SUDDIKSHANA KANNADA NEWS/ DAVANAGERE/ DATE:27-08-2023
ದಾವಣಗೆರೆ (Davanagere): ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ನನ್ನನ್ನು ಭೇಟಿಯಾಗಿದ್ದರು. ಆದ್ರೆ, ಕಾಂಗ್ರೆಸ್ ಸೇರ್ಪಡೆ ವಿಚಾರ ಕುರಿತಂತೆ ಯಾವುದೇ ಚರ್ಚೆಯಾಗಿಲ್ಲ. ಡಿಸಿಎಂ ಡಿ. ಕೆ. ಶಿವಕುಮಾರ್ ಸೇರಿದಂತೆ ಯಾವ ನಾಯಕರು ನನ್ನ ಜೊತೆ ಮಾತನಾಡಿಲ್ಲ. ಚರ್ಚೆಯಾಗಿದೆ ಎಂಬುದು ಕೇವಲ ವದಂತಿ ಅಷ್ಟೇ ಎಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಸ್ಪಷ್ಟಪಡಿಸಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಎಂ. ಪಿ. ರೇಣುಕಾಚಾರ್ಯ ಕಾಂಗ್ರೆಸ್ ಸೇರಲ್ಲ. ಇದೊಂದು ಸೌಹಾರ್ದಯುತ ಭೇಟಿ ಅಷ್ಟೇ. ಸಿಎಂ, ಡಿಸಿಎಂ, ಕಂದಾಯ ಸಚಿವರನ್ನು ಭೇಟಿಯಾಗಿದ್ದರು. ಈ ಹಿನ್ನೆಲೆಯಲ್ಲಿ ನನ್ನನ್ನು ಭೇಟಿಯಾಗಿದ್ದರು. ಸಚಿವರಾದ ಕಾರಣಕ್ಕೆ ಶುಭಾಶಯ ಕೋರಲು ಬಂದಿದ್ದರು. ಟೀ ಕುಡಿಯುವಂತೆ ಹೇಳಿದೆ. ಟೀ ಕುಡಿದರು. ಅದನ್ನು ಬಿಟ್ಟು ಕಾಂಗ್ರೆಸ್ ಸೇರ್ಪಡೆ ಕುರಿತಂತೆ ಯಾವುದೇ ರೀತಿಯ ಚರ್ಚೆ ರೇಣುಕಾಚಾರ್ಯ ಜೊತೆಗೆ ನಡೆದಿಲ್ಲ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ:
Funeral: ಕಣ್ಣೀರ ಕೋಡಿಯಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದ ಪ್ರಕಾರ ದಾವಣಗೆರೆಯ ಮೂವರ ಅಂತ್ಯಸಂಸ್ಕಾರ: ಡೆತ್ ನೋಟ್ ಸೀಕ್ರೆಟ್ ಇನ್ನೂ ಸಸ್ಪೆನ್ಸ್…!
ಬಿಜೆಪಿ ಪಕ್ಷದ ಕೆಲ ಬೆಳವಣಿಗೆಗಳ ಬಗ್ಗೆ ಮಾತನಾಡಿದರು. ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪರಿಗೆ ಬಿಜೆಪಿಯು ಅನ್ಯಾಯ ಮಾಡಿತು ಎಂದು ಹೇಳಿದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡಲು ನಾನು ಆಕಾಂಕ್ಷಿ ಎಂದು ಹೇಳಿದರು. ರೇಣುಕಾಚಾರ್ಯ ಕಾಂಗ್ರೆಸ್ ಸೇರ್ಪಡೆ ಸಂಬಂಧ ಯಾರೂ ಫೋನ್ ಮಾಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಚನ್ನಗಿರಿ ಶಾಸಕರ ಜೊತೆ ವೈಮನಸ್ಸಿಲ್ಲ:
ಚನ್ನಗಿರಿ ಶಾಸಕ ಶಿವಗಂಗಾ ವಿ. ಬಸವರಾಜ್ ಜೊತೆ ಯಾವುದೇ ವೈಮನಸ್ಸಿಲ್ಲ. ನನ್ನ ಮೊಬೈಲ್ ಗೆ ಕರೆ ಮಾಡಿದರೆ ಸ್ವೀಕರಿಸುತ್ತಿಲ್ಲ ಎಂದು ಹೇಳಿರುವುದು ಯಾರು? ಯಾವಾಗಲೂ ಫೋನ್ ಮಾಡಬಹುದು. ಯಾವುದೇ ಕರೆ ಬಂದಿಲ್ಲ. ಯಾವಾಗಲೂ ಫೋನ್ ಆನ್ ಇರುತ್ತದೆ ಎಂದು ಸಚಿವರಿಗೆ ಕರೆ ಮಾಡಿದರೆ ಸ್ವೀಕರಿಸುವುದಿಲ್ಲ ಎಂಬ ಶಿವಗಂಗಾ ಬಸವರಾಜ್ ರು ಆರೋಪ ಮಾಡಿದ್ದಾರಲ್ಲವಾ ಎಂಬ ಪ್ರಶ್ನೆಗೆ ಉತ್ತರಿಸಿದರು.
ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ನನ್ನ ಅಭಿಮಾನಿಗಳು ಇದ್ದಾರೆ. ಬಿಜೆಪಿ ಬಿಟ್ಟು ಕಾಂಗ್ರೆಸ್ ಗೆ ಬರುವುದಾದರೆ ಇವರೆಲ್ಲರ ಅಭಿಪ್ರಾಯ ಪಡೆಯಬೇಕು. ಪಕ್ಷದ ತತ್ವ, ಸಿದ್ಧಾಂತ ಒಪ್ಪಿ ಬಂದರೆ ಸ್ವಾಗತಿಸುತ್ತೇವೆ ಎಂದು
ಹೇಳಿದರು.