ನವದೆಹಲಿ:ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಭಕ್ತರು ನೀಡಿದ ಕಾಣಿಕೆ ಹಣವನ್ನು ದುರುಪಯೋಗಪಡಿಸಿಕೊಂಡ ಹಾಗೂ ಕಳ್ಳತನ ಮಾಡಿದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದ್ದು, ಒಟ್ಟು ಎಂಟು ಜನರ ವಿರುದ್ಧ ಪೊಲೀಸರು ಕ್ರಿಮಿನಲ್ ಮೊಕದ್ದಮೆ (FIR) ದಾಖಲಿಸಿದ್ದಾರೆ.
ಸಿಕ್ಕಿಬಿದ್ದಿದ್ದು ಹೇಗೆ?:
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನೀಡಿದ ಅಧಿಕೃತ ದೂರಿನ ಆಧಾರದ ಮೇಲೆ ರಾಮ ಜನ್ಮಭೂಮಿ ಪೊಲೀಸ್ ಠಾಣೆಯಲ್ಲಿ ಈ ಎಫ್‌ಐಆರ್ ದಾಖಲಾಗಿದೆ. ಆರೋಪಿಗಳ ಪೈಕಿ ಅನುಕಲ್ಪ್ ಮಿಶ್ರಾ ಮತ್ತು ಲವಕುಶ್ ಮಿಶ್ರಾ ಎಂಬುವವರನ್ನು ಪೊಲೀಸರು ತಕ್ಷಣವೇ ಬಂಧಿಸಿದ್ದಾರೆ. ಇನ್ನುಳಿದ ಆರು ಮಂದಿ ದೇವಸ್ಥಾನದ ನಗದು ಎಣಿಕೆ ವಿಭಾಗದ ಸಿಬ್ಬಂದಿಯಾಗಿದ್ದು, ಇವರೆಲ್ಲರೂ ಕಾಣಿಕೆ ಹಣವನ್ನು ಲಪಟಾಯಿಸುತ್ತಿದ್ದ ದೃಶ್ಯಗಳು ಸಿಸಿಟಿವಿ (CCTV) ಕ್ಯಾಮೆರಾಗಳಲ್ಲಿ ಸ್ಪಷ್ಟವಾಗಿ ಸೆರೆಯಾಗಿವೆ.
ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಚಾಲಕನಿಗಾಗಿ ಹುಡುಕಾಟ:
ಭಾರತೀಯ ನ್ಯಾಯ ಸಂಹಿತೆಯ (BNS) ಕಳ್ಳತನ, ವಿಶ್ವಾಸದ್ರೋಹ ಮತ್ತು ಅಪರಾಧ ಸಂಚು ನಿಯಮಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪಟ್ಟಿಯಲ್ಲಿ ಅವಿನಾಶ್ ಶುಕ್ಲಾ, ರಾಮಶಂಕರ್ ಮಿಶ್ರಾ, ರಾಮಾಶಂಕರ್ ಯಾದವ್, ಮನೀಶ್ ಯಾದವ್, ಸುಭಾಷ್ ಚಂದ್ರ ಶ್ರೀವಾಸ್ತವ ಮತ್ತು ಕರುಣೇಶ್ ಪಾಂಡೆ ಸೇರಿದ್ದಾರೆ. ಇದರಲ್ಲಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ವೈಯಕ್ತಿಕ ಕಾರು ಚಾಲಕನಾಗಿರುವ ರಾಮಶಂಕರ್ ಯಾದವ್ ಕೂಡ ಆರೋಪಿಯಾಗಿದ್ದು, ಸದ್ಯ ಆತ ತಲೆಮರೆಸಿಕೊಂಡಿದ್ದಾನೆ. ಪೊಲೀಸರು ಆತನಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ರಾಜಕೀಯ ಕೆಸರೆರಚಾಟ:
“ರಾಮಮಂದಿರದಲ್ಲಿ ಕಳ್ಳತನ ನಡೆದಿರುವುದನ್ನು ಕೊನೆಗೂ ಒಪ್ಪಿಕೊಳ್ಳಲಾಗಿದೆ. ಇದು ರಾಮಭಕ್ತರಿಗೆ ಸಿಕ್ಕ ಜಯ” ಎಂದು ಸಮಾಜವಾದಿ ಪಕ್ಷದ ವಕ್ತಾರ ಮೊಹಮ್ಮದ್ ಅಜಂ ಹೇಳಿಕೆ ನೀಡಿದ್ದಾರೆ. ಈ ಪ್ರಕರಣದ ತನಿಖೆಯನ್ನು ಈಗಾಗಲೇ ವಿಶೇಷ ತನಿಖಾ ತಂಡ (SIT) ನಡೆಸುತ್ತಿದೆ.
- Ayodhya CCTV theft footage
- Ayodhya Kannada News
- Ayodhya latest news
- Ayodhya Ram Mandir donation theft
- Ayodhya temple staff arrested
- BNS section temple theft
- Breaking News India
- Champat Rai driver Ramshankar Yadav
- Ram Temple donation scam
- Shri Ram Janmabhoomi Teerth Kshetra Trust FIR
- ಅಯೋಧ್ಯಾ ರಾಮ ಮಂದಿರ ಕಳ್ಳತನ
- ಅಯೋಧ್ಯೆ ಕ್ರಿಮಿನಲ್ ಕೇಸ್
- ಅಯೋಧ್ಯೆ ದೇವಸ್ಥಾನ ಸಿಬ್ಬಂದಿ ಬಂಧನ
- ಕನ್ನಡ ಸುದ್ದಿ
- ಚಂಪತ್ ರಾಯ್ ಡ್ರೈವರ್ ಕಳ್ಳತನ
- ರಾಮ ಮಂದಿರ ಕಾಣಿಕೆ ಕಳುವು
- ಶ್ರೀರಾಮ ಜನ್ಮಭೂಮಿ ಟ್ರಸ್ಟ್ FIR
- ಸಿಸಿಟಿವಿ ರಾಮ ಮಂದಿರ





Leave a comment