ಡಿ.15ರಂದು ತಬಲ ಮಾಂತ್ರಿಕ ಜಾಕೀರ್ ಹುಸ್ಸೇನ್ ರವರು ತಮ್ಮ ಕೊನೆಯುಸಿರು ಎಳೆದಿದ್ದಾರೆ.
ಹೃದಯ ಸಂಬಂಧಿ ಖಾಯಿಲೆಗಳು ಇರುವ ಕಾರಣ ಜಾಕೀರ್ ಹುಸ್ಸೇನ್ ಅವರನ್ನು ಸ್ಯಾನ್ ಫ್ರಾನ್ಸಿಕೋ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರ ಸ್ನೇಹಿತ ಮತ್ತು ಕೊಳಲು ವಾದಕರಾದ ರಾಕೇಶ್ ಚೌರಾಸಿಯ ತಿಳಿಸಿದ್ದರು, ಜಾಕೀರ್ ಹುಸ್ಸೇನ್ ರವರು ಅಸ್ವಸ್ಥಗೊಂಡ ಕಾರಣ ಅವರನ್ನು ಐ.ಸಿ.ಯು ಲೀ ಇರಿಸಲಾಗಿದೆ, ನಾವೇಲ್ಲಾರೂ ಪರಿಸ್ಥಿತಿಯ ಬಗ್ಗೆ ತುಂಬಾ ಚಿಂತಗ್ರಸ್ಥರಾಗಿದ್ದೇವೆ ಎಂದು ರಾಕೇಶ್ ಚೌರಾಸಿಯಾ ಪಿಟಿಐಗೆ ತಿಳಿಸಿದರು.
ಇನ್ನು ಜಾಕೀರ್ ಹುಸ್ಸೇನ್ ರವರು ಕಳೆದ ಕೆಲ 3 4 ವಾರಗಳಿಂದ ಹೃದಯ ಸಂಬಂಧಿ ಸಮಸ್ಯೆ ಮತ್ತು ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಅವರ ಮ್ಯಾನೇಜರ್ ನಿರ್ಮಲಾ ಬಚಾನಿ ತಿಳಿಸಿದರು.
ಸತತ ಆರು ದಶಕಗಳ ಕಾಲ ಅವರ ವೃತ್ತಿಜೀವನದಲ್ಲಿ ಜಾಕೀರ್ ಹುಸ್ಸೇನ್ ರವರು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಹೆಸರು ಮಾಡಿ ತಮ್ಮದೇ ಆದಂತಹ ಅಭಿಮಾನಿ ಬಳಗವನ್ನು ಸಹ ಅವರು ಹೊಂದಿದ್ದರು.
ಝಾಕಿರ್ ಹುಸೇನ್ ಅಲ್ಲಾರಕ ಖುರೇಷಿ ಅವರು 9 ಮಾರ್ಚ್ 1951 ರಂದು ಮುಂಬೈನಲ್ಲಿ ಜನಿಸಿದ್ದರು. ಹುಸೇನ್ ಕಥಕ್ ನೃತ್ಯಗಾರ್ತಿ ಮತ್ತು ಶಿಕ್ಷಕಿ ಆಂಟೋನಿಯಾ ಮಿನ್ನೆಕೋಲಾ ಅವರನ್ನು ವಿವಾಹವಾಗಿದ್ದು, ಅನಿಸಾ ಖುರೇಷಿ ಮತ್ತು ಇಸಾಬೆಲ್ಲಾ ಖುರೇಷಿ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
1988 ರಲ್ಲಿ ಪದ್ಮಶ್ರೀ, 2002 ರಲ್ಲಿ ಪದ್ಮಭೂಷಣ ಮತ್ತು 2023 ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗೆ ಜಾಕಿರ್ ಹುಸೇನ್ ಭಾಜನರಾಗಿದ್ದರು.