ದಾವಣಗೆರೆ: ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಆಯೋಜಿಸಿದ್ದ ಜ್ಯೋತಿಷ್ಯ ಕೋರ್ಸ್‌ಗಳ ಫಲಿತಾಂಶ ಪ್ರಕಟವಾಗಿದ್ದು, ದಾವಣಗೆರೆಯ ಶ್ರೀ ಭಾಸ್ಕರಾಚಾರ್ಯ ಜ್ಯೋತಿರ್ವಿದ್ಯಾ ಪ್ರತಿಷ್ಠಾನಕ್ಕೆ ಶೇ. 100 ರಷ್ಟು ಅತ್ಯುತ್ತಮ ಫಲಿತಾಂಶ ಲಭ್ಯವಾಗಿದೆ. ಸಂಸ್ಥೆಯ ವಿದ್ಯಾರ್ಥಿನಿ ಡಿ.ಅರ್. ಶಾರದಾ ಶೇ. 94.40 ರಷ್ಟು ಅಂಕಗಳನ್ನು ಪಡೆಯುವ ಮೂಲಕ ಜ್ಯೋತಿಷ ಅಡ್ವಾನ್ಸ್ ಡಿಪ್ಲೊಮಾದಲ್ಲಿ ರಾಜ್ಯಮಟ್ಟಕ್ಕೆ ಪ್ರಥಮ ರ‍್ಯಾಂಕ್ ಗಳಿಸಿ ಸಾಧನೆ ಮಾಡಿದ್ದಾರೆ.
ಅದೇ ರೀತಿ ಸುಹಾಸ್ ಎಸ್. ಶೇ. 92.40 ರಷ್ಟು ಅಂಕಗಳೊಂದಿಗೆ ದ್ವಿತೀಯ ರ‍್ಯಾಂಕ್ ಹಾಗೂ ಅಂಬಿಕಾ ಎಸ್. ಜೈನ್ ಶೇ. 92 ರಷ್ಟು ಅಂಕಗಳೊಂದಿಗೆ ತೃತೀಯ ರ‍್ಯಾಂಕ್ ಪಡೆದಿದ್ದಾರೆ. ಜ್ಯೋತಿಷ್ಯ ಡಿಪ್ಲೊಮಾದಲ್ಲಿ ವಿಶ್ವೇಶ್ವರಯ್ಯ ಹುಚ್ಚಯ್ಯನವರಮಠ ಶೇ. 83.80 ರಷ್ಟು ಅಂಕಗಳೊಂದಿಗೆ 7ನೇ ರ‍್ಯಾಂಕ್ ಗಳಿಸಿದರೆ, ಡಿಪ್ಲೊಮಾ ವಾಸ್ತು ವಿಭಾಗದಲ್ಲಿ ಚನ್ನೇಶ್ ಮಠದ ಶೇ. 84 ರಷ್ಟು ಅಂಕಗಳೊಂದಿಗೆ 4ನೇ ರ‍್ಯಾಂಕ್ ಹಾಗೂ ಮೋಹನಕುಮಾರ್ ಟಿಡಿ ಶೇ. 83.60 ರಷ್ಟು ಅಂಕಗಳೊಂದಿಗೆ 5ನೇ ರ‍್ಯಾಂಕ್ ಗಳಿಸಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
ಪರೀಕ್ಷೆ ಬರೆದಿದ್ದ ಒಟ್ಟು 39 ವಿದ್ಯಾರ್ಥಿಗಳಲ್ಲಿ 31 ಮಂದಿ ಅತ್ಯುನ್ನತ ಶ್ರೇಣಿಯಲ್ಲಿ (ಡಿಸ್ಟಿಂಕ್ಷನ್) ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳ ಈ ಮಹತ್ತರ ಸಾಧನೆಗೆ ಕರ್ನಾಟಕ ರಾಜ್ಯ ಜ್ಯೋತಿಷಿಗಳು ಹಾಗೂ ಜ್ಯೋತಿಷ್ಯ ಬೋಧನಾ ಸಂಸ್ಥೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗಜೇಂದ್ರ ಹರ್ಷ ವ್ಯಕ್ತಪಡಿಸಿದ್ದು, ವೈದ್ಯಕೀಯ ಜ್ಯೋತಿಷ್ಯ ಹಾಗೂ ವಾಸ್ತುಶಾಸ್ತ್ರದ ಮೂಲಕ ಜ್ಯೋತಿಷ್ಯವೂ ಒಂದು ವಿಜ್ಞಾನ ಎಂಬುದನ್ನು ಸಾಬೀತುಪಡಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಈ ವಿದ್ಯೆಯನ್ನು ಕಲಿಯಲು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಅವರು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಎಂ. ಗದಿಗೆಪ್ಪಯ್ಯ ಹಾಗೂ ಕಾರ್ಯದರ್ಶಿ ಸಿ.ಕೆ. ಆನಂದತೀರ್ಥಾಚಾರ್ ಸಂತಸ ವ್ಯಕ್ತಪಡಿಸಿದ್ದಾರೆ.
ಹೊಸ ಕೋರ್ಸ್‌ಗಳ ಪ್ರವೇಶಾತಿ ಆರಂಭ:
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವತಿಯಿಂದ ಜ್ಯೋತಿಷ, ಹಸ್ತಮುದ್ರಿಕಾ ಹಾಗೂ ವಾಸ್ತು ಕೋರ್ಸ್‌ಗಳ ಮುಂದಿನ ತರಗತಿಗಳಿಗೆ ಪ್ರವೇಶಾತಿ ಪ್ರಾರಂಭವಾಗಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಮೂರು ತಿಂಗಳ ಅಲ್ಪಾವಧಿ ಕೋರ್ಸ್‌ಗಳಲ್ಲಿ ಸಂಕ್ಷಿಪ್ತ ಪಂಚಾಂಗ ಪರಿಚಯ, ನವಗ್ರಹ ಪರಿಚಯ ಹಾಗೂ ವಾಸ್ತು ವಿಜ್ಞಾನ ಪರಿಚಯ ವಿಷಯಗಳ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಬೋಧಿಸಲಾಗುತ್ತದೆ.
18 ವರ್ಷ ಮೇಲ್ಪಟ್ಟ, ಕಲಿಕೆಯಲ್ಲಿ ಆಸಕ್ತಿ ಇರುವ ಯಾರಾದರೂ ಅರ್ಜಿ ಸಲ್ಲಿಸಬಹುದಾಗಿದೆ. ಸರ್ಟಿಫಿಕೇಟ್ ಕೋರ್ಸ್‌ಗಳಿಗೆ ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹಾಗೂ ಡಿಪ್ಲೊಮಾ ಕೋರ್ಸ್‌ಗಳಿಗೆ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ಮೊ: 9964062223 ಅನ್ನು ಸಂಪರ್ಕಿಸಬಹುದೆಂದು ಸಂಸ್ಥೆಯ ಪ್ರಾಂಶುಪಾಲ ಆರ್. ಬಿ. ಪ್ರವೀಣಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Bhaskaracharya Jyotirvidya Pratishthana
- Davanagere astrology rank holders
- DR Sharada state first rank
- Jyotishya course results
- Karnataka Sanskrit University
- Vastu diploma admissions
- ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ
- ಜ್ಯೋತಿಷ್ಯ ಕೋರ್ಸ್ ಫಲಿತಾಂಶ
- ಡಿ ಆರ್ ಶಾರದಾ ಪ್ರಥಮ ರ‍್ಯಾಂಕ್
- ದಾವಣಗೆರೆ ಜ್ಯೋತಿಷ್ಯ ರ‍್ಯಾಂಕ್
- ಭಾಸ್ಕರಾಚಾರ್ಯ ಜ್ಯೋತಿರ್ವಿದ್ಯಾ ಪ್ರತಿಷ್ಠಾನ
- ವಾಸ್ತು ಡಿಪ್ಲೊಮಾ ಪ್ರವೇಶಾತಿ





Leave a comment