ದಾವಣಗೆರೆ: ಕಳೆದ ಏಪ್ರಿಲ್ ತಿಂಗಳಲ್ಲಿ ನಡೆದ 2025 -26 ನೇ ಸಾಲಿನ ಕೆಸಿಟಿ ಪರೀಕ್ಷೆಯಲ್ಲಿ ದಾವಣಗೆರೆಯ ಸಿದ್ದಗಂಗಾ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಅಮೋಘ ಸಾಧನೆಯನ್ನು ಮಾಡಿದ್ದಾರೆ.
ವಿವಿಧ ಕೋರ್ಸ್ ಗಳಿಗಾಗಿ ನಡೆದ ಈ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 175 ಕ್ಕೂ ಹೆಚ್ಚು ವಿದ್ಯಾರ್ಥಿಗಳು 5000ದೊಳಗೆ ರ್ಯಾಂಕ್ ಅನ್ನು ಪಡೆದು ಕಾಲೇಜಿಗೆ ಪೋಷಕರಿಗೆ ಕೀರ್ತಿಯನ್ನು ತಂದಿದ್ದಾರೆ.
ಪಶು ವೈದ್ಯಕೀಯ ವಿಭಾಗದಲ್ಲಿ ಪ್ರವೀಣ್ ಕುಮಾರ್ ಪೂಜಾರ್ 62ನೇ ರ್ಯಾಂಕ್ ಅನ್ನು ದರ್ಶನ್ ಟಿ ಎಂ 689ನೇ ರ್ಯಾಂಕನ್ನು, ಸ್ಪೂರ್ತಿ ಪಿ ಆರ್ 977ನೇ ರ್ಯಾಂಕನ್ನು ಪಡೆದಿದ್ದಾರೆ. ಕೃಷಿ ವಿಜ್ಞಾನ ವಿಭಾಗದಲ್ಲಿ ಶರತ್ ಹನುಮಪ್ಪ ಕುದುರಿ ಹಾಳ್93ನೇ, ಶಿವಶಂಕರ ರಾಘವೇಂದ್ರ ತೊಪ್ಪಿನ್158, ಹರ್ಷಿತಾ ಹೆಚ್. 294, ಹೆಚ್.ಅನುಶ್ರೀ 296ನೇ, ವಿನುತ್ ಲಿಂಗನಗೌಡ ಪಾಟೀಲ್ 353, ಸುಬ್ರಹ್ಮಣ್ಯ ಆರ್ ಘೋರ್ಪಡೆ 493, ಭೂಮಿಕಾ ಪರಮೇಶಪ್ಪ ಇಟಗಿ 1056ನೇ ರ್ಯಾಂಕನ್ನು ಪಡೆದಿದ್ದಾರೆ.
ಆಹಾರ ವಿಜ್ಞಾನ ವಿಭಾಗದಲ್ಲಿ ಜಯದೇವ್ 759ನೇ, ಚಂದನ್ ಎಂ ಡಿ 891, ದೀಪಾ ಬಿ ಜೆ 934 ನೇ ರ್ಯಾಂಕನ್ನು ಪಡೆದಿರುತ್ತಾರೆ. BPO ವಿಭಾಗದಲ್ಲಿ ರಶ್ಮಿ ಎಚ್ಎಸ್ 768ನೇ ರ್ಯಾಂಕನ್ನು ಪಡೆದಿದ್ದಾರೆ. ಇಂಜಿನಿಯರಿಂಗ್ ವಿಭಾಗದಲ್ಲಿ ಸಮರ್ಥ್ ಮನೋಹರ್ ಕೋರಿ 1060ನೇ ರ್ಯಾಂಕನ್ನು ಪಡೆದು ಸಾಧನೆಗೈದಿದ್ದಾರೆ.
ಹೀಗೆ ಹಲವು ಹತ್ತಾರು ವಿಭಾಗಗಳಲ್ಲಿ 175ಕ್ಕೂ ಹೆಚ್ಚು ವಿದ್ಯಾರ್ಥಿಗಳು ಐದು ಸಾವಿರದ ಒಳಗೆ ರ್ಯಾಂಕನ್ನು ಪಡೆದು ಸಂಸ್ಥೆಯ ಸಾಧನೆಯಹೆಜ್ಜೆಗಳನ್ನು ದೃಢಗೊಳಿಸಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಯನ್ನು ಶ್ಲಾಘಿಸಿದ ಸಂಸ್ಥೆಯ ಮುಖ್ಯಸ್ಥೆ ಡಾ. ಜಸ್ಟಿನ್ ಡಿಸೋಜಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಅಭಿನಂದಿಸಿದ್ದಾರೆ.
ಸಂಸ್ಥೆಯ ಕಾರ್ಯದರ್ಶಿಗಳಾದ ಹೇಮಂತ್ ಡಿಎಸ್, ನಿರ್ದೇಶಕರಾದ ಡಾಕ್ಟರ್ ಜಯಂತ್ ಡಿಎಸ್, ಅಧ್ಯಕ್ಷರಾದ ಪ್ರಶಾಂತ್ ಡಿಎಸ್ ಪ್ರಾಂಶುಪಾಲರಾದ ವಾಣಿಶ್ರೀ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳ ಈ ಸಾಧನೆಗೆ ಹರ್ಷ ಪೂರ್ಣ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
- Davanagere Education News
- Davanagere Siddaganga College
- KCET 2025 Results
- KCET Agriculture Top Ranks
- KCET Engineering Ranks Siddaganga
- KCET Veterinary Ranks
- Praveen Kumar Poojar KCET
- Siddaganga College Davanagere KCET Ranks
- Siddaganga Educational Institutions
- ಕೆಸಿಇಟಿ ಅಗ್ರಿಕಲ್ಚರ್ ರ್ಯಾಂಕ್
- ಕೆಸಿಇಟಿ ಫಲಿತಾಂಶ 2025
- ಕೆಸಿಇಟಿ ರ್ಯಾಂಕ್ ಲಿಸ್ಟ್
- ದಾವಣಗೆರೆ ಶಿಕ್ಷಣ ಸುದ್ದಿ
- ದಾವಣಗೆರೆ ಸಿದ್ದಗಂಗಾ ಕಾಲೇಜು
- ಪ್ರವೀಣ್ ಕುಮಾರ್ ಪೂಜಾರ್ 62ನೇ ರ್ಯಾಂಕ್
- ವೆಟರಿನರಿ ರ್ಯಾಂಕ್ ಸಿದ್ದಗಂಗಾ
- ಸಿದ್ದಗಂಗಾ ವಿದ್ಯಾ ಸಂಸ್ಥೆ ದಾವಣಗೆರೆ
- ಸಿದ್ದಗಂಗಾ ವಿದ್ಯಾರ್ಥಿಗಳ ಸಾಧನೆ





Leave a comment