13 ವರ್ಷದ ವೈಭವ್ ಸೂರ್ಯವಂಶಿ IPL ಮೆಗಾ ಅಕ್ಷನ್ 2ನೇ ದಿನ 1.10ಕೋಟಿ ರೂ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸೇರಿಕೊಳ್ಳುವ ಮೂಲಕ ಅತೀ ಕಿರಿಯ ವಯಸ್ಸಿಗೆ ಭಿಕರಿಯಾದ ಆಟಗಾರ ಎಂಬ ಹೆಗ್ಗಳಿಕೆಗೆ ವೈಭವ್ ಸೂರ್ಯವಂಶಿ ಪಾತ್ರರಾಗಿದ್ದಾರೆ.
ರಾಜಸ್ಥಾನ ರಾಯಲ್ಸ್ ಬಿಹಾರದ ಕಿರಿಯ ಆಟಗಾರನನ್ನು 1.10ಕೋಟಿ ರೂ ನೀಡಿ ತನ್ನ ತೆಕ್ಕೆಗೆ ಹಾಕಿಕೊಂಡಿತು, 30ಲಕ್ಷ ಮೂಲ ಬೆಲೆಯನ್ನು ಹೊಂದಿದ ಆಟಗಾರನ್ನು ಖರೀದಿಸಲು ಡೆಲ್ಲಿ ಕ್ಯಾಪಿಟಲ್ಸ್ ಕೂಡ ಪ್ರಯತ್ನಿಸಿದರು, ಕೊನೆಗೆ ರಾಜಸ್ಥಾನ್ ರಾಯಲ್ಸ್ ಇದರಲ್ಲಿ ಯಶಸ್ವಿಯಾಯಿತು.
ತನ್ನ 5ನೇ ಇಳಿ ವಯಸ್ಸಿನಲ್ಲೆ ಕ್ರಿಕೆಟ್ ಆರಂಭಿಸಿದ ಈ ಪೋರ , ತನ್ನ 12ನೇ ವಯಸ್ಸಿಗೆ ಪ್ರಥಮ ದರ್ಜೆಯ ಪಂದ್ಯವಾಡಿದರು, ಈಗಾಗಲೇ ರಣಜಿ ಟ್ರೋಫಿ, ವಿನೂ ಮಂಕಡ್ ಟ್ರೋಫಿ, ಹೀಗೆ ಹಲವು ಟೂರ್ನಿಗಳನ್ನು ಸಹ ಆಡಿದ್ದಾರೆ. 13 ವರ್ಷ ಆಗುವಷ್ಟರಲ್ಲೇ ಭಾರತ ಅಂಡರ್ -19 ತಂಡದಲ್ಲೂ ಇವರು ಕಾಣಿಸಿಕೊಂಡಿದ್ದಾರೆ.
2023ರಲ್ಲಿ ರಣಜಿ ಕ್ರಿಕೆಟ್ ಗೆ ಪಾದರ್ಪಣೆ ಮಾಡಿದ್ದ ವೈಭವ್, ನಂತರ ಬಿಹಾರ ಕ್ರಕೆಟ್ ಸಂಸ್ಥೆ ಆಯೋಜಿಸಿದ್ದ ರಣಧೀರ್ ವರ್ಮಾ ಅಂಡರ್-19 ಏಕದಿನ ಟೂರ್ನಿಯಲ್ಲಿ ಕಣಕ್ಕಿಳಿದ ಮೊದಲ ಪಂದ್ಯದಲ್ಲಿ ತ್ರಿಶತಕ ಸಿಡಿಸುವ ಮೂಲಕ, ಈ ಸಾಧನೆ ಮಾಡಿದ ಮೊದಲ ಭಾರತೀಯ ಎನಿಸಿಕೊಂಡಿದ್ದಾರೆ. ಕಳೆದ ತಿಂಗಳು ಅಂಡರ್-19 ತಂಡದ ಆಸ್ಟ್ರೇಲಿಯಾ ವಿರುದ್ದ 64 ಎಸೆತಗಳಲ್ಲಿ 104 ಸಿಡಿಸಿ ಅಬ್ಬರಿಸಿದ್ದರು, ಅಂಡರ್ -19 ಟೆಸ್ಟ್ ಪಂದ್ಯದಲ್ಲಿ ಅತೀ ವೇಗವಾಗಿ ಶತಕ ಬಾರಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೂ ಇವರು ಭಾಜನಾರಾಗಿದ್ದಾರೆ.