ನಟ ಶಿವರಾಜ್ ಕುಮಾರ್ ತಮ್ಮ ಅನಾರೋಗ್ಯದ ನಿಮಿತ್ತ ಶಸ್ತ್ರಚಿಕಿತ್ಸೆಗೆ ಬುಧವಾರ ಸಂಜೆ ಪತ್ನಿ ಗೀತಾ ಶಿವರಾಜ್ ಕುಮಾರ್ ಹಾಗೂ ಕಿರಿಯ ಮಗಳು ನಿವೇದಿತಾ ಶಿವರಾಜ್ ಕುಮಾರ್ ಒಟ್ಟಿಗೆ ಅಮೆರಿಕಾಗೆ ಪ್ರಯಾಣ ಬೆಳೆಸಿದರು.
ಹೊರಡುವ ಮುನ್ನ ಶಿವಣ್ಣನ ಮನೆಯಲ್ಲಿ ಚಿತ್ರರಂಗದ ಕಲಾವಿದರು ರಾಜಕೀಯ ಗಣ್ಯರ ಜೊತೆ ಒಂದಿಷ್ಟು ಮಾತುಕಥೆಯ ಜೊತೆ ಶಿವಣ್ಣನಿಗೆ ಶುಭ ಹಾರೈಸಿದರು. ನಟ ಸುದೀಪ, ವಿನೋದ್ ರಾಜಕುಮಾರ್, ಸಚಿವ ಮಧು ಬಂಗಾರಪ್ಪ, ಬಿ.ಸಿ.ಪಾಟೀಲ್ ಉಪಸ್ಥಿತಿತರಿದ್ದರು.
ಶಿವರಾಜ್ ಕುಮಾರ್ ಹಾಗೂ ಸುದೀಪರ ನಡುವೆ ಮೊದಲಿನಿಂದಲು ಒಂದು ಅವೀನಭಾವ ಸಂಬಂಧವಿದೆ.ಶಿವಣ್ಣನ ಮನೆಗೆ ಬಂದ ಕೂಡಲೇ ಶಿವಣ್ಣರಿಗೆ ತಮ್ಮ ಪ್ರೀತಿಯ ಅಪ್ಪುಗೆ ನೀಡಿದರು, ಇದೊಂದು ಭಾವುಕದ ಅಪ್ಪುಗೆಯಾಗಿತ್ತು, ಬೇಗನೆ ಚೇತರಿಸಿಕೊಂಡು ಬನ್ನಿ ಎಂದು ಶುಭಹಾರೈಸುತ್ತ ಶಿವಣ್ಣನಿಗೆ ಧೈರ್ಯತುಂಬಿದರು. ಇನ್ನು ಇವರಿಬ್ಬರ ಅಪ್ಪುಗೆಯ ಪೋಟೊ ಎಲ್ಲೆಡೇ ವೈರಲ್ ಆಗಿದ್ದು ನೆಟ್ಟಿಗರು ಹಾಗೂ ಅಭಿಮಾನಿಗಳು ಅಣ್ಣ-ತಮ್ಮನ ಸಂಬಂಧವಿದು ಎನ್ನುತ್ತಿದ್ದಾರೆ.