Home ಕ್ರೈಂ ನ್ಯೂಸ್ ಟೆರೇಸ್‌ನಿಂದ ತಳ್ಳಿದ್ರೂ ಸಾಯದ ಗಂಡನಿಗೆ “ಟಾಯ್ಲೆಟ್ ಕ್ಲೀನರ್” ಚುಚ್ಚಿ ಕೊಂದ ನರ್ಸ್ ಪತ್ನಿ ಪ್ರೇಮಿ ಜೊತೆ ಅರೆಸ್ಟ್!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಟೆರೇಸ್‌ನಿಂದ ತಳ್ಳಿದ್ರೂ ಸಾಯದ ಗಂಡನಿಗೆ “ಟಾಯ್ಲೆಟ್ ಕ್ಲೀನರ್” ಚುಚ್ಚಿ ಕೊಂದ ನರ್ಸ್ ಪತ್ನಿ ಪ್ರೇಮಿ ಜೊತೆ ಅರೆಸ್ಟ್!

Share
ಗಂಡ
Share

ನಿಜಾಮಾಬಾದ್, ತೆಲಂಗಾಣ: ಪ್ರೇಮಿಯ ಜೊತೆಗಿನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದನೆಂಬ ಕಾರಣಕ್ಕೆ, ಕಟ್ಟಡದ ಮೇಲಿಂದ ತಳ್ಳಿದರೂ ಬದುಕುಳಿದಿದ್ದ ಗಂಡನನ್ನು ಆಸ್ಪತ್ರೆಯಲ್ಲೇ ಟಾಯ್ಲೆಟ್ ಕ್ಲೀನರ್ ಇಂಜೆಕ್ಟ್ ಮಾಡಿ ನರ್ಸ್ ಕೆಲಸ ಮಾಡುತ್ತಿದ್ದ ಹೆಂಡತಿಯೊಬ್ಬಳು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಕೊಲೆಯಾದ ದುರ್ದೈವಿಯನ್ನು ಪ್ರಶಾಂತ್ ಎಂದು ಗುರುತಿಸಲಾಗಿದೆ. ಕೃತ್ಯ ಎಸಗಿದ ಪತ್ನಿ ಸಂಧ್ಯಾ, ಆಕೆಯ ಪ್ರೇಮಿ ಅನಿಲ್ ಮತ್ತು ಆತನ ಸ್ನೇಹಿತ ವೆಂಕಟ್ ಸಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯ ವಿವರ:

ಇತ್ತೀಚೆಗಷ್ಟೇ ಗಲ್ಫ್ ದೇಶದಿಂದ ಮರಳಿದ್ದ ಪ್ರಶಾಂತ್ ಹಾಗೂ ಸಂಧ್ಯಾ ನಡುವೆ ದಾಂಪತ್ಯ ಕಲಹವಿತ್ತು ಎನ್ನಲಾಗಿದೆ. ಸಂಧ್ಯಾಗೆ ಅನಿಲ್ ಎಂಬಾತನೊಂದಿಗೆ ಇದ್ದ ಸಂಬಂಧವೇ ಇದಕ್ಕೆ ಕಾರಣ ಎನ್ನಲಾಗಿದ್ದು, ಪ್ರಶಾಂತ್‌ನನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗಿತ್ತು. ಮೊದಲ ಪ್ರಯತ್ನವಾಗಿ ಪ್ರಶಾಂತ್‌ಗೆ ಅತಿಯಾಗಿ ಮದ್ಯ ಕುಡಿಸಿ, ಅನಿಲ್ ಮತ್ತು ವೆಂಕಟ್ ಸಾಯಿ ಆತನ ಮೇಲೆ ಹಲ್ಲೆ ನಡೆಸಿ ಮನೆಯ ಟೆರೇಸ್‌ನಿಂದ ಕೆಳಗೆ ತಳ್ಳಿದ್ದರು.

ಆದರೆ, ತೀವ್ರ ಗಾಯಗಳಾಗಿದ್ದರೂ ಪ್ರಶಾಂತ್ ಬದುಕುಳಿದಿದ್ದ. ಕುಡಿದ ಮತ್ತಿನಲ್ಲಿ ನೀನೇ ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದೀಯಾ ಎಂದು ನಂಬಿಸಿ, ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆಸ್ಪತ್ರೆಯಲ್ಲೇ ಮುಗಿಸಿದ ಪತ್ನಿ:

ಪ್ರಶಾಂತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ, ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಪತ್ನಿ ಸಂಧ್ಯಾ ತನ್ನ ವೈದ್ಯಕೀಯ ಜ್ಞಾನವನ್ನು ಬಳಸಿಕೊಂಡಿದ್ದಾಳೆ. ಚಿಕಿತ್ಸೆಗಾಗಿ ನೀಡಲಾಗುತ್ತಿದ್ದ ಐವಿ (IV Line) ಮೂಲಕ ಟಾಯ್ಲೆಟ್ ಕ್ಲೀನಿಂಗ್ ಲಿಕ್ವಿಡ್ ಅನ್ನು ಇಂಜೆಕ್ಟ್ ಮಾಡಿದ್ದಾಳೆ. ವಿಷಕಾರಿ ದ್ರವ ದೇಹ ಸೇರಿದ ಪರಿಣಾಮ ಪ್ರಶಾಂತ್ ಸಾವನ್ನಪ್ಪಿದ್ದಾನೆ.

ಜುಲೈ 1 ರಂದು ಪ್ರಶಾಂತ್ ತಾಯಿ ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದಾಗ ಈ ಚಿಲ್ಲರ್ ಕೃತ್ಯ ಬಯಲಾಗಿದೆ. ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಹೊರಬಿದ್ದಿದೆ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ವಿಧಿವಿಜ್ಞಾನ (Forensic) ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles