Home ಕ್ರೈಂ ನ್ಯೂಸ್ “ಎಲ್ಲಾ ರಂಗಗಳಲ್ಲೂ ಯುದ್ಧಕ್ಕೆ ರೆಡಿ” ಪಾಕ್ ನೀರು ಕಸಿದುಕೊಂಡ್ರೆ ಕೈ ಕೈತ್ತರಿಸುತ್ತೇವೆ: ಭಾರತದ ನಿಲುವಿಗೆ ಪಾಕ್ ನಾಯಕ ಬಿಲಾವಲ್ ಭುಟ್ಟೋ, ಸಚಿವ ಮೊಂಡಾಟ!
ಕ್ರೈಂ ನ್ಯೂಸ್ನವದೆಹಲಿಬೆಂಗಳೂರು

“ಎಲ್ಲಾ ರಂಗಗಳಲ್ಲೂ ಯುದ್ಧಕ್ಕೆ ರೆಡಿ” ಪಾಕ್ ನೀರು ಕಸಿದುಕೊಂಡ್ರೆ ಕೈ ಕೈತ್ತರಿಸುತ್ತೇವೆ: ಭಾರತದ ನಿಲುವಿಗೆ ಪಾಕ್ ನಾಯಕ ಬಿಲಾವಲ್ ಭುಟ್ಟೋ, ಸಚಿವ ಮೊಂಡಾಟ!

Share
ಭಾರತ
Share

ನವದೆಹಲಿ/ಇಸ್ಲಾಮಾಬಾದ್: ಭಾರತ ಮತ್ತು ಪಾಕಿಸ್ತಾನ ನಡುವಿನ ರಾಜತಾಂತ್ರಿಕ ಸಂಘರ್ಷ ಈಗ ಮತ್ತಷ್ಟು ತಾರಕಕ್ಕೇರಿದೆ. ಗಡಿಯಾಚೆಗಿನ ಭಯೋತ್ಪಾದನೆಗೆ ಪಾಕಿಸ್ತಾನ ಸಂಪೂರ್ಣವಾಗಿ ಬೆಂಬಲ ನಿಲ್ಲಿಸುವವರೆಗೂ ಐತಿಹಾಸಿಕ ‘ಇಂಡಸ್ ನದಿ ನೀರು ಹಂಚಿಕೆ ಒಪ್ಪಂದ’ವನ್ನು (IWT) ಅಮಾನತಿನಲ್ಲಿಡಲಾಗುವುದು ಎಂದು ಭಾರತ ಘೋಷಿಸಿದ ಬೆನ್ನಲ್ಲೇ, ಪಾಕಿಸ್ತಾನದ ನಾಯಕರು ಭಾರತದ ವಿರುದ್ಧ ಯುದ್ಧದ ಬೆದರಿಕೆ ಹಾಕಲಾರಂಭಿಸಿದ್ದಾರೆ.

ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (PPP) ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿ, “ಪಾಕಿಸ್ತಾನವು ಎಲ್ಲಾ ರಂಗಗಳಲ್ಲೂ ಭಾರತದ ವಿರುದ್ಧ ಯುದ್ಧಕ್ಕೆ ಸಿದ್ಧವಾಗಿದೆ. ಇಂಡಸ್ ನದಿಯ ಹಕ್ಕುಗಳ ವಿಷಯದಲ್ಲಿ ನಾವು ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ” ಎಂದು ಆಕ್ರೋಶ ಹೊರಹಾಕಿದ್ದಾರೆ. ಭಾರತವು ನದಿ ನೀರನ್ನು ನಮ್ಮ ವಿರುದ್ಧ ಅಸ್ತ್ರವಾಗಿ ಬಳಸಿಕೊಳ್ಳಲು ಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಭಾರತದ ಕಡಕ್ ನಿಲುವು:

ಕಳೆದ 2025 ರಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದನಾ ದಾಳಿಯಲ್ಲಿ 26 ನಾಗರಿಕರು ಸಾವನ್ನಪ್ಪಿದ್ದರು. ಈ ದಾಳಿಯ ನಂತರ ಭಾರತ ಸರ್ಕಾರವು ಇಂಡಸ್ ನೀರು ಹಂಚಿಕೆ ಒಪ್ಪಂದವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ (Abeyance). ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿ, “ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಗೆ ನೀಡುತ್ತಿರುವ ಬೆಂಬಲವನ್ನು ನಂಬಲರ್ಹ ಮತ್ತು ಶಾಶ್ವತ ರೀತಿಯಲ್ಲಿ ನಿಲ್ಲಿಸಬೇಕು. ಅಲ್ಲಿಯವರೆಗೆ ಈ ಒಪ್ಪಂದ ಮುಂದುವರಿಯುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಕೈ ಕತ್ತರಿಸುವ ಬೆದರಿಕೆ ಹಾಕಿದ ಪಾಕ್ ಸಚಿವ:

ಇದೇ ವೇಳೆ ಪಾಕಿಸ್ತಾನದ ಹವಾಮಾನ ಬದಲಾವಣೆ ಸಚಿವ ಮುಸಾದಿಕ್ ಮಲಿಕ್ ಕೂಡ ಪ್ರಚೋದನಾಕಾರಿ ಹೇಳಿಕೆ ನೀಡಿದ್ದು, “ಪಾಕಿಸ್ತಾನದ ಪಾಲಿನ ನೀರನ್ನು ಕಸಿದುಕೊಳ್ಳಲು ಯತ್ನಿಸುವವರ ಕೈಗಳನ್ನು ಕತ್ತರಿಸಲಾಗುವುದು” ಎಂದು ತೀವ್ರವಾಗಿ ಎಚ್ಚರಿಸಿದ್ದಾರೆ. ಭಾರತವು ಮೇಲ್ಭಾಗದಲ್ಲಿದ್ದುಕೊಂಡು ನೀರಿನ ತಾಪನ್ನು ನಿಯಂತ್ರಿಸುತ್ತಿದೆ ಎಂದು ಅವರು ದೂರಿದ್ದಾರೆ. 1960 ರಲ್ಲಿ ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ನಡೆದ ಈ ಒಪ್ಪಂದವು ಇದೀಗ ಉಭಯ ದೇಶಗಳ ನಡುವೆ ಯುದ್ಧದ ಕಿಡಿ ಹೊತ್ತಿಸುವ ಹಂತಕ್ಕೆ ತಲುಪಿದೆ.

Share

Leave a comment

Leave a Reply

Your email address will not be published. Required fields are marked *