ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ತಜ್ಞ ವೈದ್ಯರ ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳ ತಾತ್ಕಾಲಿಕ ಹುದ್ದೆಗೆ ನೇರ ಸಂದರ್ಶನ

On: November 14, 2024 6:01 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:14-11-2024

ಶಿವಮೊಗ್ಗ: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಅಧೀನದಲ್ಲಿ ಬರುವ ವಿವಿಧ ಕಾರ್ಯಕ್ರಮದಡಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಆಸಕ್ತರಿಂದ ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನಿಸಿದೆ.

ಎನ್.ಪಿ.ಹೆಚ್.ಸಿ.ಇ. ಕಾರ್ಯಕ್ರಮದಡಿ ತಜ್ಞ ವೈದರ (ಎಂ.ಡಿ. ಇಂಟರ್ನಲ್ ಮೆಡಿಸಿನ್/ಜನರಲ್ ಮೆಡಿಸಿನ್) ಒಂದು ಹುದ್ದೆಗೆ ಎಂ.ಬಿ.ಬಿ.ಎಸ್., ಎಂ.ಡಿ. ಮಾಡಿರುವ ಸ್ಪೆಷಲಿಸ್ಟ್ ಹುದ್ದೆಯಲ್ಲಿ 2 ವರ್ಷಗಳ ಅನುಭವವಿರುವವರಿಗೆ ಆದ್ಯತೆ ನೀಡಲಾಗುವುದು.

ಸಿ.ಪಿ.ಹೆಚ್-ಯು.ಹೆಚ್.ಸಿ. ಕಾರ್ಯಕ್ರಮದಡಿ ಜಿಲ್ಲಾ ಆರೋಗ್ಯ ಮತ್ತು ಕ್ಷೇಮಕೇಂದ್ರ ಸಂಯೋಜಕರ ಒಂದು ಹುದ್ದೆಗೆ ಬಿ.ಡಿ.ಎಸ್./ಬಿ.ಎ.ಎಂ.ಎಸ್/ ಬಿ.ಯು.ಎಂ.ಎಸ್./ ಬಿ.ಹೆಚ್.ಎಂ.ಎಸ್./ಬಿ.ವೈ.ಎನ್.ಎಸ್./ಎಂ.ಎಸ್.ಸಿ.
ನರ್ಸಿಂಗ್/ಎಂ.ಎಸ್.ಸಿ. ಲೈಫ್ ಸೈನ್ಸ್/ಬಿ.ಎಸ್.ಸಿ. ನರ್ಸಿಂಗ್ ಎಲ್ಲಾ ಪದವಿಯೊಂದಿಗೆ ಎಂ.ಪಿ.ಹೆಚ್ ಅಥವಾ ಎಂ.ಬಿ.ಎ ಕಡ್ಡಾಯವಾಗಿ ಪೂರ್ಣಗೊಂಡಿರುವವರಿಗೆ ಆದ್ಯತೆ ನೀಡಲಾಗುವುದು.

ಐ.ಡಿ.ಎಸ್.ಪಿ ಕಾರ್ಯಕ್ರಮದಡಿಯಲ್ಲಿ ಜಿಲ್ಲಾ ಎಪಿಡೆಮಿಯಾಲಜಿಸ್ಟ್ 1 ಹುದ್ದೆಗೆ ಮೆಡಿಕಲ್ ಗ್ರಾಜುಯೇಟ್ಸ್, ಎಂ.ಬಿ.ಬಿ.ಎಸ್. ಜೊತೆಗೆ ಪೋಸ್ಟ್ ಗ್ರಾಜುಯೇಟ್ ಪದವಿ/ ಡಿಪ್ಲೊಮಾ ಇನ್ ಪ್ರೆವೆಂಟಿವ್ ಆಂಡ್ ಸೋಶೀಯಲ್ ಮೆಡಿಸಿನ/ ಪಬ್ಲಿಕ್ ಹೆಲ್ತ್ ಅಥವಾ ಎಪಿಡೆಮಿಯಾಲಿಜಿ ಅಥವಾ ಯಾವುದೇ ಮೆಡಿಕಲ್ ಗ್ರಾಜುಯೇಟ್ (ಎಂ.ಬಿ.ಬಿ.ಎಸ್ ಹೊರತುಪಡಿಸಿ) ಜೊತೆಗೆ ಎಂಪಿಹೆಚ್ ಜೊತೆಗೆ ಪಬ್ಲಿಕ್ ಹೆಲ್ತ್ನಲ್ಲಿ ಕನಿಷ್ಠ ಒಂದು ವರ್ಷದ ಅನುಭವ ಉಳ್ಳವರಿಗೆ ಆದ್ಯತೆ ನೀಡಲಾಗುವುದು ಅಥವಾ ಎಂ.ಎಸ್.ಸಿ. ಇನ್ ಲೈಫ್ ಸೈನ್ಸ್ ಅಥವಾ ಎಂ.ಎಸ್.ಸಿ. ಜೊತೆಗೆ ಎಂ.ಪಿ.ಹೆಚ್‌ನಲ್ಲಿ 2 ವರ್ಷದ ಅನುಭವ ಉಳ್ಳವರಿಗೆ ಆದ್ಯತೆ ನೀಡಲಾಗುವುದು.

ಆಸಕ್ತರು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ ಎನ್.ಸಿ.ಡಿ. ಘಟಕ, ಮೆಗ್ಗಾನ್ ಆಸ್ಪತ್ರೆ ಆವರಣ, ತುಂಗಾ ವಿದ್ಯಾರ್ಥಿನಿಯರ ವಸತಿ ನಿಲಯದ ಎದುರು, ಶಿವಮೊಗ್ಗ ಇಲ್ಲಿ ನ.20 ರಂದು ಬೆಳಗ್ಗೆ 10.30 ರಿಂದ
ನಡೆಯುವ ನೇರ ಸಂದರ್ಶನಕ್ಕೆ ದಾಖಲೆಗಳ ಮೂಲಪತ್ರಿ ಮತ್ತು ಛಾಯಾಪ್ರತಿಗಳೊಂದಿಗೆ ಹಾಜರಾಗುವಂತೆ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಈ ನೇಮಕಾತಿಯು ಎನ್.ಹೆಚ್.ಎಂ ನಿಯಮಾವಳಿ, ಷರತ್ತು ಮತ್ತು ನಿಬಂಧನೆಗಳಿಗೆ ಮತ್ತು ಆಯ್ಕೆ ಸಮಿತಿ ತೀರ್ಮಾನಕ್ಕೆ ಒಳಪಟ್ಟಿರುತ್ತದೆ.

ಎಂ.ಬಿ.ಬಿ.ಎಸ್. ವೈದ್ಯರಿಗೆ ವಿಶೇಷ ಸೂಚನೆ : ಎನ್.ಸಿ.ಸಿ. ಕ್ಲಿನಿಕ್ ವೈದ್ಯಾಧಿಕಾರಿಗಳ ಹುದ್ದೆ ಖಾಲಿ ಇದ್ದಲ್ಲಿ ಪ್ರತೀ ತಿಂಗಳ 3ನೇ ಸೋಮವಾರದಂದು ವೈದ್ಯರ ಮತ್ತು ತಜ್ಞ ವೈದ್ಯರ ಹುದ್ದೆಗೆ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕೆಲಸದ ವೇಳೆಯಲ್ಲಿ ಕಚೇರಿಯನ್ನು ಸಂಪರ್ಕಿಸುವುದು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment