Home ಕ್ರೈಂ ನ್ಯೂಸ್ ಪುಲ್ವಾಮಾ ದಾಳಿ ಮಾಸ್ಟರ್‌ಮೈಂಡ್ ಕೈಯಲ್ಲಿ ಎಕೆ-47: ಶಾಲಾ ಪ್ರಾಂಶುಪಾಲನೆಂಬ ಪಾಕಿಸ್ತಾನದ ISI ಸುಳ್ಳು ಬಯಲು!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಪುಲ್ವಾಮಾ ದಾಳಿ ಮಾಸ್ಟರ್‌ಮೈಂಡ್ ಕೈಯಲ್ಲಿ ಎಕೆ-47: ಶಾಲಾ ಪ್ರಾಂಶುಪಾಲನೆಂಬ ಪಾಕಿಸ್ತಾನದ ISI ಸುಳ್ಳು ಬಯಲು!

Share
ಪುಲ್ವಾಮಾ
Share

ನವದೆಹಲಿ: 2019ರ ಪುಲ್ವಾಮಾ ಭಯೋತ್ಪಾದನಾ ದಾಳಿಯ ಪ್ರಮುಖ ಸಂಚುಗಾರರಲ್ಲಿ ಒಬ್ಬನಾಗಿದ್ದ ಉಗ್ರ ಹಮ್ಜಾ ಬುರ್ಹಾನ್ (ಅರ್ಜುಮಂಡ್ ಗುಲ್ಜಾರ್ ದಾರ್) ಅಲಿಯಾಸ್ ‘ಡಾಕ್ಟರ್’, ಮೇ ೨೧ ರಂದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (PoK) ಅಪರಿಚಿತ ಬಂದೂಕುಧಾರಿಗಳಿಂದ ಹತನಾಗಿದ್ದ ಬೆನ್ನಲ್ಲೇ ಆತನ ಹೊಸ ವಿಡಿಯೋವೊಂದು ಮುನ್ನೆಲೆಗೆ ಬಂದಿದೆ. ವಿಡಿಯೋದಲ್ಲಿ ಆತ ಎಕೆ-47 ರೈಫಲ್ ಹಿಡಿದಿರುವುದು ಪತ್ತೆಯಾಗಿದ್ದು, ಆತನಿಗೆ ಆಶ್ರಯ ನೀಡಿದ್ದ ಪಾಕಿಸ್ತಾನದ ಗುಪ್ತಚರ ಸಂಸ್ಥೆ ISI ನ ನಾಟಕ ಜಗಜ್ಜಾಹೀರಾಗಿದೆ.

ಪ್ರಾಂಶುಪಾಲನ ಮುಖವಾಡ:

ಗುಪ್ತಚರ ಇಲಾಖೆಯ ಮೂಲಗಳ ಪ್ರಕಾರ, ಜಾಗತಿಕ ಮಟ್ಟದಲ್ಲಿ ಬೇಕಾಗಿದ್ದ ಈ ಉಗ್ರನನ್ನು ರಕ್ಷಿಸಲು ಐಎಸ್‌ಐ (ISI) ಆತನಿಗೆ ಮುಜಾಫರಾಬಾದ್‌ನ ಖಾಸಗಿ ಕಾಲೇಜೊಂದರಲ್ಲಿ ಶಾಲಾ ಪ್ರಾಂಶುಪಾಲ (School Principal) ಮತ್ತು ಶಿಕ್ಷಕನ ಹುದ್ದೆ ನೀಡಿ ಭೂಗತನಾಗಿ ಇರಿಸಿತ್ತು. ಈ ಹುದ್ದೆಯನ್ನು ಬಳಸಿಕೊಂಡು ಆತ ಸ್ಥಳೀಯ ಮಕ್ಕಳಲ್ಲಿ ಭಾರತದ ವಿರುದ್ಧ ಪ್ರಚಾರ (Propaganda) ಮಾಡಲು ಬಳಸಿಕೊಳ್ಳುತ್ತಿದ್ದ ಎನ್ನಲಾಗಿದೆ. ಆದರೆ, ಅಪರಿಚಿತ ದಾಳಿಕೋರರ ಭಯದಿಂದಾಗಿ ಆತ ಸದಾ ಎಕೆ-47 ಆಟೋಮ್ಯಾಟಿಕ್ ರೈಫಲ್ ಹಿಡಿದುಕೊಂಡೇ ಓಡಾಡುತ್ತಿದ್ದ ಎಂಬುದು ಇತ್ತೀಚಿನ ವಿಡಿಯೋದಿಂದ ಸಾಬೀತಾಗಿದೆ.

ಅಂತಿಮ ಸಂಸ್ಕಾರದಲ್ಲಿ ಉಗ್ರರ ದಂಡು:

ಮೇ 22 ರಂದು ನಡೆದ ಬುರ್ಹಾನ್ ಅಂತಿಮ ಸಂಸ್ಕಾರದ ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪಾಕಿಸ್ತಾನ ಉಗ್ರರ ಸುರಕ್ಷಿತ ತಾಣ ಎಂಬುದಕ್ಕೆ ಮತ್ತಷ್ಟು ಪುಷ್ಟಿ ನೀಡಿವೆ. ಈ ಕಾರ್ಯಕ್ರಮದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸೈಯದ್ ಸಲಾಹುದ್ದೀನ್ ಮತ್ತು ಅಲ್-ಬದ್ರ್ ಕಮಾಂಡರ್ ಬಖ್ತ್ ಜಮೀನ್ ಖಾನ್ ಸೇರಿದಂತೆ ಪಾಕಿಸ್ತಾನ ಮೂಲದ ಹಲವು ಮೋಸ್ಟ್ ವಾಂಟೆಡ್ ಉಗ್ರರು ಒಂದೇ ಸೂರಿನಡಿ ಜಮಾಯಿಸಿದ್ದರು. ಭಾರೀ ಶಸ್ತ್ರಸಜ್ಜಿತ ಉಗ್ರರ ಕಾವಲಿನಲ್ಲಿ ಈ ಅಂತ್ಯಕ್ರಿಯೆ ನಡೆದಿದ್ದು, ಪಾಕ್ ಐಎಸ್‌ಐ ಅಧಿಕಾರಿಗಳು ಸಹ ಇದರಲ್ಲಿ ಭಾಗಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ.

ಯಾರೀ ಹಮ್ಜಾ ಬುರ್ಹಾನ್?: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ರತ್ನಿಪೋರ ನಿವಾಸಿಯಾಗಿದ್ದ ಈತ, ಬಳಿಕ ಪಾಕಿಸ್ತಾನಕ್ಕೆ ಪಲಾಯನ ಮಾಡಿ ‘ಅಲ್-ಬದ್ರ್’ ಉಗ್ರಗಾಮಿ ಸಂಘಟನೆ ಸೇರಿದ್ದ. 40 ಕ್ಕೂ ಹೆಚ್ಚು ಸಿಆರ್‌ಪಿಎಫ್ (CRPF) ಜವಾನರ ಬಲಿಪಡೆದ ೨೦೧೯ ರ ಪುಲ್ವಾಮಾ ಆತ್ಮಹತ್ಯಾ ಬಾಂಬ್ ದಾಳಿಗೆ ಸ್ಫೋಟಕ ಮತ್ತು ಸಾಗಣೆ ನೆರವು ನೀಡಿದ ಆರೋಪ ಈತನ ಮೇಲಿತ್ತು. ಈತನ ದೇಶವಿರೋಧಿ ಕೃತ್ಯಗಳನ್ನು ಪರಿಗಣಿಸಿ ಭಾರತದ ಗೃಹ ಸಚಿವಾಲಯವು ೨೦೨೨ ರಲ್ಲಿ ಈತನನ್ನು ‘ಘೋಷಿತ ಉಗ್ರ’ ಎಂದು ಅಧಿಕೃತವಾಗಿ ಘೋಷಿಸಿತ್ತು.

Share

Leave a comment

Leave a Reply

Your email address will not be published. Required fields are marked *

Related Articles