ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಫಾಲೋಆನ್ ತಪ್ಪಿಸಿದ ಆಕಾಶ್ – ಬೂಮ್ರಾ ಜೋಡಿ: ಡ್ರೆಸ್ಸಿಂಗ್ ರೂಂನಲ್ಲಿ ವಿರಾಟ್ ಕೊಹ್ಲಿ, ಗಂಭೀರ್ ಸಂಭ್ರಮ!

On: December 17, 2024 3:30 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:17-12-2024

ಬ್ರಿಸ್ಟೇನ್: ಬಾರ್ಡರ್-ಗಾವಸ್ಕರ್ ಟ್ರೋಫಿಯ ಗಬ್ಬಾ ಟೆಸ್ಟ್‌ನ 4 ನೇ ದಿನದಂದು ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಫಾಲೋ-ಆನ್ ತಪ್ಪಿಸಿದ ಆಕಾಶ್ ದೀಪ್ ಮತ್ತು ಜಸ್ಪ್ರೀತ್ ಬುಮ್ರಾ ಆಟಕ್ಕೆ ತಂಡದ ಕೋಚ್ ಗೌತಮ್ ಗಂಭೀರ್ ಹಾಗೂ ವಿರಾಟ್ ಕೊಹ್ಲಿ ಡ್ರೆಸ್ಸಿಂಗ್ ರೂಂನಲ್ಲಿ ಸಂಭ್ರಮಿಸಿದರು.

ಜಸ್ಪ್ರೀತ್ ಬುಮ್ರಾ ಮತ್ತು ಆಕಾಶ್ ದೀಪ್ ನಡುವಿನ ಚೇತರಿಸಿಕೊಳ್ಳುವ ಜೊತೆಯಾಟದಿಂದಾಗಿ ಆಸ್ಟ್ರೇಲಿಯಾ ವಿರುದ್ಧದ ಫಾಲೋ-ಆನ್ ಅನ್ನು ಭಾರತ ಸ್ವಲ್ಪಮಟ್ಟಿಗೆ ತಪ್ಪಿಸಿದ ನಂತರ ವಿರಾಟ್ ಕೊಹ್ಲಿ ಮತ್ತು ಕೋಚ್ ಗೌತಮ್ ಗಂಭೀರ್ ಖುಷಿಪಟ್ಟರು.

ಬುಮ್ರಾ ಮತ್ತು ಆಕಾಶ್ ಜೋಡಿ 10 ನೇ ವಿಕೆಟ್‌ಗೆ ಅಜೇಯ 39 ರನ್‌ಗಳ ಜೊತೆಯಾಟದೊಂದಿಗೆ ಆಸ್ಟ್ರೇಲಿಯಾದ ವೇಗಿಗಳನ್ನು ನಿರಾಸೆಗೊಳಿಸಿದರು. ಬ್ರಿಸ್ಬೇನ್‌ನ ಗಬ್ಬಾದಲ್ಲಿ ನಡೆದ ಮೂರನೇ ಟೆಸ್ಟ್‌ನ 4 ನೇ ದಿನದಂದು ಭಾರತವು
246 ರನ್‌ಗಳ ಫಾಲೋ-ಆನ್ ತಪ್ಪಿಸಿಕೊಳ್ಳಲು ಗಳಿಸಬೇಕಿತ್ತು. ಆದ್ರೆ ದಿನದಂತ್ಯಕ್ಕೆ ಟೀಂ ಇಂಡಿಯಾ 9 ವಿಕೆಟ್ ಕಳೆದುಕೊಂಡು 252 ರನ್ ಗಳಿಸಿ ದಿನದ ಅಂತ್ಯ ಮುಗಿಸಿತು.

ಹತ್ತನೇ ವಿಕೆಟ್ ಗೆ ಜೊತೆಯಾಟ ಬಾರದಿದ್ದರೆ ಫಾಲೋ ಆನ್ ಗೆ ಒಳಗಾಗಿ ಮತ್ತೆ ಬ್ಯಾಟ್ ಮಾಡಬೇಕಾದ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾ ಇತ್ತು. ಮಾತ್ರವಲ್ಲ, ಫಾಲೋ ಆನ್ ಗೆ ಒಳಗಾಗದ ಕಾರಣ ಟೀಂ ಇಂಡಿಯಾ ಡ್ರಾ ಮಾಡಿಕೊಳ್ಳಲು ಯತ್ನಿಸಲಿದೆ. ಬೆಳಕು ಮಂದ ಇದ್ದ ಕಾರಣ ದಿನದ ತಡವಾಗಿ ಆಟ ನಿಲ್ಲಿಸಲಾಯಿತು. ಬುಧವಾರದ ಹೆಚ್ಚು ಆರ್ದ್ರ ಹವಾಮಾನ ಮುನ್ಸೂಚನೆಯೊಂದಿಗೆ, ಪಂದ್ಯವು ಡ್ರಾನಲ್ಲಿ ಅಂತ್ಯಕಾಣುವ ನಿರೀಕ್ಷೆ ಇದೆ. ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ ನಲ್ಲಿ 445 ರನ್‌ ಗಳಿಸಿತ್ತು. ಭಾರತವು ಆಸ್ಟ್ರೇಲಿಯಾಕ್ಕಿಂತ 193 ರನ್‌ಗಳ ಹಿನ್ನೆಡೆಯಲ್ಲಿದೆ.

ವಿರಾಟ್ ಕೊಹ್ಲಿ ಡ್ರೆಸ್ಸಿಂಗ್ ರೂಮ್‌ನಲ್ಲಿ ತಮ್ಮ ಕಾಲಿನ ಮೇಲೆದ್ದು, ಕೊನೆಯ ವಿಕೆಟ್ ಜೋಡಿ ಗಳಿಸಿದ ಪ್ರತಿ ರನ್‌ಗಳನ್ನು ಹುರಿದುಂಬಿಸಿದರು. ಆಕಾಶ್ ಭಾರತವನ್ನು ಫಾಲೋ-ಆನ್ ಮಾರ್ಕ್ ದಾಟಿಸಲು ಬೌಂಡರಿ ಬಾರಿಸಿದಾಗ, ಕೊಹ್ಲಿ ಮತ್ತು ಗೌತಮ್ ಗಂಭೀರ್ ರೋಹಿತ್ ಶರ್ಮಾ ರೋಮಾಂಚನಗೊಂಡರು. ಟಿವಿ ಕ್ಯಾಮೆರಾಗಳು ಭಾರತೀಯ ಡ್ರೆಸ್ಸಿಂಗ್ ನತ್ತ ತಿರುಗಿದವು.

ಆಕಾಶ್ ದೀಪ್ ಮತ್ತು ಜಸ್ಪ್ರೀತ್ ಬುಮ್ರಾ ಅವರು ಡ್ರೆಸ್ಸಿಂಗ್ ರೂಮ್‌ಗೆ ಹಿಂತಿರುಗುತ್ತಿದ್ದಂತೆ ವಿರಾಟ್ ಕೊಹ್ಲಿ ಸಹ ಸೆಲ್ಯೂಟ್ ಮಾಡಿದರು. ದಿನದಾಟದ ಅಂತ್ಯದಲ್ಲಿ ಅಜೇಯರಾಗಿ ಉಳಿದ ಇಬ್ಬರು ಬ್ಯಾಟರ್‌ಗಳನ್ನು ಸ್ವಾಗತಿಸಲು ಕೆಎಲ್ ರಾಹುಲ್ ಸೇರಿದಂತೆ ಕೆಲವು ಆಟಗಾರರು ಬೌಂಡರಿ ಲೈನ್ ಬಳಿ ನಿಂತಿದ್ದರು.

ಇದಕ್ಕೂ ಮೊದಲು ಕೆಎಲ್ ರಾಹುಲ್ ಮತ್ತು ರವೀಂದ್ರ ಜಡೇಜಾ ಆಕರ್ಷಕ ಅರ್ಧಶತಕಗಳ ಮೂಲಕ ಭಾರತಕ್ಕೆ ಭದ್ರ ಬುನಾದಿ ಹಾಕಿದರು, ಆರನೇ ವಿಕೆಟ್‌ಗೆ 67 ರನ್ ಸೇರಿಸಿದರು. ಜಡೇಜಾ ನಂತರ ನಿತೀಶ್ ರೆಡ್ಡಿಯೊಂದಿಗೆ ಉತ್ತಮ ಜೊತೆಯಾಟ ನೀಡುವಲ್ಲಿ ವಿಫಲರಾದರು. ಬುಮ್ರಾ ಮತ್ತು ಆಕಾಶ್ ದೀಪ್ ತಾಳ್ಮೆಯ ಆಟವು ಆಸ್ಟ್ರೇಲಿಯಾದ ಗೆಲುವಿನ ಕನಸಿಗೆ ಅಡ್ಡಿಯಾಗಿ ನಿಂತರು. ಆಸ್ಟ್ರೇಲಿಯಾ ಪರ, ನಾಯಕ ಪ್ಯಾಟ್ ಕಮ್ಮಿನ್ಸ್ 80 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಅತ್ಯಂತ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದರು, ಆದರೆ ಮಿಚೆಲ್ ಸ್ಟಾರ್ಕ್ 83ಕ್ಕೆ ಮೂರು ವಿಕೆಟ್ ಪಡೆದರು.

ಜೋಶ್ ಹೇಜಲ್‌ವುಡ್ ಔಟಾದ ದಿನದಂದು ನಾಥನ್ ಲಿಯಾನ್ (1/54) ಸಹ ವಿಕೆಟ್ ಪಡೆದರು. ಐದು ಪಂದ್ಯಗಳ ಸರಣಿಯನ್ನು 1-1 ರಲ್ಲಿ ಸಮಬಲಗೊಳಿಸುವುದರೊಂದಿಗೆ, ಬ್ರಿಸ್ಬೇನ್ ಟೆಸ್ಟ್ ಅನ್ನು ಪ್ರಮುಖ ಸ್ಪರ್ಧೆಯೆಂದು ಬಿಂಬಿಸಲಾಯಿತು, ಆದರೆ ನಿರಂತರ ಮಳೆಯಿಂದ ಫಲಿತಾಂಶ ನಿರೀಕ್ಷಿತವಾಗಿ ಬರುವುದು ಅನುಮಾನವಾಗಿದೆ. ಸ್ಟೀವ್ ಸ್ಮಿತ್‌ಗೆ ಕ್ಯಾಚ್ ನೀಡಿ ನಾಥನ್ ಲಿಯಾನ್ ಔಟ್ ಮಾಡುವ ಮೊದಲು ಕೆಎಲ್ ರಾಹುಲ್ 84 ರನ್ ಗಳಿಸಿ ಭಾರತದ ಪರ ಅತ್ಯುತ್ತಮ ಪ್ರದರ್ಶನ ನೀಡಿದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment