Home ದಾವಣಗೆರೆ ರೈತರಿಗೆ ಗುಡ್ ನ್ಯೂಸ್: 48 ಗಂಟೆಯೊಳಗೆ ಟ್ರಾನ್ಸ್‌ಫಾರ್ಮರ್ ಬದಲಾಯಿಸದಿದ್ದರೆ ಅಧಿಕಾರಿಗಳಿಗೆ ಬೀಳುತ್ತೆ ದಂಡ!
ದಾವಣಗೆರೆನವದೆಹಲಿಬೆಂಗಳೂರು

ರೈತರಿಗೆ ಗುಡ್ ನ್ಯೂಸ್: 48 ಗಂಟೆಯೊಳಗೆ ಟ್ರಾನ್ಸ್‌ಫಾರ್ಮರ್ ಬದಲಾಯಿಸದಿದ್ದರೆ ಅಧಿಕಾರಿಗಳಿಗೆ ಬೀಳುತ್ತೆ ದಂಡ!

Share
ರೈತ
Share

ದಾವಣಗೆರೆ: ಇಂಧನ ಇಲಾಖೆಯ ಅಧಿಕಾರಿಗಳು ನಗರ ಪ್ರದೇಶಗಳಲ್ಲಿ ಟ್ರಾನ್ಸ್‌ಫಾರ್ಮರ್ ಕೆಟ್ಟುಹೋದರೆ 24 ಗಂಟೆಗಳ ಒಳಗಾಗಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಗರಿಷ್ಠ 48 ಗಂಟೆಗಳ ಒಳಗಾಗಿ ಕಡ್ಡಾಯವಾಗಿ ಹೊಸ ಟ್ರಾನ್ಸ್‌ಫಾರ್ಮರ್ ಅಳವಡಿಸಬೇಕು. ಇದಕ್ಕಾಗಿ ರೈತರು ಅಥವಾ ಸಾರ್ವಜನಿಕರು ಸ್ವಂತ ಖರ್ಚಿನಲ್ಲಿ ವಾಹನ ವ್ಯವಸ್ಥೆ ಮಾಡಿಕೊಳ್ಳುವುದನ್ನು ಕಡ್ಡಾಯವಾಗಿ ತಡೆಯಬೇಕು ಎಂದು ಇಂಧನ ಸಚಿವ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಕೆ. ಜೆ. ಜಾರ್ಜ್ ತಿಳಿಸಿದರು.

“ದಾವಣಗೆರೆಯ ಎಸ್.ಎಸ್.ಎಂ. ನಗರದಲ್ಲಿ ಹೊಸ ಎಸ್‌ಟಿಪಿ ಪ್ಲಾಂಟ್ ನಿರ್ಮಾಣಕ್ಕೆ ಭೂಮಿ ಮಂಜೂರು ಮಾಡಲಾಗಿದೆ. ಅದರ ಪಕ್ಕದಲ್ಲೇ ವಿದ್ಯುತ್ ಉಪ ಕೇಂದ್ರ ಸ್ಥಾಪನೆಗೂ ಯೋಜನೆ ರೂಪಿಸಲಾಗಿದೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲು ಕೆಪಿಟಿಸಿಎಲ್ ಅಧಿಕಾರಿಗಳು ಗಮನಹರಿಸಬೇಕು,” ಎಂದು ಸೂಚನೆ ನೀಡಿದರು.

ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ಅರ್ಹ ಫಲಾನುಭವಿಗಳು ಮತ್ತು ಬಾಡಿಗೆ ಮನೆಯಲ್ಲಿ ಇರುವವರಿಗೂ ಉಚಿತ ವಿದ್ಯುತ್ ಸೌಲಭ್ಯ ಸಿಗಲಿದೆ. ಆದರೆ ಅನರ್ಹರನ್ನು ಗುರುತಿಸಲು ಶೀಘ್ರದಲ್ಲೇ ಪ್ರತ್ಯೇಕ ಅರ್ಜಿ ನಮೂನೆಯನ್ನು ನೀಡಲಾಗುವುದು ಎಂದು ಹೇಳಿದರು.

Share

Leave a comment

Leave a Reply

Your email address will not be published. Required fields are marked *