ಫ್ರಾನ್ಸ್ ನ: ಮಯೊಟ್ಟಿ ಪ್ರದೇಶದಲ್ಲಿ ಭೀಕರ “ಚಿಡೋ” ಚಂಡಮಾರುತ ಉಂಟಾಗಿ ಅಪಾರ ಸಾವು ನೋವುಗಳು ಸಂಭವಿಸಿದ್ದು, ಇದೀಗ ಸಾವಿನ ಸಂಖ್ಯೆ ಸಾವಿರ ಗಡಿ ದಾಟಿರುವ ಸಂಭವವಿದೆ ಎಂದು ಉನ್ನತ ಅಧಿಕಾರಿಯೊಬ್ಬರು ಭಾನುವಾರ ಡಿ.15ರಂದು ಮಾಹಿತಿ ನೀಡಿದರು.
ಶನಿವಾರ ಹಿಂದೂ ಮಹಾಸಾಗರದ ದ್ವೀಪಗಳಿಗೆ ಚಂಡಮಾರುತ ಅಪ್ಪಳಿಸಿದ ಪರಿಣಾಪ ಅಪಾರ ಸಾವು ನೋವು ಉಂಟಾಗಿ ಮಯೊಟ್ಟಿ ಪ್ರದೇಶವು ಅಕ್ಷರಶಃ ನಲುಗಿಹೋಗಿದೆ. ಸಾವಿನ ಸಂಖ್ಯೆಯು ಸಾವಿರದ ಗಡಿ ದಾಟಿರಬಹುದು, ಅಲ್ಲದೇ ಮಯೊಟ್ಟಿಗೆ ಸುಮಾರು 90 ವರ್ಷಗಳಲ್ಲಿ ಇದು ಅತ್ಯಂತ ಭೀಕರ ಚಂಡಮಾರುತ ಎಂದು ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.
“ಚಿಡೋ” ಚಂಡಮಾರುತದಿಂದ ಅಪಾರ ಆಸ್ತಿ ಪಾಸ್ತಿ ನಷ್ಟ ಉಂಟಾಗಿದ್ದು ಮನೆಗಳು ನೆಲಸಮಗೊಂಡು ಜನಜೀವನ ನಿಜಕ್ಕೂ ಅಸ್ತವ್ಯಸ್ಥವಾಗಿದೆ, ಅಲ್ಲದೇ ಸುತ್ತ ಪ್ರದೇಶದಲ್ಲಿ ಎತ್ತಾ ನೋಡಿದರು ಮೃತದೇಹ ಕಂಡು ಬರುತ್ತಿದ್ದು ಸಾವಿನ ಸಂಖ್ಯೆ ನಿಖರವಾಗಿ ಹೇಳುವುದು ಕಷ್ಟಸಾಧ್ಯ ಎಂದು ಹೇಳಿದ್ದಾರೆ.