SUDDIKSHANA KANNADA NEWS/ DAVANAGERE/ DATE:06-12-2024
ನವದೆಹಲಿ: ರಾಜ್ಯಸಭೆಯ ಕಾಂಗ್ರೆಸ್ ಸದಸ್ಯ ಅಭಿಷೇಕ್ ಸಿಂಘ್ವಿ ಅವರಿಗೆ ಮೀಸಲಾದ ಸಂಸತ್ ನಲ್ಲಿನ ಸೀಟ್ ಕೆಳಗಡೆ ನೋಟುಗಳ ಬಂಡಲ್ ಪತ್ತೆಯಾಗಿದೆ.
ಅಭಿಷೇಕ್ ಸಿಂಘ್ವಿಗೆ ಮೀಸಲಾದ ಸಂಸತ್ ನ ಸೀಟ್ ನಲ್ಲಿ ಪತ್ತೆಯಾಗಿರುವ ನಗದು ಕುರಿತಂತೆ ತನಿಖೆಗೆ ಆದೇಶಿಸಲಾಗಿದೆ.
ಸಾಮಾನ್ಯ ತಪಾಸಣೆ ವೇಳೆ ಕಾಂಗ್ರೆಸ್ ಸಂಸದರ ಸ್ಥಾನದಿಂದ ನೋಟುಗಳ ಬಂಡಲ್ ಪತ್ತೆಯಾಗಿದ್ದು, ತನಿಖೆ ನಡೆಸುವಂತೆ ರಾಜ್ಯಸಭಾ ಸಭಾಪತಿ ಆದೇಶ ನೀಡಿದ್ದಾರೆ.
ಕಾಂಗ್ರೆಸ್ ಸಂಸದ ಅಭಿಷೇಕ್ ಮನು ಸಿಂಘ್ವಿ ಅವರಿಗೆ ನೀಡಲಾಗಿದ್ದ ಆಸನದಿಂದ ಸಂಸತ್ ಭದ್ರತಾ ಅಧಿಕಾರಿಗಳು ನಗದು ವಶಪಡಿಸಿಕೊಂಡಿದ್ದಾರೆ ಎಂದು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧಂಖರ್ ಶುಕ್ರವಾರ ಹೇಳಿದ್ದಾರೆ.