SUDDIKSHANA KANNADA NEWS/ DAVANAGERE/ DATE:26-08-2023
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ರಾಶಿಗಳಿಗೆ ಒಳಿತು, ಯಾವ ರಾಶಿ (Rashi) ಗೆ ಕೆಡುಕು ಎಂಬುದನ್ನು ನೋಡಲಾಗುತ್ತದೆ. ಪ್ರತಿಯೊಂದು ರಾಶಿ(Rashi) ಯದ್ದು ದಿನ ಭವಿಷ್ಯ (Bhavishya) ವೂ ದಿನ ಕಳೆದಂತೆ ಬೇರೆ ಬೇರೆಯದ್ದೇ ಆಗಿರುತ್ತದೆ. ಮೇಷ, ವೃಷಭ, ಮಿಥುನ, ಸಿಂಹ, ಕರ್ಕ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ. ಹಾಗೆಯೇ 27 ರಾಶಿ(Rashi) ಗಳಿಗೆ ಭವಿಷ್ಯ ಹೇಳಬಹುದು. ಪ್ರತಿಯೊಂದು ಮೊತ್ತವು ತನ್ನದೇ ಆದ ಸ್ವಭಾವ ಮತ್ತು ಗುಣಲಕ್ಷಣಗಳನ್ನು ಹೊಂದಿದೆ, ಆದ್ದರಿಂದ ಗ್ರಹಗಳ ಜೀವನದಲ್ಲಿ ಸಂಭವಿಸುವ ಸಂದರ್ಭಗಳು ಪ್ರತಿ ದಿನದ ಗ್ರಹಗಳಿಗೆ ಅನುಗುಣವಾಗಿ ಬದಲಾಗುತ್ತವೆ.
ಈ ದೈನಂದಿನ ಜಾತಕ ಫಲಿತಾಂಶಗಳಲ್ಲಿ ನಿಖರವಾದ ಖಗೋಳ ಲೆಕ್ಕಾಚಾರಗಳ ಆಧಾರದ ಮೇಲೆ ತತ್ವಶಾಸ್ತ್ರವನ್ನು ಬರೆದಿದೆ. ಅಲ್ಲದೆ, ನಾವು ವಾರದ ಜಾತಕಗಳಲ್ಲಿ ಚಿಕ್ಕ ಜ್ಯೋತಿಷ್ಯ ಲೆಕ್ಕಾಚಾರಗಳನ್ನು ನೋಡಿದ್ದೇವೆ. ಅದೇ ಮಾನದಂಡವು ಮಾಸಿಕ ರಾಶಿ ಫಲಗಳಿಗೆ ಅನ್ವಯಿಸುತ್ತದೆ. ವರ್ಷದ ಜಾತಕ ಫಲಿತಾಂಶಗಳಲ್ಲಿ, ನಮ್ಮ ಅನುಭವಿ ಜ್ಯೋತಿಷಿಗಳು ಎಲ್ಲಾ ವಿಷಯಗಳನ್ನು ಅಂದರೆ ಆರೋಗ್ಯ, ವೈವಾಹಿಕ ಜೀವನ, ಪ್ರೀತಿ, ಸಂಪತ್ತು, ಸಮೃದ್ಧಿ, ಕುಟುಂಬ ಮತ್ತು ವ್ಯಾಪಾರ, ವೃತ್ತಿ ಇತ್ಯಾದಿಗಳನ್ನು ಎಲ್ಲಾ ಗ್ರಹಗಳ ಬದಲಾವಣೆಗಳ ಮೂಲಕ ಕೂಲಂಕಷವಾಗಿ ಮಾಹಿತಿ ಇರಲಿದೆ.
Read Also This Story:
Darshan apologizes: ಮಾಧ್ಯಮದ ಎದುರು ಮಂಡಿಯೂರಿದ ಚಾಲೆಂಜಿಂಗ್ ಸ್ಟಾರ್: ಹಿರಿಯ ಪತ್ರಕರ್ತರ ಕ್ಷಮೆ ಕೇಳಿ ದಾಸರಾದ ಡಿ ಬಾಸ್ ದರ್ಶನ್…!
ಮೇಷ (Rashi):
ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಆರೋಗ್ಯ ಸಮಸ್ಯೆ ಇದ್ದರೆ ನಿರ್ಲಕ್ಷ್ಯ ವಹಿಸಬೇಡಿ. ಆದಷ್ಟು ಬೇಗ ವೈದ್ಯರ ಬಳಿ ಹೋಗಿ. ಆಂಜನೇಯ ಸ್ವಾಮಿ ಆರಾಧಿಸಿ.
ವೃಷಭ ( Rashi):
ಇಂದು ಪ್ರಯಾಣದಲ್ಲಿ ಸ್ವಲ್ಪ ತೊಂದರೆ ಆಗಬಹುದು. ಎಚ್ಚರದಿಂದ ಇರಿ. ದೂರ ಪ್ರಯಾಣ ತಪ್ಪಿಸಿ.
ಮಿಥುನ (Rashi):
ದು ಹೃದಯ ರೋಗಿಗಳಿಗೆ ಕಾಫಿ ಬಿಡಲು ಸರಿಯಾದ ಸಮಯ. ಯಾವುದೇ ಮುಂದುವರಿದ ಬಳಕೆ ನಿಮ್ಮ ಹೃದಯಕ್ಕೆ ತೊಂದರೆ ಉಂಟು ಮಾಡುವ ಸಾಧ್ಯತೆ ಇದೆ. ಆಹಾರದ ಬಗ್ಗೆಯೂ ಕಾಳಜಿ ವಹಿಸಿ.
ಕರ್ಕ (Rashi):
ಮದ್ಯಪಾನ, ಧೂಮಪಾನ ಬಿಡಲು ಸರಿಯಾದ ಸಮಯ. ಈ ಚಟ ಹೊಂದಿರುವವರ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಆದ್ದರಿಂದ ದುಶ್ಚಟಗಳಿಂದ ದೂರ ಇರಿ.
ಸಿಂಹ (Rashi):
ನಿಮ್ಮ ವರ್ತನೆಯಿಂದ ಎಲ್ಲರ ಪ್ರಶಂಸೆ ವ್ಯಕ್ತವಾಗುತ್ತದೆ. ನಿಮ್ಮ ನಿರ್ಧಾರಕ್ಕೆ ಹಿರಿಯರಿಂದ ಶಹಬ್ಬಾಸ್ ಗಿರಿ ಸಿಗುತ್ತೆ. ಹಿರಿಯರ ಆಶೀರ್ವಾದ ನಿಮ್ಮ ಮೇಲಿರುತ್ತದೆ. ಆಂಜನೇಯ ಸ್ವಾಮಿ ಆಶೀರ್ವಾದ ನಿಮ್ಮ
ಮೇಲಿದೆ.
ಕನ್ಯಾ (Rashi):
ನೀವು ಭಯಪಡಬೇಡಿ. ಈ ಹಿಂದೆ ನೀವು ಅಂದುಕೊಂಡ ಕೆಲಸವೂ ಈಡೇರುವ ಸಮಯ ಹತ್ತಿರ ಬರುತ್ತದೆ. ನೀವು ಅಂದುಕೊಂಡ ದಾರಿಯಲ್ಲಿ ಮುಂದುವರಿಯಿರಿ.
ತುಲಾ (Rashi):
ವ್ಯಾಪಾರಿಗಳು ಹುಷಾರಾಗಿರಬೇಕು. ತೂಕದಲ್ಲಿ ಮೋಸ ಮಾಡುವ ಪ್ರವೃತ್ತಿ ಹೊಂದಿದ್ದರೆ ಬಿಟ್ಟುಬಿಡಿ. ಯಾಕೆಂದರೆ ಗ್ರಾಹಕರು ನಿಮ್ಮ ಮೇಲೆ ಮುಗಿಬೀಳುತ್ತಾರೆ. ಅನುಮಾನ ಪೆದ್ದ ರೋಗಂ ಎಂಬಂತೆ ಕೆಲವರು
ನಿಮ್ಮ ಯಶಸ್ಸಿಗೆ ತಡೆಯೊಡ್ಡಲು ಹವಣಿಸುತ್ತಿದ್ದಾರೆ. ಅತಿಯಾಗಿ ಏನನ್ನೂ ಸೇವನೆ ಮಾಡಬೇಡಿ.
ವೃಶ್ಚಿಕ (Rashi):
ನಿಮ್ಮ ಮುಖದಲ್ಲಿ ನಗು ಇರಲಿ. ಬೇರೆಯವರ ಬಗ್ಗೆ ಅಪಹಾಸ್ಯ ಮಾಡಬೇಡಿ. ಕೆಲವರಿಗೆ ಪ್ರಯಾಣಿಸುವ ಸಾಧ್ಯತೆ ಇದೆ. ನಗು ನಗುತ್ತಾ ಎಲ್ಲರನ್ನೂ ರಂಜಿಸಿ, ನೀವು ಖುಷಿಪಡುತ್ತೀರಾ.
ಧನು (Rashi):
ನಿಮ್ಮ ಸಾಮರ್ಥ್ಯ, ಬುದ್ಧಿಶಕ್ತಿಗೆ ಮೆಚ್ಚುಗೆ ವ್ಯಕ್ತವಾಗುತ್ತದೆ. ನಿಮ್ಮ ನಿರಂತರ ಪ್ರಯತ್ನಕ್ಕೆ ಖಂಡಿತವಾಗಿಯೂ ಯಶಸ್ಸು ನಿಮಗೆ ಸಿಗುತ್ತದೆ.
ಮಕರ (Rashi):
ನೀವು ಭಾವಾನಾತ್ಮಕವಾಗಿ ನೀವು ತುಂಬ ಸ್ಥಿರವಾಗಿರುವುದಿಲ್ಲ. ಇತರರ ಮುಂದೆ ಮಾತನಾಡುವಾಗ ಎಚ್ಚರ ವಹಿಸಿ. ಪ್ರತಿಯೊಂದನ್ನೂ ಆಲೋಚಿಸಿ ಮಾತನಾಡುವುದು ಒಳಿತು.
ಕುಂಭ (Rashi):
ಕಿರಿಕಿರಿ ನಿಮ್ಮ ಮಾನಸಿಕ ಶಾಂತಿಗೆ ತೊಂದರೆ ತಂದರೂ ಒಬ್ಬ ಸ್ನೇಹಿತರು ನಿಮ್ಮ ಸಮಸ್ಯೆಗಳನ್ನು ಪರಿಹರಿಸುತ್ತಾರೆ. ನಿಮ್ಮ ಕಷ್ಟಕ್ಕೆ ಸ್ಪಂದಿಸುತ್ತಾರೆ.
ಮೀನ (Rashi):
ಜನರನ್ನು ನಿಮ್ಮಿಷ್ಟದಂತೆ ನಡೆದುಕೊಳ್ಳುವಂತೆ ಒತ್ತಾಯಿಸಬೇಡಿ. ಇತರರ ಬಯಕೆ ಮತ್ತು ಆಸಕ್ತಿಗೆ ಗೌರವ, ಮನ್ನಣೆ ಕೊಡಿ.