Home ಉದ್ಯೋಗ ವಾರ್ತೆ ದಾವಣಗೆರೆ ಅಂಚೆ ವಿಭಾಗದಲ್ಲಿ ಜೀವ ವಿಮೆ ಪ್ರತಿನಿಧಿ ಹಾಗೂ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಜೂನ್ 3 ರಂದು ನೇರ ಸಂದರ್ಶನ
ಉದ್ಯೋಗ ವಾರ್ತೆದಾವಣಗೆರೆಬೆಂಗಳೂರು

ದಾವಣಗೆರೆ ಅಂಚೆ ವಿಭಾಗದಲ್ಲಿ ಜೀವ ವಿಮೆ ಪ್ರತಿನಿಧಿ ಹಾಗೂ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಜೂನ್ 3 ರಂದು ನೇರ ಸಂದರ್ಶನ

Share
ದಾವಣಗೆರೆ
Share

ದಾವಣಗೆರೆ: ಭಾರತೀಯ ಅಂಚೆ ಇಲಾಖೆಯ ದಾವಣಗೆರೆ ಅಂಚೆ ವಿಭಾಗದ ವ್ಯಾಪ್ತಿಯಲ್ಲಿ ಅಂಚೆ ಜೀವ ವಿಮೆ (PLI) ಹಾಗೂ ಗ್ರಾಮೀಣ ಅಂಚೆ ಜೀವ ವಿಮೆಯ (RPLI) ನೇರ ವಿಮಾ ಪ್ರತಿನಿಧಿಗಳು (ಏಜೆಂಟರುಗಳು) ಮತ್ತು ಫೀಲ್ಡ್ ಆಫೀಸರ್ ಗಳಾಗಿ ಕಾರ್ಯ ನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಸಂದರ್ಶನದ ವಿವರಗಳು: ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ತಮ್ಮ ಸಂಪೂರ್ಣ ವಿವರ (Bio-data), ಅಗತ್ಯ ಮೂಲ ದಾಖಲೆಗಳು ಮತ್ತು ಅವುಗಳ ನಕಲು ಪ್ರತಿಯೊಂದಿಗೆ ಜೂನ್‌ 3 ರಂದು ಬೆಳಿಗ್ಗೆ 11 ಗಂಟೆಗೆ “ಅಂಚೆ ಅಧೀಕ್ಷಕರು, ದಾವಣಗೆರೆ ಅಂಚೆ ವಿಭಾಗ, ಗಡಿಯಾರ ಕಂಬದ ಹತ್ತಿರ, ಪ್ರಧಾನ ಅಂಚೆ ಕಛೇರಿ, ದಾವಣಗೆರೆ – 577001” ಇಲ್ಲಿ ನಡೆಯುವ ನೇರ ಸಂದರ್ಶನಕ್ಕೆ ಹಾಜರಾಗಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಹೆಚ್ಚಿನ ವಿವರಗಳಿಗಾಗಿ ದಾವಣಗೆರೆ ಅಂಚೆ ವಿಭಾಗದ ಅಂಚೆ ಜೀವ ವಿಮೆ ಅಭಿವೃದ್ಧಿ ಅಧಿಕಾರಿ ಮಹೇಶ್ ಎಸ್. (ಮೊಬೈಲ್ ಸಂಖ್ಯೆ: 9986038721) ಇವರನ್ನು ಸಂಪರ್ಕಿಸಬಹುದಾಗಿದೆ ಅಥವಾ ಇಮೇಲ್ ವಿಳಾಸ: dodavangere.ka@indiapost.gov.in ಮೂಲಕ ಮಾಹಿತಿ ಪಡೆಯಬಹುದು ಎಂದು ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *