Home ಕ್ರೈಂ ನ್ಯೂಸ್ ಯುವಕನ ಖಾಸಗಿ ದೃಶ್ಯಗಳನ್ನು ಇಟ್ಟುಕೊಂಡು 4 ಲಕ್ಷ ಪಂಗನಾಮ ಹಾಕಿದ ಯುಪಿ ಇನ್‌ಫ್ಲುಯೆನ್ಸರ್: ₹2 ಲಕ್ಷಕ್ಕೆ ಮತ್ತೆ ಬೇಡಿಕೆ ಇಟ್ಟಾಗ ಸಿಕ್ಕಿಬಿದ್ದ ಕಿಲಾಡಿ ಲೇಡಿ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಯುವಕನ ಖಾಸಗಿ ದೃಶ್ಯಗಳನ್ನು ಇಟ್ಟುಕೊಂಡು 4 ಲಕ್ಷ ಪಂಗನಾಮ ಹಾಕಿದ ಯುಪಿ ಇನ್‌ಫ್ಲುಯೆನ್ಸರ್: ₹2 ಲಕ್ಷಕ್ಕೆ ಮತ್ತೆ ಬೇಡಿಕೆ ಇಟ್ಟಾಗ ಸಿಕ್ಕಿಬಿದ್ದ ಕಿಲಾಡಿ ಲೇಡಿ!

Share
ಯುವಕ
Share

ಸಂಭಲ್: ಇನ್‌ಸ್ಟಾಗ್ರಾಮ್‌ನಲ್ಲಿ 1 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿರುವ ಉತ್ತರ ಪ್ರದೇಶದ ಸಂಭಲ್ ಮೂಲದ ಪ್ರಸಿದ್ಧ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಅರಿಶಾ ಹಾಗೂ ಆಕೆಯ ಇಬ್ಬರು ಸಹಚರರ ವಿರುದ್ಧ ಪೊಲೀಸರು ಎಫ್‌ಐಆರ್ (FIR) ದಾಖಲಿಸಿದ್ದಾರೆ. ಯುವಕನೊಬ್ಬನನ್ನು ಹನಿಟ್ರಾಪ್ ಮಾಡಿ, ಆತನ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಇಟ್ಟುಕೊಂಡು ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡಿರುವ ಗಂಭೀರ ಆರೋಪ ಇವರ ಮೇಲಿದೆ.

ಚೌಧರಿ ಸರಾಯ್ ನಿವಾಸಿ ಮೊಹಮ್ಮದ್ ಶಾರುಖ್ ಎಂಬುವವರೇ ಬ್ಲ್ಯಾಕ್‌ಮೇಲಿಂಗ್‌ಗೆ ಒಳಗಾದ ಸಂತ್ರಸ್ತ. ಸುಮಾರು ಮೂರು ವರ್ಷಗಳ ಹಿಂದೆ ನೈನಿತಾಲ್ ಪ್ರವಾಸದ ವೇಳೆ ಇವರಿಬ್ಬರ ಪರಿಚಯವಾಗಿತ್ತು. ಇನ್‌ಸ್ಟಾಗ್ರಾಮ್ ಮೂಲಕ ಆರಂಭವಾದ ಸ್ನೇಹ ಬಳಿಕ ಪ್ರೀತಿಗೆ ತಿರುಗಿತ್ತು. ಈ ಸಂದರ್ಭದಲ್ಲಿ ಅರಿಶಾ ಯುವಕನ ಕೆಲವು ಆಕ್ಷೇಪಾರ್ಹ ಫೋಟೋ ಮತ್ತು ವಿಡಿಯೋಗಳನ್ನು ತನ್ನ ಬಳಿ ಇಟ್ಟುಕೊಂಡಿದ್ದಳು ಎನ್ನಲಾಗಿದೆ.

₹4 ಲಕ್ಷ ಪಂಗನಾಮ, ಮತ್ತೆ 2 ಲಕ್ಷಕ್ಕೆ ಬೇಡಿಕೆ:

ಕೆಲ ದಿನಗಳ ನಂತರ ಅರಿಶಾ ಮತ್ತು ಆಕೆಯ ಸಹಚರರಾದ ಅನಾಸ್ ಮತ್ತು ಶೋಯೆಬ್, ಈ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಮತ್ತು ಸುಳ್ಳು ಕೇಸ್ ದಾಖಲಿಸುವುದಾಗಿ ಶಾರುಖ್‌ಗೆ ಬೆದರಿಕೆ ಹಾಕಲು ಆರಂಭಿಸಿದ್ದರು. ಹೀಗೆ ಹೆದರಿಸಿ ಹಂತ-ಹಂತವಾಗಿ ಸುಮಾರು ₹4 ಲಕ್ಷದವರೆಗೆ ಹಣ ವಸೂಲಿ ಮಾಡಿದ್ದರು. ಜುಲೈ 2023 ರಲ್ಲಿ ಇವರ ನಡುವೆ ಸ್ಟಾಂಪ್ ಪೇಪರ್ ಮೂಲಕ ರಾಜಿ ಸಂಧಾನ ನಡೆದು, ಈ ಹಿಂದಿನ ಆರೋಪಗಳು ಸುಳ್ಳು ಎಂದು ಅರಿಶಾ ಒಪ್ಪಿಕೊಂಡಿದ್ದಳು. ಆದರೂ ಕೆಲವು ದಿನಗಳ ನಂತರ ಮತ್ತೆ ಬ್ಲ್ಯಾಕ್‌ಮೇಲ್ ಆರಂಭಿಸಿ ₹2 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು.

ಇದರಿಂದ ಬೇಸತ್ತ ಶಾರುಖ್ ಬ್ಯಾಂಕ್ ವಹಿವಾಟಿನ ಸ್ಕ್ರೀನ್‌ಶಾಟ್‌ಗಳು ಮತ್ತು ಚಾಟ್‌ಗಳ ಪುರಾವೆಯೊಂದಿಗೆ ಪೊಲೀಸರ ಮೆಟ್ಟಿಲೇರಿದ್ದಾರೆ. ಸದ್ಯ ಸಂಭಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಅರಿಶಾ ಮತ್ತು ಆಕೆಯ ಸಹಚರರಿಗಾಗಿ ತಲಾಶ್ ನಡೆಸುತ್ತಿದ್ದಾರೆ.

Share

Leave a comment

Leave a Reply

Your email address will not be published. Required fields are marked *