Home ಕ್ರೈಂ ನ್ಯೂಸ್ ಬಸವಾಪಟ್ಟಣ ಗ್ಯಾಂಗ್ ರೇಪ್ ಕೇಸ್‌ನಲ್ಲಿ ಅಪ್ರಾಪ್ತ ಸೇರಿ ಹತ್ತು ಜನರ ಬಂಧನ: ದಾವಣಗೆರೆ ಎಸ್‌ಪಿ ಬಿಚ್ಚಿಟ್ಟ ಸ್ಫೋಟಕ ಸತ್ಯ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಬಸವಾಪಟ್ಟಣ ಗ್ಯಾಂಗ್ ರೇಪ್ ಕೇಸ್‌ನಲ್ಲಿ ಅಪ್ರಾಪ್ತ ಸೇರಿ ಹತ್ತು ಜನರ ಬಂಧನ: ದಾವಣಗೆರೆ ಎಸ್‌ಪಿ ಬಿಚ್ಚಿಟ್ಟ ಸ್ಫೋಟಕ ಸತ್ಯ!

Share
ದಾವಣಗೆರೆ
Share

ದಾವಣಗೆರೆ: ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಯಲ್ಲದನಹಳ್ಳಿ ತೋಟದಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಚ್. ಟಿ. ಶೇಖರ್ ಅವರು ಸ್ಫೋಟಕ ಮಾಹಿತಿ ನೀಡಿದ್ದು, ಈ ಪ್ರಕರಣದಲ್ಲಿ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನೂ ಸೇರಿದ್ದಾನೆ.

ಘಟನೆ ಸಂಬಂಧ ಹತ್ತು ಆರೋಪಿಗಳನ್ನು ಬಂಧಿಸಲಾಗಿದೆ. ಕೃತ್ಯ ಎಸಗಿದವರು, ಕೃತ್ಯ ಎಸಗಲು ಸ್ಥಳದಲ್ಲಿದ್ದು ಪ್ರಚೋದಿಸಿದವರು ಹಾಗೂ ವಿಡಿಯೋ ಚಿತ್ರೀಕರಣ ಮಾಡಿದವರೂ ಸೇರಿದಂತೆ ಒಟ್ಟು ಆರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಅವರು ಖಚಿತಪಡಿಸಿದ್ದಾರೆ.

ಬಸವಾಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಗ್ರಾಮದಲ್ಲಿ ಜೂನ್ 3ರಂದು ಈ ಪೈಶಾಚಿಕ ಕೃತ್ಯ ನಡೆದಿದೆ. ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ನೊಂದ ಮಹಿಳೆ ಬೆಳಿಗ್ಗೆ 12.30ರ ಸುಮಾರಿಗೆ ಆಗಮಿಸಿ ಬಸವಾಪಟ್ಟಣ ಪೊಲೀಸ್ ಠಾಣೆಗೆ ಬಂದು ಲಿಖಿತ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಸಾಮೂಹಿಕ ಅತ್ಯಾಚಾರ ಕೇಸ್ ದಾಖಲಿಸಲಾಗಿದೆ.

ಪ್ರತಿನಿತ್ಯ ಗಂಡ ಕುಡಿದು ಮನೆಗೆ ಬರುತ್ತದ್ದ. ಸಂಸಾರ ಸಾಗಿಸಲು ಕಷ್ಟವಾಗುತ್ತಿದ್ದ ಕಾರಣ ಪತಿ ಮತ್ತು ಪತ್ನಿ ನಡುವೆ ಗಲಾಟೆ ಆಗಿದೆ. ಇದರಿಂದ ಮನನೊಂದ ಮಹಿಳೆಯು ಹತ್ತಿರದಲ್ಲೇ ಇದ್ದ ತನ್ನ ತವರು ಮನೆಗೆ ಹೋಗುತ್ತಿದ್ದರು. ಈ ವೇಳೆ ಅಂಗಡಿ ಬಳಿ ನಿಂತಿದ್ದರು. ಆಗ ಬಾಲಕನೊಬ್ಬ ತನ್ನ ಬೈಕ್ ನಲ್ಲಿ ಕರೆದುಕೊಂಡು ಹೋಗಿದ್ದಾನೆ. ಕೂಲ್ಡ್ ಡ್ರಿಂಕ್ಸ್ ನೀಡಲಾಗಿದೆ. ಆ ಬಳಿಕ ಆಕೆಗೆ ಮತ್ತು ಬಂದಿದೆ. ಬೈಕ್ ನಲ್ಲಿ ಕರೆದುಕೊಂಡು ತೋಟದಲ್ಲಿ ಆರೋಪಿಗಳು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಜೂನ್ 8ರಂದು ರಾತ್ರಿ ಆರೋಪಿಗಳು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಮಾಡಿದ್ದಾರೆ. ಈ ವಿಡಿಯೋ ವ್ಯಾಪಕ ಪ್ರಚಾರವಾಗಿದೆ. ಗ್ರಾಮಗಳಲ್ಲಿನ ಜನರು ವೀಕ್ಷಿಸಿದ್ದಾರೆ. ಇದರಿಂದ ತೀವ್ರವಾಗಿ ನೊಂದಿದ್ದ ಮಹಿಳೆಯು ಠಾಣೆಗೆ ಆಗಮಿಸಿ ದೂರು ನೀಡಿದ್ದು, ಸಂತ್ರಸ್ತ ಮಹಿಳೆಯು ಹೆಸರಿಸಿದ ಎಲ್ಲಾ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ, ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles