ದಾವಣಗೆರೆ: ದಾವಣಗೆರೆ ಜಿಲ್ಲೆಯ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ, ಡಾ|| ಬಿ.ಆರ್. ಅಂಬೇಡ್ಕರ್, ಶ್ರೀಮತಿ ಇಂದಿರಾಗಾಂಧಿ, ಸಂತ ಸೇವಾಲಾಲ್ ವಸತಿ ಶಾಲೆಗಳು ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಬಾಲಕಿಯರ ವಸತಿ ಶಾಲೆಗಳಲ್ಲಿ 2026-27ನೇ ಸಾಲಿಗೆ ಖಾಲಿ ಇರುವ ಮತ್ತು ಲಭ್ಯವಾಗಬಹುದಾದ 7, 8 ಮತ್ತು 9ನೇ ತರಗತಿಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಸಂಬಂಧಪಟ್ಟ ವಸತಿ ಶಾಲೆಗಳಲ್ಲಿಯೇ ಅರ್ಜಿಗಳನ್ನು ಉಚಿತವಾಗಿ ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ಅಲ್ಲಿಯೇ ಸಲ್ಲಿಸಬಹುದಾಗಿದೆ. ಅರ್ಜಿಗಳನ್ನು ಜೂನ್ 08 ರಿಂದ 16 ರವರೆಗೆ ಪಡೆಯಬಹುದಾಗಿದೆ. ಅರ್ಜಿ ಸಲ್ಲಿಸಲು ಜೂನ್ 16, 2026 ಕೊನೆಯ ದಿನಾಂಕವಾಗಿರುತ್ತದೆ.
ಪ್ರವೇಶ ಪರೀಕ್ಷೆ ವಿವರ:
ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಜೂನ್ 21, 2026 (ಭಾನುವಾರ) ರಂದು ಬೆಳಿಗ್ಗೆ 11:00 ಗಂಟೆಯಿಂದ ಮಧ್ಯಾಹ್ನ 01:00 ಗಂಟೆಯವರೆಗೆ ಹರಿಹರ ತಾಲ್ಲೂಕಿನ ದೇವರಬೆಳಕೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪ್ರವೇಶ ಪರೀಕ್ಷೆಯನ್ನು ಏರ್ಪಡಿಸಲಾಗಿದೆ.
ಹೆಚ್ಚಿನ ವಿವರ ಹಾಗೂ ಮಾಹಿತಿಗಾಗಿ ಸಾರ್ವಜನಿಕರು ಮತ್ತು ವಿದ್ಯಾರ್ಥಿ ಪೋಷಕರು ಜಿಲ್ಲೆಯ ಸಂಬಂಧಪಟ್ಟ ವಸತಿ ಶಾಲೆಗಳನ್ನು ಅಥವಾ ದಾವಣಗೆರೆಯ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.
- 7ನೇ ತರಗತಿ ಪ್ರವೇಶ
- 8ನೇ ತರಗತಿ ಪ್ರವೇಶ
- 9ನೇ ತರಗತಿ ಪ್ರವೇಶಾತಿ ಅರ್ಜಿ
- class 7 admission residential school
- class 8 vacant seats admission
- class 9 admission application form
- DAVANAGERE NEWS
- Davanagere residential school admission 2026
- Davanagere social welfare department
- Devarabelakere Morarji Desai school
- free application residential school Karnataka
- Karnataka residential schools admission 2026-27
- Kittur Rani Channamma school applications
- Morarji Desai school admission 2026
- residential school entrance exam date
- ಉಚಿತ ಅರ್ಜಿ ವಸತಿ ಶಾಲೆ
- ಕರ್ನಾಟಕ ವಸತಿ ಶಾಲೆಗಳ ಪ್ರವೇಶ 2026-27
- ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಅರ್ಜಿ
- ದಾವಣಗೆರೆ
- ದಾವಣಗೆರೆ ಜಿಲ್ಲಾ ಸುದ್ದಿ
- ದಾವಣಗೆರೆ ವಸತಿ ಶಾಲೆಗಳ ಪ್ರವೇಶ 2026
- ದೇವರಬೆಳಕೆರೆ ಮೊರಾರ್ಜಿ ಶಾಲೆ
- ಮೊರಾರ್ಜಿ ದೇಸಾಯಿ ಶಾಲೆ ಪ್ರವೇಶಾತಿ
- ವಸತಿ ಶಾಲೆಗಳ ಪ್ರವೇಶ ಪರೀಕ್ಷೆ 2026
- ಸಮಾಜ ಕಲ್ಯಾಣ ಇಲಾಖೆ ದಾವಣಗೆರೆ





Leave a comment