ದಾವಣಗೆರೆ ಎಪಿಎಂಸಿ ಇತಿಹಾಸದಲ್ಲೇ ಪ್ರಥಮ ಬಾರಿಗೆ ಭತ್ತ ಖರೀದಿ ಟೆಂಡರ್ ಇಂದು ಪ್ರಾರಂಭವಾಯಿತು.
ಇಂದು ಇ-ಟೆಂಡರ್ ಖರೀದಿಯಲ್ಲಿ ದರ ಹೆಚ್ಚಳವಾಗಿದ್ದು, ಶ್ರೀ ದಾನಮ್ಮದೇವಿ ಟ್ರೇಡರ್ಸ್ ದಲಾಲಿ ಮಂಡಿಯಲ್ಲಿ ಮಾಕನೂರು ಮುನಿಯಪ್ಪ ಅಂಡ್ ಸನ್ಸ್ ಎಂಬ ಖರೀದಿದಾರರು ಆರ್.ಎನ್.ಆರ್ ತಳಿಯ ಭತ್ತಕ್ಕೆ ಕ್ವಿಂಟಾಲ್ ಒಂದಕ್ಕೆ ₹2510.00 ದರ ನಮೂದು ಮಾಡಿದ್ದಾರೆ.
ಇದು ಇತ್ತೀಚಿನ ದಿನಗಳಲ್ಲಿ ಭತ್ತಕ್ಕೆ ಸಿಕ್ಕ ಅತಿ ಹೆಚ್ಚು ದರವಾಗಿದೆ. ಮೊನ್ನೆ ಶನಿವಾರ ₹2400 ಹಾಸು ಪಾಸಿನಲ್ಲಿ ಧಾರಣೆ ನಡೆದಿತ್ತು. ಅರವಿಂದ್ ಅಂಡ್ ಕೋ ದಲಾಲಿ ಮಂಡಿಯಲ್ಲಿ ಶ್ರೀ ಉತ್ಸವಾಂಬ ರೈಸ್ ಮಿಲ್ ನವರು ₹2500.00 ದರ ನಮೂದು ಮಾಡಿದ್ದು, ಇದು 2ನೇ ಅತಿ ಹೆಚ್ಚು ದರವಾಗಿದೆ. ಇದರಿಂದ ಭತ್ತದ ದರ ಕುಸಿತದಿಂದಾಗಿ ಕಂಗಾಲಾಗಿದ್ದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಇಂದು ದಾವಣಗೆರೆ ಎಪಿಎಂಸಿಗೆ 9342 ಕ್ವಿಂಟಲ್ ಭತ್ತ ಅವಕವಾಗಿದೆ. ಇದರಲ್ಲಿ 8054 ಕ್ವಿಂಟಲ್ ಖರೀದಿ ಆಗಿದೆ.
ಇಂದು ಮಾರುಕಟ್ಟೆಗೆ 8234 ಕ್ವಿಂಟಲ್ ಮೆಕ್ಕೆಜೋಳ ಅವಕವಾಗಿದೆ. ಇದರಲ್ಲಿ 8130 ಕ್ವಿಂಟಲ್ ಮಾರಾಟವಾಗಿದೆ. ₹2341.00 ಅತಿ ಹೆಚ್ಚು ದರವಾಗಿದೆ.