ದಾವಣಗೆರೆ: ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಸಮುದಾಯದವರ ಆರ್ಥಿಕ ಮತ್ತು ಸಾಮಾಜಿಕ ಸುಧಾರಣೆಗಾಗಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಅಲೆಮಾರಿ ಅಭಿವೃದ್ಧಿ ನಿಗಮದ ವತಿಯಿಂದ ವಿಶೇಷ ವಸತಿ ಯೋಜನೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಪ್ರಸ್ತುತ ಸ್ವಂತ ನಿವೇಶನ (ಜಾಗ) ಹೊಂದಿದ್ದು, ಟೆಂಟ್ ಅಥವಾ ಗುಡಿಸಲುಗಳಲ್ಲಿ ವಾಸಿಸುತ್ತಿರುವ ವಸತಿ ರಹಿತ ಅಲೆಮಾರಿ ಕುಟುಂಬಗಳಿಗೆ ಈ ಯೋಜನೆಯಡಿ ಉಚಿತ ಮನೆಗಳನ್ನು ನಿರ್ಮಿಸಿಕೊಡಲಾಗುತ್ತದೆ. ದಾವಣಗೆರೆ ಜಿಲ್ಲೆಗೆ ಒಟ್ಟು 200 ಮನೆಗಳನ್ನು ನಿಗದಿಪಡಿಸಲಾಗಿದ್ದು, ಪರಿಶಿಷ್ಟ ಜಾತಿ (SC) ಸಮುದಾಯಕ್ಕೆ 150 ಹಾಗೂ ಪರಿಶಿಷ್ಟ ಪಂಗಡದ (ST) ಸಮುದಾಯಕ್ಕೆ 50 ಮನೆಗಳನ್ನು ಹಂಚಿಕೆ ಮಾಡಲಾಗಿದೆ.
ಅಗತ್ಯವಿರುವ ದಾಖಲೆಗಳು:
ನಿವೇಶನದ ಹಕ್ಕು ಪತ್ರ
2 ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳು
RD ಸಂಖ್ಯೆ ಇರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ
ಪಡಿತರ ಚೀಟಿ (Ration Card)
ಮತದಾರರ ಗುರುತಿನ ಚೀಟಿ (Voter ID)
ಬ್ಯಾಂಕ್ ಪಾಸ್ ಬುಕ್ ನಕಲು
ಅರ್ಹ ಫಲಾನುಭವಿಗಳು ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಜೂನ್ 12ರ ಸಂಜೆ 5:30 ರೊಳಗಾಗಿ “ಉಪ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ 37, ಮೊದಲನೇ ಮಹಡಿ, ಬಿ ಬ್ಲಾಕ್, ಪಿ.ಬಿ.ರಸ್ತೆ, ದಾವಣಗೆರೆ” ಇಲ್ಲಿಗೆ ಖುದ್ದಾಗಿ ಸಲ್ಲಿಸಬೇಕು ಎಂದು ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Davanagere Housing Loan
- DAVANAGERE NEWS
- Free House Application
- Karnataka Government Schemes 2026.
- Nomadic Community Housing Scheme
- Nomadic Tribe Development Corporation
- SC ST Housing Scheme
- Social Welfare Department
- ಅರ್ಜಿ ಆಹ್ವಾನ
- ಅಲೆಮಾರಿ ಅಭಿವೃದ್ಧಿ ನಿಗಮ
- ಉಚಿತ ವಸತಿ ಯೋಜನೆ
- ದಾವಣಗೆರೆ
- ದಾವಣಗೆರೆ ವಸತಿ ಯೋಜನೆ
- ದಾವಣಗೆರೆ ಸುದ್ದಿ
- ಪರಿಶಿಷ್ಟ ಜಾತಿ
- ಪರಿಶಿಷ್ಟ ಪಂಗಡ
- ಸಮಾಜ ಕಲ್ಯಾಣ ಇಲಾಖೆ
- ಸರಕಾರಿ ಯೋಜನೆಗಳು 2026





Leave a comment