ಆಸಿಸ್ ನ ಮಾಜಿ ದಿಗ್ಗಜ ಕ್ರಿಕೆಟಿಗ ಮ್ಯಾಥ್ಯೂ ಹೇಡೆನ್ ಅವರ ಪುತ್ರಿ 22ವರ್ಷದ ಗ್ರೇಸ್ ಹೇಡೆನ್ ಪಂತ್ ಗೆ ಮನಸೋತಿದ್ದಾಳೆ, ವಿಕೆಟ್ ಹಿಂದೆ ಕಿಪಿಂಗ್ ಸ್ಕಿಲ್ಸ್ ಮತ್ತು ಬ್ಯಾಟ್ ಹಿಡಿದು ಘರ್ಜಿಸೋ ಪಂತ್ ಗೆ ಗ್ರೇಸ್ ಅವರು ಅಭಿಮಾನಿಯಾಗಿದ್ದಾರೆ
ಆನ್ ಫೀಲ್ಡ್ ಅಲ್ಲಿ ಪಂತ್ ಅವರ ಆಟವನ್ನು ಕಣ್ತುಂಬಿಕೊಂಡಿರುವ ಗ್ರೇಸ್ ರವರು ಪಂತ್ ಅವರನ್ನು ಹಾಡಿ ಹೊಗಳಿದ್ದಾರೆ
ನನಗೆ ಪಂತ್ ಆಟ ನೋಡೋಕೆ ತುಂಬಾ ಇಷ್ಟ. ಆತ ಹೈ-ಸ್ಕಿಲ್ಸ್ ಹೊಂದಿರುವ ಆಟಗಾರ. ವಿಕೆಟ್ ಹಿಂದೆ ಆತ ತುಂಬಾ ಟಫ್. ಬ್ಯಾಟಿಂಗ್ನಲ್ಲೂ ಪಂತ್ ಅದ್ಭುತ ಟ್ಯಾಲೆಂಟ್ ಹೊಂದಿದ್ದಾರೆ. ಆನ್ಫೀಲ್ಡ್ ಹಾಗೂ ಆಫ್ ದ ಫೀಲ್ಡ್ನಲ್ಲಿ ಆತ ರಿಯಲಿ ಗ್ರೇಟ್ ಪರ್ಸನ್. ಪಂತ್ನ ಹೊಗಳೋಕೆ ನನಗೆ ಮಾತೇ ಬರುತ್ತಿಲ್ಲ -ಗ್ರೇಸ್ ಹೇಡನ್,
ಕ್ರಿಕೆಟ್ ನಿರೂಪಕಿಯು ಆದ ಗ್ರೇಸ್ ರವರ ಇಲ್ಲಿಗೆ ಮುಗಿಯಲಿಲ್ಲ, ಪಂತ್ ಎಲ್ಲಾರಿಗೂ ಸ್ಪೂರ್ತಿದಾಯಕ ಆಗಿದ್ದಾರೆ, ಸಾವನ್ನೇ ಗೆದ್ದು ಬಂದಿರುವ ಪ್ರತಿಯೊಬ್ಬರಿಗೂ ಮಾದರಿ, ಅವರು ಮೆಂಟಲಿ ತುಂಬಾ ಸ್ಟ್ರಾಂಗ್ ಎಂದಿದ್ದಾರೆ ಇಂತಹ ಟಫ್ ಪ್ಲೇಯರ್ ವಿಶ್ವ ಕ್ರಿಕೆಟ್ ನಲ್ಲಿ ಸಿಗುವುದು ತುಂಬಾ ಅಪರೂಪ ನಿಜಕ್ಕೂ ಅವರಿಗೆ ಹ್ಯಾಟ್ಸ್ ಸಾಫ್ ಹೇಳಲೇಬೇಕು ಎಂದಿದ್ದಾರೆ.

ಒಂದುವೇಳೆ ಪಂತ್ ಜೊತೆ ಡೇಟಿಂಗ್ ಮಾಡುವ ಅವಕಾಶ ಸಿಕ್ಕರೆ ಗ್ರೇಸ್ ಯಾವುದೇ ಕಾರಣಕ್ಕೂ ಮಿಸ್ ಮಾಡಲ್ವಂತೆ, ಡೇಟಿಂಗ್ ಮಾಡಲು ನಾನು ರೆಡಿ ಅಂತಿದ್ದಾಳೆ ಈ ಸುಂದರಿ.
ಗ್ರೇಸ್ ಹೇಡನ್ಗೆ ರಿಷಭ್ ಪಂತ್ ಇಷ್ಟ ಆಗಲು ಕಾರಣ ಇದೆ. ಮ್ಯಾಥ್ಯೂ ಹೇಡನ್ರಂತೆ ಪಂತ್. ಲೆಫ್ಟ್ ಹ್ಯಾಂಡೆಡ್ ಬ್ಯಾಟ್ಸ್ಮನ್. ಹೇಡನ್ರಂತೆ ಪಂತ್ ಬ್ಯಾಟಿಂಗ್ ನಲ್ಲಿರುವ ಅಗ್ರೆಸಿವ್.ಆಸ್ಟ್ರೇಲಿಯಾ ಕ್ರಿಕೆಟಿಗರು ಭಾರತೀಯ ಕ್ರಿಕೆಟಿಗರನ್ನ ಇಷ್ಟ ಪಡೋದು ತುಂಬಾ ಅಪರೂಪ. ಅದ್ರಲ್ಲೂ ಆಸಿಸ್ನ ದಿಗ್ಗಜ ಕ್ರಿಕೆಟಿಗನ ಪುತ್ರಿ, ಭಾರತೀಯ ಆಟಗಾರನಿಗೆ ಫಿದಾ ಆಗಿರೋದು ನಿಜಕ್ಕೂ ಅಚ್ಚರಿ