ಬಾರ್ಮರ್ (ರಾಜಸ್ಥಾನ): ಪಾಕಿಸ್ತಾನದ ಕುಖ್ಯಾತ ಗ್ಯಾಂಗ್ಸ್ಟರ್ ಹಾಗೂ ಹ್ಯಾಂಡ್ಲರ್ ಶಹಜಾದ್ ಭಟ್ಟಿ ಜೊತೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ 20 ವರ್ಷದ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಭಾರತ-ಪಾಕಿಸ್ತಾನ ಗಡಿಯ ಸಮೀಪವಿರುವ ಗಗರಿಯಾ ಗ್ರಾಮದ ನಿವಾಸಿಯಾದ ಬಶೀರ್ ಬಂಧಿತ ಆರೋಪಿಯಾಗಿದ್ದಾನೆ. ರಾಜಸ್ಥಾನದ ಆಂಟಿ ಟೆರರಿಸಂ ಸ್ಕ್ವಾಡ್ (ATS) ನೀಡಿದ ಖಚಿತ ಮಾಹಿತಿ ಮೇರೆಗೆ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಬಾರ್ಮರ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ASP) ನಿತೇಶ್ ಆರ್ಯ ತಿಳಿಸಿದ್ದಾರೆ.
ರಾಜ್ಯಾದ್ಯಂತ ಎಟಿಎಸ್ ಭಾರಿ ರೇಡ್:
ಆರೋಪಿ ಬಶೀರ್ ಈ ಹಿಂದೆ ಗುಜರಾತ್ನಲ್ಲಿ ಕೆಲಸ ಮಾಡುತ್ತಿದ್ದು, ಕೆಲವು ತಿಂಗಳುಗಳ ಹಿಂದಷ್ಟೇ ತನ್ನ ಗ್ರಾಮಕ್ಕೆ ಮರಳಿದ್ದನು. ಸದ್ಯ ಈತನ ಸೋಶಿಯಲ್ ಮೀಡಿಯಾ ಖಾತೆಗಳು ಹಾಗೂ ಡಿಜಿಟಲ್ ಸಂಪರ್ಕಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಈ ಬಂಧನವು ರಾಜಸ್ಥಾನ ಎಟಿಎಸ್ ಮುಖ್ಯಸ್ಥ (ADG) ದಿನೇಶ್ ಎಂ.ಎನ್ ಮತ್ತು ಐಜಿ ರಾಜೇಶ್ ಸಿಂಗ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಬೃಹತ್ ರಾಜ್ಯಾದ್ಯಂತ ಕಾರ್ಯಾಚರಣೆಯ ಭಾಗವಾಗಿದೆ. ಚುರು, ಅಜ್ಮೀರ್ ಮತ್ತು ಡುಂಗರಪುರ ಸೇರಿದಂತೆ ಸುಮಾರು 25 ಜಿಲ್ಲೆಗಳಲ್ಲಿ ಎಟಿಎಸ್ ಏಕಕಾಲದಲ್ಲಿ ದಾಳಿ ನಡೆಸುತ್ತಿದ್ದು, ಶಹಜಾದ್ ಭಟ್ಟಿ ಜೊತೆ ಸಂಪರ್ಕದಲ್ಲಿರುವ ಹಲವು ಶಂಕಿತರನ್ನು ಈಗಾಗಲೇ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
- Barmer Police
- Bashir Arrested
- Digital Footprint Investigation
- Dinesh MN IPS
- India Pakistan Border
- Pakistan Gangster
- Rajasthan ATS Raid
- Rajasthan crime news
- Shahzad Bhatti
- Social Media Links
- ಡಿಜಿಟಲ್ ತನಿಖೆ
- ದಿನೇಶ್ ಎಂಎನ್ ಐಪಿಎಸ್
- ಪಾಕಿಸ್ತಾನ ಗ್ಯಾಂಗ್ಸ್ಟರ್
- ಬಶೀರ್ ಬಂಧನ
- ಬಾರ್ಮರ್ ಪೊಲೀಸ್
- ಭಾರತ ಪಾಕಿಸ್ತಾನ ಗಡಿ
- ರಾಜಸ್ಥಾನ ಎಟಿಎಸ್ ದಾಳಿ
- ರಾಜಸ್ಥಾನ ಸುದ್ಧಿ
- ಶಹಜಾದ್ ಭಟ್ಟಿ
- ಸೋಶಿಯಲ್ ಮೀಡಿಯಾ ಲಿಂಕ್





Leave a comment