ಬೆಂಗಳೂರು: “ತಳಮಟ್ಟದಿಂದ ಸರಿಪಡಿಸಬೇಕಾಗಿದೆ. ಹಳ್ಳಿಯಿಂದ ವಿಧಾನಸೌಧದವರೆಗೆ ಅದೇ ಪದ್ಧತಿಯಲ್ಲಿ ಕೆಲಸ ಮಾಡುತ್ತೇವೆ” ಎಂದು ಸಿಎಂ ಡಿ. ಕೆ. ಶಿವಕುಮಾರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಜಿಲ್ಲಾಧಿಕಾರಿಗಳು, ಎಸ್ಪಿ, ಸಿಇಒ, ಡಿಎಫ್ಒ ಹಾಗೂ ಸರ್ಕಾರಿ ಹಿರಿಯ ಅಧಿಕಾರಿಗಳೊಂದಿಗೆ 7 ಗಂಟೆಗಳ ಕಾಲ ಸುದೀರ್ಘ ಸಭೆ ನಡೆಸಿದ ಬಳಿಕ ಶಿವಕುಮಾರ್ ಅವರು ಮಾಧ್ಯಮಗೋಷ್ಠಿ ನಡೆಸಿ ಶನಿವಾರ ಮಾಹಿತಿ ನೀಡಿದರು.
ಅಧಿಕಾರಿಗಳಲ್ಲಿ ಪರ್ಸೆಂಟೇಜ್ ಮಟ್ಟದಲ್ಲಿ ಕಮಿಷನ್ ಪಡೆಯಲಾಗುತ್ತಿದ್ದು, ನೀವು ಇದನ್ನು ಎಷ್ಟು ಪರ್ಸೆಂಟ್ ಗೆ ನಿಯಂತ್ರಿಸುತ್ತೀರಿ ಎಂದು ಕೇಳಿದಾಗ, “ಯಾವ ಪರ್ಸೆಂಟೇಜ್ ಇಲ್ಲ, 0 ಪರ್ಸೆಂಟೇಜ್ ಗೆ ತರುತ್ತೇವೆ” ಎಂದು ತಿಳಿಸಿದರು.
ಭಾರತ ಜೋಡೋ ಎಂಬುದೇ ರಾಜಕೀಯ ಕಾರ್ಯಕ್ರಮವಾಗಿದ್ದು, ಇದರ ಸಂಘಗಳು ಹೇಗೆ ರಾಜಕೀಯೇತ್ತರವಾಗುತ್ತದೆ ಎಂದು ಕೇಳಿದಾಗ, “ಭಾರತ ಜೋಡೋ ಕಾರ್ಯಕ್ರಮ ರಾಜಕೀಯ ಕಾರ್ಯಕ್ರಮ ಎಂದು ಹೇಳಿದ್ದು ಯಾರು? ದೇಶವನ್ನು ಹಾಗೂ ಜನರ ಹೃದಯ ಒಂದುಗೂಡಿಸುವುದು, ಸಮಾಜವನ್ನು ಶಾಂತಿಯ ತೋಟವಾಗಿ ಮಾಡುವುದು ರಾಜಕೀಯ ಕ್ರಮವೇ? ಕುವಂಪು ಅವರ ಸರ್ವಜನಾಂಗದ ಶಾಂತಿಯ ತೋಟ ಎಂಬ ಸಂದೇಶ ರಾಜಕೀಯ ಕ್ರಮವೇ?” ಎಂದು ಪ್ರಶ್ನಿಸಿದರು.
ಯುವಕರಿಗೆ ಪ್ರೋತ್ಸಾಹ ನೀಡಲು ವಿವಿಧ ಇಲಾಖೆಗಳಿವೆ. ಆದರೂ ಈ ಸಂಘಗಳೇಕೆ ಎಂದು ಕೇಳಿದಾಗ “ಈ ಎಲ್ಲಾ ಇಲಾಖೆಗಳು ಈ ಕಾರ್ಯಕ್ರಮದಲ್ಲಿ ಕೈಜೋಡಿಸಲಿವೆ. ಈ ಕಾರ್ಯಕ್ರಮಕ್ಕೆ ರೂಪುರೇಷ ಕೊಟ್ಟ ಬಳಿಕ ಎಲ್ಲವನ್ನು ವಿವರವಾಗಿ ತಿಳಿಸುತ್ತೇನೆ” ಎಂದರು.
ಜನರನ್ನು ವಂಚಿಸುವ ಸ್ಕೀಂಗಳ ಬಗ್ಗೆ ಕೇಳಿದಾಗ, “ನಾನು ಈ ವಿಚಾರವಾಗಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ವರದಿ ಬಂದ ಬಳಿಕ ಯಾರು ಕಾನೂನು ಬಾಹೀರವಾಗಿ ನಡೆಸುತ್ತಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳಬಹುದು. ಕಾನೂನು ಚೌಕಟ್ಟಿನಲ್ಲಿ ನಡೆಸುವವರಿಗೆ ನಾವು ಏನೂ ಮಾಡಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಕೆಲವು ತೀರ್ಮಾನ ಮಾಡಿ ಅವಕಾಶ ಕೊಟ್ಟಿದೆ. ಅದರ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದಾರಾ ಇಲ್ಲವೇ ಎಂದು ಪರಿಶೀಲನೆ ಮಾಡಲಾಗುವುದು. ಈ ಬಗ್ಗೆ ಜನರಲ್ಲೂ ಜಾಗೃತಿ ಮೂಡಿಸುತ್ತೇವೆ” ಎಂದು ತಿಳಿಸಿದರು.
ರಸಗೊಬ್ಬರ ಪೂರೈಕೆಯಾಗಿಲ್ಲ ಎಂದು ಕೇಳಿದಾಗ “ಈ ವಿಚಾರವಾಗಿ ನಾವು ಚರ್ಚೆ ಮಾಡಿದ್ದು, ಈ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುತ್ತೇವೆ. ಪ್ರಧಾನಮಂತ್ರಿಗಳು ಈ ವಿಚಾರವಾಗಿ ಹೇಳಿದ್ದಾರೆ. ನಾವು ಈ ಬಗ್ಗೆ ಸಭೆ ಮಾಡಿದ್ದೇವೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ನಮಗೆ ಸಹಕಾರ ನೀಡಬೇಕು. ನಾವು ಅವರೊಂದಿಗೆ ಸಂಪರ್ಕ ಹೊಂದಿದ್ದು, ಒತ್ತಡ ಹಾಕುತ್ತಿದ್ದೇವೆ. ಅವರು ಯುದ್ಧದ ಕಾರಣ ಹೇಳುತ್ತಿದ್ದಾರೆ. ಇದಕ್ಕಾಗಿ ಪ್ರಧಾನಿ ಸಾವಯವ ಗೊಬ್ಬರ ಬಳಕೆಗೆ ಕರೆ ನೀಡಿದ್ದಾರೆ. ರಸಗೊಬ್ಬರ ಕಡಿಮೆ ಬಳಕೆಗೆ ಸಲಹೆ ನೀಡಿದ್ದಾರೆ. ಅವರು ತಮ್ಮದೇ ಆದ ಕ್ರಮಗಳನ್ನು ತಿಳಿಸಿದ್ದಾರೆ” ಎಂದರು.
- 0 Percent Commission Karnataka
- 0 ಪರ್ಸೆಂಟ್ ಕಮಿಷನ್ ಕರ್ನಾಟಕ
- CM DK Shivakumar
- DK Shivakumar Press Meet
- Fertilizer Shortage Karnataka
- Gruha Lakshmi Scheme updates
- Guarantee Schemes Review
- Karnataka Politics News
- Organic Farming Karnataka.
- Vidhana Soudha DC Meeting
- ಕರ್ನಾಟಕ ರಾಜಕೀಯ ಸುದ್ದಿ
- ಗೃಹಲಕ್ಷ್ಮಿ ಯೋಜನೆ ಮರುಪರಿಶೀಲನೆ
- ಗ್ಯಾರಂಟಿ ಯೋಜನೆ ಪರಿಶೀಲನೆ
- ಜಿಲ್ಲಾಧಿಕಾರಿಗಳ ಸಭೆ ಬೆಂಗಳೂರು
- ಡಿ ಕೆ ಶಿವಕುಮಾರ್ ಮಾಧ್ಯಮಗೋಷ್ಠಿ
- ರಸಗೊಬ್ಬರ ಕೊರತೆ ಕರ್ನಾಟಕ
- ವಿಧಾನಸೌಧ ಅಧಿಕಾರಿಗಳ ಸಭೆ
- ಸಾವಯವ ಗೊಬ್ಬರ ರೈತರು.
- ಸಿಎಂ ಡಿ ಕೆ ಶಿವಕುಮಾರ್





Leave a comment