಿಣಿಯಾಗುವುದರಿಂದ ತಾಯಿ ಮತ್ತು ಹುಟ್ಟುವ ಮಗುವಿನ ಪ್ರಾಣಕ್ಕೆ ಕಂಟಕ ಎದುರಾಗಬಹುದು” ಎಂದು ಡಾ. ಪ್ರಜ್ಞಾ ಎಚ್ಚರಿಸಿದ್ದರೂ, ದಂಪತಿಗಳು ತಮ್ಮ ಅಸಹಾಯಕತೆ ಮತ್ತು ವಂಶದ ವ್ಯಾಮೋಹವನ್ನು ಮುಂದುವರಿಸಿದ್ದಾರೆ.

ಸಮಾಜದ ವಿರುದ್ಧ ನೆಟ್ಟಿಗರ ಆಕ್ರೋಶ

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಮೂಲಸೌಕರ್ಯಗಳನ್ನು ಒದಗಿಸಲು ಯೋಗ್ಯತೆ ಇಲ್ಲದಿದ್ದರೂ ವಂಶ ಬೆಳೆಸುವ ಹಠವೇಕೆ?” ಎಂದು ಪತಿಯನ್ನು ತರಾಟೆಗೆ ತಗೆದುಕೊಂಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಇಂದಿಗೂ ಜೀವಂತವಾಗಿರುವ ಬಾಲ್ಯವಿವಾಹ, ಶಿಕ್ಷಣದ ಕೊರತೆ ಮತ್ತು ಕೌಟುಂಬಿಕ ಒತ್ತಡಕ್ಕೆ ಈ ಘಟನೆ ಸಾಕ್ಷಿಯಾಗಿದೆ.

Share

Leave a comment

Leave a Reply

Your email address will not be published. Required fields are marked *

Related Articles