Home ಕ್ರೈಂ ನ್ಯೂಸ್ ‘ಕಲ್ಮಾ’ ಓದಿದವರ ಬಿಟ್ಟಿದ್ದ ಪಾಕ್ ಉಗ್ರರು: ಪಹಲ್ಗಾಮ್ ಉಗ್ರರ ದಾಳಿ ಬಗ್ಗೆ ಎನ್ ಐಎ ಚಾರ್ಜ್‌ಶೀಟ್‌ ನಲ್ಲಿ ಮತ್ತಷ್ಟು ಸ್ಫೋಟಕ ವಿಚಾರ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

‘ಕಲ್ಮಾ’ ಓದಿದವರ ಬಿಟ್ಟಿದ್ದ ಪಾಕ್ ಉಗ್ರರು: ಪಹಲ್ಗಾಮ್ ಉಗ್ರರ ದಾಳಿ ಬಗ್ಗೆ ಎನ್ ಐಎ ಚಾರ್ಜ್‌ಶೀಟ್‌ ನಲ್ಲಿ ಮತ್ತಷ್ಟು ಸ್ಫೋಟಕ ವಿಚಾರ!

Share
ಪಹಲ್ಗಾಮ್
Share

ನವದೆಹಲಿ: ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ನಡೆದ ಭೀಕರ ಪ್ರವಾಸಿಗರ ಮೇಲಿನ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬುಧವಾರ ಕೋರ್ಟ್‌ಗೆ ದೋಷಾರೋಪ ಪಟ್ಟಿ (Chargesheet) ಸಲ್ಲಿಸಿದೆ. ಈ ಚಾರ್ಜ್‌ಶೀಟ್‌ನಲ್ಲಿ ದಾಳಿಯ ಹಿಂದಿನ ಭಯಾನಕ ಸತ್ಯಗಳು ಹಾಗೂ ಪಾಕಿಸ್ತಾನದ ಸಂಚು ಬಹಿರಂಗಗೊಂಡಿದೆ.

ದಾಳಿಯ ಸಂದರ್ಭದಲ್ಲಿ ಬೈಸರನ್ ಕಣಿವೆಯಲ್ಲಿದ್ದ ಪ್ರವಾಸಿಗರು ನೀಡಿದ್ದ ಹೇಳಿಕೆಯನ್ನು ಎನ್‌ಐಎ ಈಗ ಅಧಿಕೃತವಾಗಿ ದೃಢಪಡಿಸಿದೆ. ಗುರುತು ಆಧಾರಿತ (Identity-based) ಹತ್ಯೆಗಳನ್ನು ಮಾಡಿದ್ದ ಉಗ್ರರು, ಕೇವಲ ‘ಕಲ್ಮಾ’ ಪಠಿಸಲು ಸಾಧ್ಯವಾದವರನ್ನು ಮಾತ್ರ ಜೀವಂತವಾಗಿ ಬಿಟ್ಟು ಉಳಿದವರನ್ನು ಗುರಿಯಾಗಿಸಿ ಕಟುಕತನ ಮೆರೆದಿದ್ದರು ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ದಾಳಿಯ ವೇಳೆ ಉಗ್ರರು ಬಲಿಪಶುವೊಬ್ಬರ ಪತ್ನಿಯ ಬಳಿ, “ಹೋಗಿ ನಿಮ್ಮ ಮೋಡಿಗೆ ಈ ಬಗ್ಗೆ ತಿಳಿಸು” ಎಂದು ಹೇಳಿ ಅಟ್ಟಹಾಸಗೈದಿದ್ದರು. ಅಲ್ಲದೆ, ಜಿಹಾದ್ ಹಾಗೂ ಕಾಶ್ಮೀರದ ಸ್ವಾತಂತ್ರ್ಯದ ಬಗ್ಗೆ ಘೋಷಣೆಗಳನ್ನು ಕೂಗಿದ್ದರು.

ರಚಿಸಲಾಗಿತ್ತು ‘ಕಿಲ್ ಜೋನ್’:

ಎನ್‌ಐಎ ತನಿಖೆಯ ಪ್ರಕಾರ, ಲಷ್ಕರ್-ಎ-ತೈಬಾ (LeT) ಮತ್ತು ಅದರ ಮುಖವಾಡದಂತಿರುವ ‘ದಿ ರೆಸಿಸ್ಟೆನ್ಸ್ ಫ್ರಂಟ್’ (TRF) ಸಂಘಟನೆಯ ಉಗ್ರರು ಪ್ರವಾಸಿಗರನ್ನು ಸಿಲುಕಿಸಲು ಬೈಸರನ್ ಪಾರ್ಕ್‌ನ ಮಧ್ಯದ ಹುಲ್ಲುಗಾವಲನ್ನು ಆಯ್ದುಕೊಂಡು ‘ಕಿಲ್ ಜೋನ್’ (Kill Zone) ನಿರ್ಮಿಸಿದ್ದರು.

ಉಗ್ರರಾದ ಫೈಸಲ್ ಜಾಟ್, ಹಬೀಬ್ ತಾಹಿರ್ ಮತ್ತು ಅಫ್ಘಾನಿ ಭಾಯ್ ಸುತ್ತಮುತ್ತಲಿನ ಬೇಲಿಯನ್ನು ದಾಟಿ ಒಳನುಸುಳಿ, ಪ್ರವಾಸಿಗರು ತಪ್ಪಿಸಿಕೊಳ್ಳದಂತೆ ವಿವಿಧ ದಿಕ್ಕುಗಳಿಂದ ಏಕಕಾಲದಲ್ಲಿ ಅಟೋಮ್ಯಾಟಿಕ್ ರೈಫಲ್‌ಗಳಿಂದ ಗುಂಡಿನ ಮಳೆಗರೆದಿದ್ದರು.

ಪಾಕಿಸ್ತಾನದ ಹ್ಯಾಂಡ್ಲರ್ ಲಿಂಕ್:

ಈ ಇಡೀ ದಾಳಿಯ ಮಾಸ್ಟರ್‌ಮೈಂಡ್ ಪಾಕಿಸ್ತಾನ ಮೂಲದ ಲಷ್ಕರ್ ಕಮಾಂಡರ್ ಸಾಜಿದ್ ಸೈಫುಲ್ಲಾ ಜಾಟ್ ಅಲಿಯಾಸ್ ‘ಅಲಿ ಭಾಯ್’ ಆಗಿದ್ದಾನೆ. ಈತ ಏಪ್ರಿಲ್ 15 ಮತ್ತು 16 ರಂದೇ ಆಲ್ಪೈನ್ ಕ್ವೆಸ್ಟ್ (Alpine Quest) ನ್ಯಾವಿಗೇಷನ್ ಆ್ಯಪ್ ಮೂಲಕ ಬೈಸರನ್ ಕಣಿವೆಯ ನಕ್ಷೆ ಹಾಗೂ ನಿರ್ದೇಶನಗಳನ್ನು ಉಗ್ರರ ಮೊಬೈಲ್‌ಗೆ ಕಳುಹಿಸಿಕೊಟ್ಟಿದ್ದ.

ಉಗ್ರರು ಭದ್ರತಾ ಏಜೆನ್ಸಿಗಳ ಕಣ್ಣು ತಪ್ಪಿಸಲು ಕಟ್ಟುನಿಟ್ಟಾದ ‘ಏರ್‌ಪ್ಲೇನ್ ಮೋಡ್’ ನಿಯಮವನ್ನು ಪಾಲಿಸುತ್ತಿದ್ದರು ಎಂಬ ತಾಂತ್ರಿಕ ಸಾಕ್ಷ್ಯಗಳೂ ಲಭ್ಯವಾಗಿವೆ. ಈ ದಾಳಿಗೂ ಮುನ್ನ ಗಗನ್‌ಗೀರ್‌ನಲ್ಲಿ ನಡೆದಿದ್ದ ಎಪಿಸಿಒ (APCO) ಉಗ್ರರ ದಾಳಿಗೂ ಲಿಂಕ್ ಇದ್ದು, ಎರಡೂ ಕಡೆ ಒಂದೇ ಎಂ-4 ಕಾರ್ಬೈನ್ ರೈಫಲ್ ಮತ್ತು ಗೋಪ್ರೊ (GoPro) ಕ್ಯಾಮೆರಾವನ್ನು ಬಳಸಲಾಗಿತ್ತು ಎಂದು ಎನ್‌ಐಎ ಸ್ಪಷ್ಟಪಡಿಸಿದೆ.

Share

Leave a comment

Leave a Reply

Your email address will not be published. Required fields are marked *

Related Articles