Home ಕ್ರೈಂ ನ್ಯೂಸ್ ಗೌರವ್ ಖನ್ನಾ ಪತ್ನಿ ಅಕಾಂಕ್ಷಾ ಚಮೋಲ ತಾವು ಬೈಸೆಕ್ಷುಯಲ್ ಎಂದು ಒಪ್ಪಿಕೊಂಡಿದ್ದೇಕೆ? ಲಾಕ್ ಅಪ್ ರಿಯಾಲಿಟಿ ಶೋನಲ್ಲಿ ಹೈಡ್ರಾಮಾ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರುಸಿನಿಮಾ

ಗೌರವ್ ಖನ್ನಾ ಪತ್ನಿ ಅಕಾಂಕ್ಷಾ ಚಮೋಲ ತಾವು ಬೈಸೆಕ್ಷುಯಲ್ ಎಂದು ಒಪ್ಪಿಕೊಂಡಿದ್ದೇಕೆ? ಲಾಕ್ ಅಪ್ ರಿಯಾಲಿಟಿ ಶೋನಲ್ಲಿ ಹೈಡ್ರಾಮಾ!

Share
ರಿಯಾಲಿಟಿ ಶೋ
Share

ನವದೆಹಲಿ: ‘ರಿಯಾಲಿಟಿ ಶೋ ‘ಲಾಕ್ ಅಪ್: ಸಚ್ ಯಾ ಸಜಾ’ (Lock Upp: Sach Ya Sazaa) ಮನೆಯಲ್ಲಿ ಭಾರಿ ಹೈಡ್ರಾಮಾ ನಡೆದಿದೆ. ಸಹ-ಸ್ಪರ್ಧಿ ಶ್ರೇಯಾ ಕಾಲ್ರಾ (Shreya Kalra) ತನ್ನ ಅತ್ಯಂತ ವೈಯಕ್ತಿಕ ರಹಸ್ಯವನ್ನು ಮತ್ತೊಬ್ಬ ಸ್ಪರ್ಧಿ ಸುಫಿ ಮೋತಿವಾಲಾ ಎದುರು ಬಹಿರಂಗಪಡಿಸಿದ್ದಕ್ಕಾಗಿ ನಟಿ ಅಕಾಂಕ್ಷಾ ಚಮೋಲ (Akanksha Chamola) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಲ್ಲರ ಸಮ್ಮುಖದಲ್ಲೇ ಶ್ರೇಯಾ ಕಾಲ್ರಾ ವಿರುದ್ಧ ತಿರುಗಿಬಿದ್ದ ಅಕಾಂಕ್ಷಾ, “ನಾನು ನನ್ನ ಜೀವನದಲ್ಲಿ ಇಷ್ಟೊಂದು ಕ್ರೂರ ಮತ್ತು ಹೃದಯಹೀನ ವ್ಯಕ್ತಿಯನ್ನು ನೋಡಿಲ್ಲ” ಎಂದು ಕಿಡಿಕಾರಿದ್ದಾರೆ.

ಆಟದ ಭಾಗವಾಗಿ ಹಳೆಯ ಸಂಭಾಷಣೆಯೊಂದರ ಕ್ಲಿಪ್ ಅನ್ನು ಸ್ಪರ್ಧಿಗಳ ಮುಂದೆ ಪ್ರಸಾರ ಮಾಡಿದಾಗ ಈ ಜಗಳ ಆರಂಭವಾಗಿದೆ. ಈ ಹಿಂದೆ ಅಕಾಂಕ್ಷಾ ಚಮೋಲ ಅವರು ಆಟದಲ್ಲಿ ಶ್ರೇಯಾ ಅವರನ್ನು ಎಲಿಮಿನೇಷನ್‌ನಿಂದ ಉಳಿಸಿರಲಿಲ್ಲ. ಇದೇ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡ ಶ್ರೇಯಾ, ಅಕಾಂಕ್ಷಾ ಅವರ ವೈಯಕ್ತಿಕ ಸೀಕ್ರೆಟ್ ಅನ್ನು ಸುಫಿ ಜೊತೆ ಹಂಚಿಕೊಂಡಿದ್ದರು.

ವಿಡಿಯೋ ಪ್ಲೇ ಆದ ಬೆನ್ನಲ್ಲೇ ವೇದಿಕೆಯಲ್ಲೇ ಕಣ್ಣೀರಿಟ್ಟ ಅಕಾಂಕ್ಷಾ, ತಾವು ಬೈಸೆಕ್ಷುಯಲ್ (Bisexual) ಹೌದು ಎಂಬುದನ್ನು ಸಾರ್ವಜನಿಕವಾಗಿ ಒಪ್ಪಿಕೊಂಡರು. ನಟ ಗೌರವ್ ಖನ್ನಾ ಅವರನ್ನು ಮದುವೆಯಾಗುವ ಮುನ್ನ ತಮಗೆ ಮಹಿಳೆಯರೊಂದಿಗೆ ಸಂಬಂಧವಿತ್ತು ಎಂದು ಅವರು ತಿಳಿಸಿದರು. “ನನ್ನ ಲೈಂಗಿಕ ದೃಷ್ಟಿಕೋನವನ್ನು ನನ್ನದೇ ಆದ ರೀತಿಯಲ್ಲಿ ಜಗತ್ತಿಗೆ ಹೇಳುವ ಹಕ್ಕು ನನಗಿತ್ತು. ಆದರೆ ನನ್ನ ಅನುಮತಿಯಿಲ್ಲದೆ, ನಾನು ಬ್ಯಾಕ್‌ಸ್ಟೇಜ್‌ನಲ್ಲಿ ಮಾತನಾಡಿದ್ದನ್ನು ಕದ್ದು ಕೇಳಿ ಶ್ರೇಯಾ ಅದನ್ನು ಆಟಕ್ಕಾಗಿ ಬಳಸಿಕೊಂಡಿದ್ದಾಳೆ” ಎಂದು ಅಕಾಂಕ್ಷಾ ಬೇಸರ ವ್ಯಕ್ತಪಡಿಸಿದರು.

ಎಲಿಮಿನೇಷನ್‌ನಿಂದ ಬಚಾವಾಗಿ ಮನೆಗೆ ಮರಳಿದ ನಂತರ ಅಕಾಂಕ್ಷಾ, ಶ್ರೇಯಾ ಅವರನ್ನು ತರಾಟೆಗೆ ತೆಗೆದುಕೊಂಡರು. “ನನ್ನ ಬಳಿ ಈಗ ಯಾವುದೇ ಲೈಫ್‌ಲೈನ್ ಉಳಿದಿಲ್ಲ. ಈಕೆ ಗೇಮ್‌ಗಾಗಿ ಯಾವ ಮಟ್ಟಕ್ಕೆ ಬೇಕಾದರೂ ಬೆನ್ನಿಗೆ ಚೂರಿ ಹಾಕಬಲ್ಲಳು. ನಿನ್ನೊಳಗಿರುವ ದ್ವೇಷ ಮತ್ತು ಕೊಳಕು ಬುದ್ಧಿ ಬೇಗನೆ ಕೊನೆಯಾಗಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ” ಎಂದು ಅಕಾಂಕ್ಷಾ ಇತರ ಸ್ಪರ್ಧಿಗಳ ಸಮ್ಮುಖದಲ್ಲೇ ಶ್ರೇಯಾ ಕಾಲ್ರಾಗೆ ಶಾಪ ಹಾಕಿದ್ದಾರೆ.

ರಿತೇಶ್ ದೇಶ್‌ಮುಖ್ ಮತ್ತು ಫರಾ ಖಾನ್ ಜಂಟಿಯಾಗಿ ನಡೆಸಿಕೊಡುತ್ತಿರುವ ‘ಲಾಕ್ ಅಪ್’ ರಿಯಾಲಿಟಿ ಶೋ ಜೂನ್ 27 ರಂದು ಆರಂಭವಾಗಿದ್ದು, ಸದ್ಯ ಭಾರಿ ಕುತೂಹಲ ಮೂಡಿಸಿದೆ. ಇದೇ ಸಂಚಿಕೆಯಲ್ಲಿ ಶ್ರೇಷ್ಠಾ ಅಯ್ಯರ್ ಈ ಸೀಸನ್‌ನ ಮೊದಲ ಸ್ಪರ್ಧಿಯಾಗಿ ಮನೆಯಿಂದ ಹೊರಬಿದ್ದಿದ್ದಾರೆ ಹಾಗೂ ಹೊಸ ವೈಲ್ಡ್ ಕಾರ್ಡ್ ಸ್ಪರ್ಧಿಯ ಎಂಟ್ರಿಯ ಸುಳಿವನ್ನು ಪ್ರೋಮೋದಲ್ಲಿ ನೀಡಲಾಗಿದೆ.

Share

Leave a comment

Leave a Reply

Your email address will not be published. Required fields are marked *