Home ದಾವಣಗೆರೆ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಅದೃಷ್ಟದಿಂದ ಬೆಳೆದಿಲ್ಲ; ಕಟು ಸತ್ಯ ಬಿಚ್ಚಿಟ್ಟ ದಕ್ಷಿಣ ಭಾರತದ ಸ್ಟಾರ್ ನಟಿ ಐಶ್ವರ್ಯಾ ಲಕ್ಷ್ಮಿ!
ದಾವಣಗೆರೆನವದೆಹಲಿಬೆಂಗಳೂರುಸಿನಿಮಾ

ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಅದೃಷ್ಟದಿಂದ ಬೆಳೆದಿಲ್ಲ; ಕಟು ಸತ್ಯ ಬಿಚ್ಚಿಟ್ಟ ದಕ್ಷಿಣ ಭಾರತದ ಸ್ಟಾರ್ ನಟಿ ಐಶ್ವರ್ಯಾ ಲಕ್ಷ್ಮಿ!

Share
ರಶ್ಮಿಕಾ ಮಂದಣ್ಣ
Share

ಬೆಂಗಳೂರು: ಚಿತ್ರರಂಗದಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರ (Rashmika Mandanna) ಅಭೂತಪೂರ್ವ ಬೆಳವಣಿಗೆಯನ್ನು ಕಂಡು ಅನೇಕರು ಇದು ಕೇವಲ ‘ಅದೃಷ್ಟ’ ಎಂದು ಮಾತನಾಡಿಕೊಂಡಿದ್ದಿದೆ.

ಆದರೆ, ರಶ್ಮಿಕಾ ಇಂದು ಈ ಮಟ್ಟಕ್ಕೆ ಬೆಳೆದು ನಿಂತಿರುವುದರ ಹಿಂದೆ ಅವರದ್ದೇ ಆದ ಕಠಿಣ ಶ್ರಮ ಹಾಗೂ ಬದ್ಧತೆಯಿದೆ ಎಂಬುದನ್ನು ಯಾರೂ ನಿರಾಕರಿಸುವಂತಿಲ್ಲ.

ಇಂಡಸ್ಟ್ರಿಯಲ್ಲಿ ಅವರ ಶ್ರಮ ಹಾಗೂ ನಟನೆಯನ್ನು ಗುರುತಿಸಿ ಗೌರವಿಸುವವರ ಸಂಖ್ಯೆಯೂ ದೊಡ್ಡದಿದೆ. ಇದೀಗ ಅದೇ ಸಾಲಿಗೆ ದಕ್ಷಿಣ ಭಾರತದ ಖ್ಯಾತ ನಟಿ ಐಶ್ವರ್ಯಾ ಲಕ್ಷ್ಮಿ (Aishwarya Lekshmi) ಕೂಡ ಸೇರಿದ್ದು, ರಶ್ಮಿಕಾ ಬಗ್ಗೆ ತಮ್ಮ ಮನದಾಳದ ಮಾತುಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ಅವರ ಪ್ರತಿಭೆಯನ್ನು ಮುಕ್ತ ಕಂಠದಿಂದ ಕೊಂಡಾಡಿರುವ ಐಶ್ವರ್ಯಾ ಲಕ್ಷ್ಮಿ, “ಎಲ್ಲರೂ ರಶ್ಮಿಕಾ ಮಂದಣ್ಣ ಆಗಲು ಸಾಧ್ಯವಿಲ್ಲ. ರಶ್ಮಿಕಾ ಮಾಡುವ ಕೆಲಸಗಳನ್ನು ಮಾಡಲು ನನ್ನಿಂದ ಖಂಡಿತಾ ಸಾಧ್ಯವಿಲ್ಲ.

ಅವರು ಸಿನಿಮಾಗಳಲ್ಲಿ ಅಷ್ಟೊಂದು ಆಕರ್ಷಕವಾಗಿ, ಅದ್ಭುತವಾಗಿ ನಟಿಸುತ್ತಾರೆ. ಅವರು ಪರದೆ ಮೇಲೆ ಮಾಡುವ ಮ್ಯಾಜಿಕ್ ಅಷ್ಟು ಸುಲಭದ ವಿಷಯವಲ್ಲ. ಅವರು ಸಾಕಷ್ಟು ಕಮರ್ಷಿಯಲ್ ಸಿನಿಮಾಗಳನ್ನು ಮಾಡುವುದರ ಜೊತೆಗೆ ವೈವಿಧ್ಯಮಯ ಪಾತ್ರಗಳಲ್ಲೂ ನಟಿಸಿದ್ದಾರೆ. ಮುಖ್ಯವಾಗಿ, ರಶ್ಮಿಕಾ ತರಹ ಎನರ್ಜಿಟಿಕ್ ಆಗಿ ಡ್ಯಾನ್ಸ್ ಮಾಡಲು ನನ್ನಿಂದ ಸಾಧ್ಯವೇ ಇಲ್ಲ,” ಎಂದು ಪ್ರಶಂಸಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್: ಐಶ್ವರ್ಯಾ ಲಕ್ಷ್ಮಿ ಅವರ ಈ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ರಶ್ಮಿಕಾ ಕೇವಲ ಅದೃಷ್ಟದಿಂದ ಮೇಲೆ ಬಂದಿಲ್ಲ, ಬದಲಿಗೆ ಅವರ ಪರಿಶ್ರಮದಿಂದಲೇ ಈ ಸ್ಥಾನ ಗಳಿಸಿದ್ದಾರೆ ಎಂಬುದಕ್ಕೆ ಈ ಮಾತುಗಳೇ ಸಾಕ್ಷಿ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.

ಸದ್ಯ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸಾಲು ಸಾಲು ದೊಡ್ಡ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಕೇವಲ ಸೌತ್ ಮಾತ್ರವಲ್ಲದೆ ಬಾಲಿವುಡ್‌ನಲ್ಲೂ ತಮ್ಮದೇ ಆದ ದೊಡ್ಡ ಮಾರುಕಟ್ಟೆ ಸೃಷ್ಟಿಸಿಕೊಂಡಿದ್ದಾರೆ.

ಇನ್ನು ರಶ್ಮಿಕಾ ಅವರ ಮುಂಬರುವ ಚಿತ್ರಗಳ ಬಗ್ಗೆ ಹೇಳುವುದಾದರೆ, ಅವರು ‘ಮೈಸಾ’ ಹೆಸರಿನ ಮಹಿಳಾ ಪ್ರಧಾನ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಚಿತ್ರದ ಪೋಸ್ಟರ್​​ಗಳು ಈಗಾಗಲೇ ಭಾರಿ ಗಮನ ಸೆಳೆದಿವೆ. ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಅವರು, ಸಿನಿಮಾ ಕೆಲಸಗಳನ್ನು ಅದೇ ಹಳೆಯ ವೇಗ ಹಾಗೂ ಜೋಶ್‌ನಲ್ಲೇ ಮುಂದುವರಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles